ಅಂದು ಬ್ರಿಟಿಷರೇ ಭಾರತ ಬಿಟ್ಟು ತೊಲಗಿ ಎಂದು ಹೋರಾಡಿ ಸ್ವಾತಂತ್ರ್ಯ ಗಿಟ್ಟಿಸಿಕೊಂಡ ಭಾರತ ಇಂದು ನಿಜವಾಗಲೂ ಸಮಾನ ಸ್ವತಂತ್ರ ಪಡೆದಿದೆಯಾ..?Curreption ಅನ್ನೇ ಹೊದ್ದು ಮಲಗಿರುವ ರಾಜಕಾರಣಿಗಳೇ ತುಂಬಿರುವ ನಮ್ಮ ದೇಶದಲ್ಲಿ ಇನ್ನು 100ವರ್ಷ ಹೋದರೂ ನಿಜವಾದ ಸ್ವತಂತ್ರ ಸಿಗಲು ಸಾಧ್ಯವಿಲ್ಲ.. ಬರೇ ಜಾತಿ ಧರ್ಮ ಅನ್ನುತ್ತಾ ಕತ್ತಿ ಸುತ್ತೆ ಹಿಡಿದು ಅನಕ್ಷರಸ್ತರಂತೆ ಬೀದಿಯಲ್ಲಿ ಜಗಳ ಆಡುವ ಇಂದಿನ ಪರಿಸ್ಥಿತಿಗೆ ರಾಜಕಾರಣಿಗಳ ನಾಟಕೀಯ ಮಾತುಗಳನ್ನು ನಂಬುವ ಜನರೇ ಕಾರಣ. ಮೊದಲು ದೇಶದ ಅಭಿವೃದ್ಧಿ, ಸ್ವಚ್ಛತೆ, ಕಾರ್ಯಕ್ಷಮತೆಯನ್ನು ಪ್ರಶ್ನೆ ಮಾಡುವ ಬುದ್ದಿ ಜನರಿಗೆ ಬಂದಾಗ ಮಾತ್ರ ನಿಜವಾದ ಸ್ವಾತಂತ್ರ್ಯ ಸಿಗಲು ಸಾಧ್ಯ ನನ್ನ ಪ್ರಕಾರ ನನ್ನ ದೇಶ ಈಗಲೂ ನಮ್ಮ ರಾಜಕಾರಣಿಗಳ ಮೋಸದ ಜೀತದಲ್ಲಿಯೇ ಬದುಕುತ್ತಿದೆ ಅನ್ನುವ ಭಾವನೆ ಇದೆ.ಬ್ರಿಟಿಷರು ಕಟ್ಟಿದ ಎಷ್ಟೋ ಕಟ್ಟಡ ಈಗಲೂ ಇದೆ. ನಮ್ಮವರು ನಿನ್ನೆ ಮೊನ್ನೆ ಕಟ್ಟಿದ ಸೇತುವೆ,ಕಟ್ಟಡ ಮಳೆಗೆ ಸೋರುತ್ತಿದೆ, ಬೀಳುತ್ತಿದೆ ಹಾಗಾದರೆ ನಿಜವಾದ ಡೋಂಗಿಗಳು ಯಾರು?
-
ನಾನು ಬರಹಗಾರ್ತಿಯಲ್ಲ ಬರಹ ಬರೆಯುವ ಹಂಬಲ ಅಷ್ಟೇ..ನನ್ನೆಲ್ಲಾ ಭಾವನ... read more
ಭೋರ್ಗರೆದು ಬಿಡು ಮನಸೇ....
