Dr.CS   (Avani 🦋)
159 Followers · 65 Following

Joined 23 June 2020


Joined 23 June 2020
23 MAY 2024 AT 10:40

ಬುದ್ಧನಾಗಲು ಹೊರಟೆ
ಮನಸ್ಸು ಬದ್ಧತೆಯ ಬೇಡಿತು
ಅಷ್ಟು ಸುಲಭವಾ?
ಮನಸ್ಸು ನಿಗ್ರಹಿಸುವುದು
ದಂಡೆತ್ತಿ ಬರುವ ಆಸೆಗಳ
ಮೇಲೆ ದಿಗ್ವಿಜಯ ಸಾಧಿಸಿ
ತನ್ನ ತಾ ಗೆಲುವುದೂ
ಕೈ ಮೀರಿದ ಪ್ರಯತ್ನ
ಬರಿ ಪ್ರಯತ್ನ.......
ಒಬ್ಬ ಶತ್ರುವನ್ನು ಬಡಿದರೆ
ಮತ್ತೊಬ್ಬ ಜಾಗ್ರತನಾಗಿ ಸಿದ್ದನಾಗುತ್ತಾನೆ
ಕಾಮ, ಕ್ರೋಧ ಮದ, ಮತ್ಸರ
ಇವರಿಗಿಂತ ಕಟು ಜಿದ್ದಿನ
ಶತ್ರುಗಳು ಬೇಕೇ.....
ಮುತ್ತಿಗೆ ಹಾಕಿ
ಅಬೇಧ್ಯ ಚಕ್ರವ್ಯೂಹದಲಿ ಸಿಲುಕಿಸಿ
ಕೇಕೆ ಹೊಡೆದು
ಬೊಬ್ಬೆ ಹೊಡೆದು ನಗುವ
ನಮ್ಮ ಮನಸಿನ ಭ್ರೂಣದಲ್ಲಿ
ಅಣು-ಪರಮಾಣುವಾಗಿ ಸ್ಪೋಟವಾಗುವ
ಧ್ವಂಸಾತ್ಮಕ ಕುಡುಗಳು ಕಿಡಿಗಳು
ಇವರಿಗಿಂತ ಶತ್ರುಗಳು ಬೇಕೇ.....
ಬುದ್ಧನಾಗುವುದು ಅಷ್ಟು ಸುಲಭವೆ
ಆಸೆಗಳ ಕಡಲ ಗರ್ಭವ ಸೀಳಿ
ಈಸಬೇಕು ಸುದೀರ್ಘಕಾಲ
ಶಾಂತಿಯ ಸಾಗರದಲ್ಲಿ ಮೀಯಬೇಕು
ಕಣ್ಣ ಬೊಗಸೆಯಲ್ಲಿ ಪ್ರೀತಿ ಚೆಲ್ಲಬೇಕು
ಮುಕ್ತಿಯ ಪಥದಲ್ಲಿ ಸಾಗಬೇಕೆಂದರೆ
ಮೊದಲು ತಾ ಮುಕ್ತ ನಾಗಬೇಕು
ನಿನ್ನ ನೀ ಗೆಲ್ಲಬೇಕು
ಸುಲಭವಲ್ಲ ಬಿಡು..... ಆದರೂ
ಬಿಡದಿರು ಪ್ರಯತ್ನ ನಿರಂತರ
ಗೆಲುವೇ ಒಂದು ದಿನ
ಅವನ ಹೆಜ್ಜೆ ಗುರುತೇ ಸಾಕು
ಆ ದಾರಿಯಲ್ಲಿ ನಡೆ
ಏಕೆಂದರೆ ಅವ ಅವನೇ
ಅವನೊಬ್ಬನೇ
ಮತ್ತಾರು ಅಗಲಾರಾರು ಬುದ್ಧ

ಅವನಿ 🦋








-


2 APR 2024 AT 14:58

ನೀ ಬಂದಾದ ಮೇಲೆ
ನಾ ಯಾರೆಂದೇ ಮರೆತು ಹೋಯಿತು 🦋

-


25 MAR 2024 AT 9:04

Most beautiful
colour in this universe is
" love" which never fade

Avani🦋

-


8 JAN 2024 AT 19:45

ಈ ಸಮಯ
ಈ ಕ್ಷಣ
ಮನಸ್ಸಿನ ಮಿಂಚು ಹುಳುಗಳು
ಹೋರಟಿವೆ ಎಲ್ಲೂ ನಿಲ್ಲದೆ
ಬಿರುಸು ಉಸಿರಿನ ಶಾಖದ ವೇಗದಲ್ಲಿ
ನಿನ್ನ ಓಣಿಯ ದಾರಿ ಹಿಡಿದು
ಹೃದಯದ ಅಂಗಳವನು
ಬೆಳಗಲು 🦋

Avani🦋

-


23 AUG 2023 AT 9:02

ಕನಸ್ಸು ಮೈಮುರಿದು
ಹಗಲನು ತಬ್ಬಿ ಮುದ್ದಿಸುವ
ಮುಂಜಾವು ನಕ್ಕಿ ಕೈಬೀಸಿ
ಕರಿಯುತಿದೆ ಬಾಚಿ ತುಂಬಿ ಕೊಳ್ಳುವ
ಆಸೆಯ ಭಾವವನುl🦋

-


22 AUG 2023 AT 23:43

ಪದಗಳ ಅಲಂಕಾರಕ್ಕೆ
ಶರಣಾಗಿದೆ ಕವಿತೆ.... 🦋

-


21 AUG 2023 AT 9:45

ಹಲವು ಉದ್ದೇಶ ದಾರಿ ಒಂದೆ
ಹಲವು ನೋಟ ದೃಷ್ಟಿ ಒಂದೆ
ಹಲವು ಜನರು ಸೃಷ್ಟಿ ಒಂದೆ
ಹಲವು ಜಾತಿ ಹಲವು ಧರ್ಮ
ದೇಶ ಒಂದೆ 🦋


-


20 AUG 2023 AT 23:52

ಸುಳ್ಳು ಮೈ ಕೊಡವಿ ದಿಟ್ಟ ಹೆಜ್ಜೆ ಇಟ್ಟರೆ
ಸತ್ಯದ ದಾರಿಗೆ ಸಹಸ್ರ ನಕ್ಷತ್ರಗಳು 🦋

-


13 AUG 2022 AT 7:23

ಪ್ರೀತಿ ಹೃದಯದ ಕಪಾಟಿನಲ್ಲಿ ಬಚ್ಚಿಟ್ಟ ಧೂಳಿಡಿದ ಪುಸ್ತಕವಲ್ಲ
ಅದು ಎಂದೂ ಮಾಸದ ತಾಜಾ ಹೂವಿನ ಸುಗಂಧ, ಕೋಟಿ ಭಾವಗಳ ಬೃಹತ್ ಗ್ರಂಥ🦋

-


22 OCT 2021 AT 17:16

फूलों से प्यार सब को होता है।
कभी काटों से भी दिल लगाकर देखो
जो तड़प जागते हैं, किसी की याद दिलाते हैं
किसी के होने का एहसास जगते हैं। 🦋

-


Fetching Dr.CS Quotes