ಮನಸದು ಶಾಂತವಾಗಿ ವಿಶ್ರಮಿಸಲಿ
ಸದ್ಯಕ್ಕೆ ಕಣ್ಣಾಲಿಗಳು ತುಂಬಿ ಹರಿದು ಬಿಡಲಿ
ಅದೆಷ್ಟು ನೋವಿನ ಅಲೆಗಳನು
ಮನದಾಳದಲಿ ಮುಚ್ಚಿಡುವೆ
ಬಿರುಕು ಬಿಟ್ಟರೆ ಅಲ್ಲೊಂದು ಮಾನಸಿಕ ಸುನಾಮಿ ಚಿಮ್ಮಿದರೆ ಅನರ್ಥಕ್ಕೆ ಸುಖಾ ಸುಮ್ಮನೆ ಅಹ್ವಾನ ಕೊಟ್ಟಂತೆ ಆಗುವುದು ತಾನೇ..?-
ಚಿತ್ರಿಸುವುದಿದ್ದರೆ ನಿಮ್ಮ ನಿಮ್ಮ ಬದುಕನ್ನೇ ನೀವು ಚಿತ್ರಿಸಿಕೊಳ್ಳಿ
ಬದುಕು ಸುಂದರಗೊಳ್ಳುತ್ತ ಸಾಗಿದಂತೆ ನಮ್ಮೊಳಗು ಒಬ್ಬ ಕಲೆಗಾರನಿರುವ ಸತ್ಯದ ಅನಾವರಣವಾದೀತು
-
ರಿಕ್ವೆಸ್ಟ್ ಅಲ್ಲ order ಅಂತಾನೂ ತಿಳಿದುಕೊಂಡ್ರೆ ಒಳ್ಳೇದೇ ಸ್ವಲ್ಪ ಓದ್ರಿ ಹೊತ್ತು ಮಾಡಿಕೊಂಡು 😂👇👇
-
40-3=37
ನಾನು yq ಅಲ್ಲಿ ಇಲ್ಲದೇ ಹಲವು ಟೈಮ್ ಆಗಿದೆ.. ನಾನಿಲ್ಲ ಇಲ್ಲಿ ಅಂತ ಕನ್ಫರ್ಮ್ ಮಾಡಿಕೊಂಡು ಯಾರದು ಮೂರು ಮೂರ್ಖರು ನನಗೆ ಕೊಟ್ಟ ಮೂರು testi ಡಿಲೀಟ್ ಮಾಡಿ ತೀರಿಹೋದದ್ದು.. ಮೂರು testi ನಿಮ್ಮ ತಿಥಿಗೆ ಅಂಬಡೆ ಕಟ್ಲಿಕ್ಕೆ pack ಮಾಡ್ಲಿಕ್ಕೆ ಬೇಕಂತ ಡಿಲೀಟ್ ಮಾಡಿದ್ರ.. 🙄ಆ ಕರ್ಮಕ್ಕೆ ಡಿಲೀಟ್ ಮಾಡುವುದಾದ್ರೆ testi ಕೊಡುವುದು ಯಾಕೆ ಮರ್ರೆ ನಿಮ್ಮತ್ರ ಯಾರಾದ್ರೂ testi ಕೊಡಿ ಅಂತ ಭಿಕ್ಷೆ ಬೇಡಿದ್ದಾರಾ ನಿಮ್ಮಗಳ ಈ ಅಹಂಕಾರಕ್ಕೆ yq ನವರು ಬರೆಲಿಕ್ಕೂ ಕೂಡ ಹಣ ಚಾರ್ಜ್ ಮಾಡಿದ್ದು ಒಳ್ಳೇದಾಗ್ಬೇಕು ಹಾಗೇ ಆಗ್ಬೇಕು..testi ಡಿಲೀಟ್ ಮಾಡಿದವರಿಗೆ ಓಂ ಶಾಂತಿ ಆತ್ಮಕ್ಕೆ ಸತ್ರು ಸದ್ಗತಿ ಸಿಗದೇ ಇರ್ಲಿ..ಸ್ವಾಮಿ ದೇವರೇ..ಅಲ್ಲ ನಿಮ್ಮ testi ಇಟ್ಟುಕೊಂಡು ನನಗೆಂತ ಸೆಂಟ್ರಲ್ ಗವರ್ನಮೆಂಟ್ ಕೆಲಸ ಸಿಗ್ತದ.. ಏನೂ ಪ್ರಯೋಜನ ಇಲ್ಲದ testi ಯನ್ನೇ ಡಿಲೀಟ್ ಮಾಡಿದ ನೀವು.. ನಾಳೆ ದಿನ ಯಾರಿಗಾದ್ರೂ ಊಟ ಕೊಟ್ಟು ಆಮೇಲೆ ವಾಂತಿ ಮಾಡಿ ಆದ್ರೂ ನನ್ನ ಊಟ ವಾಪಸ್ ಕೊಡಿ ಅಂತ ಕೇಳಲು ಬಹುದು ನಿಮ್ಮಂಥ ಜನಗಳು ಶೀ ಶೀ ಶೀ ಎಂಥ ಅವಸ್ಥೆ ಮರ್ರೆ.. ಇನ್ನೂ ಯಾರಿಗೆಲ್ಲ ಡಿಲೀಟ್ ಮಾಡ್ಲಿಕ್ಕಿದೆ ಮಾಡಿ ಹೋಗಿ ಮರ್ರೆ ಏನ್ ಇವರ testiyindale ನಮ್ಮಾಚೆ ಸೂರ್ಯ ಮೂಡುವುದು.. ಇಲ್ಲದಿದ್ರೆ ನಮಗೆ ಕತ್ತಲೆಯೇ ಇರುತ್ತೆ ಅಲಾ..-
ನಿನ್ನ ನೆನಪಿನ ಅಲೆಯಲಿ
ಏರಿಳಿತವ ಕಂಡ ಅಸಹಾಯಕ
ಅನಾಮಿಕ ನಾನು ಗೆಳತಿ
ನಿನ್ನ ಗುಂಗಿನದ್ದೇ ವ್ಯಾಸಂಗ ಪದವಿಯಲಿ
ನಾನೀಗ ಪದವೀಧರ ಮನದೊಡತಿ
ನನ್ನೀ ಅರೆಹುಚ್ಚುತನವ ವಾಸಿ
ಮಾಡುವ ಅರವಳಿಕೆ
ನೀನಾಗಿಬಿಡು ನನ್ನೊಲವ ಅಭಿನೇತ್ರಿ-
ಕ್ಷಮಿಸುತ್ತಾ ಹೋದರೆ ತಪ್ಪು ಮಾಡುವ ಕೆಟ್ಟ ಚಟ ಹಾಗೂ ಎಷ್ಟೇ ತಪ್ಪು ಮಾಡಿದರೂ ಕ್ಷಮಿಸಿ ಬಿಡ್ತಾರೆ ಅಲ್ವಾ ಅನ್ನುವ ಮೊಂಡು ಹಠ ಮುಂದುವರೆಯುತ್ತಲೇ ಸಾಗುತ್ತದೆ ಒಂದು ಮೂಲದ ಪ್ರಕಾರ ತಪ್ಪು ಮಾಡುವ ತಪ್ಪಿತಸ್ಥನಿಗಿಂತಲೂ ಅವರ ತಪ್ಪನ್ನು ದೊಡ್ಡ ಮನಸು ಮಾಡಿ ಕ್ಷಮಿಸಿ ಬಿಡುವವರೇ ಮಹಾನ್ ಅಪರಾಧಿಗಳಾಗುತ್ತಾರಷ್ಟೇ
ಪ್ರಪಂಚದಲ್ಲಿ ಅದೆಷ್ಟೋ ಜನರು ತಮ್ಮವರ ತಪ್ಪನ್ನು ಕ್ಷಮಿಸಿ ಕ್ಷಮಿಸಿಯೇ ಕ್ಷಮಿಸಿದ ಅದೆಷ್ಟೋ ಅಮಾಯಕ ಜನರ ಬದುಕು ಬಂಗಾರ ಅಲ್ಲ ಕಾಗೆ ಬಂಗಾರ ಕೂಡ ಆಗದೇ ಕಲ್ಲಿದ್ದಲು ಆಗಿ ಹೋಗಿದೆ ಇಂಥ ಡೈಲಾಗ್ ಎಲ್ಲಾ ಈಗಿನ ದಪ್ಪ ಚರ್ಮ ಹಾಗೂ ಕೆಟ್ಟ ಗುಣಗಳನ್ನು ತುಂಬಿಕೊಂಡ ಈಗಿನ ಆಧುನಿಕ ಜನರಿಗೆ ಸೂಟ್ ಆಗಲ್ಲ ಕಾಮಿಡಿ ಅನಿಸುತ್ತೆ
-
ದೇವರೆಂದರೆ ಬರೀ ಒಂದು ಶಕ್ತಿಯಲ್ಲ..
ಮನುಷ್ಯನ ಜೀವನದ ಪ್ರತೀ
ನೋವು ನಲಿವುಗಳನ್ನು ಆಲಿಸಿ,
ವೀಕ್ಷಿಸಿ,ಅಳೆದು ತೂಗಿ ಕ್ಲಪ್ತ ಸಮಯಕ್ಕೆ
ಏನನ್ನು ಮನುಷ್ಯರಿಗೆ ತಲುಪಿಸಬೇಕೋ
ಅದನ್ನು ತಲುಪಿಸುವ ಒಬ್ಬ ಸಮಯಕ್ಕೆ
ಗೌರವ ಕೊಡುವ ಪರಿಚಾರಕ,
ಸಮಯ ಪಾಲಕನೇ ಪರಮಾತ್ಮ-
ಸಂತೋಷ, ನೆಮ್ಮದಿಯನ್ನೆಲ್ಲಾ ಜಗಕೆ ಹರಡಿ
ನೋವನ್ನಷ್ಟೇ ತನ್ನ ತೆಕ್ಕೆಗೆ ಹಾಕಿಕೊಂಡು ಜಗವ ಸಲಹಿದ ಕ್ರಿಸ್ತನಿಗಿಂದು ಜನುಮ ದಿನ..
-
ದಾನ ಮಾಡಿ ಧರ್ಮ ಮಾಡಿ ಅಂತ ಎಲ್ಲರೂ ಲೆಕ್ಚರ್ ಕೊಡ್ತಾರೆ.. ಅದೆಲ್ಲ ಹೇಳುವುದಕ್ಕೆ ಕೇಳುವುದಕ್ಕೆ ಅಷ್ಟೇ ಚಂದ.. ಅಷ್ಟಿದ್ರೆ ಹಾಗೇ ದಾನ ಧರ್ಮ ಮಾಡಿ ಅಂತ ಹೇಳುವವರು ಅವರ ಆಸ್ತಿ ಸಂಪತ್ತು ದಾನ ಮಾಡ್ಲಿ ನೋಡೋಣ ಮಾಡಲ್ಲ ಯಾಕೆ ಅಂದ್ರೆ ಎಮೋಷನಲ್ ಡೈಲಾಗ್ ಇನ್ನೊಬ್ಬರಿಗೆ teach ಮಾಡ್ಲಿಕ್ಕೆ ಅಷ್ಟೇ ಉಪಯೋಗ ಮಾಡ್ತಾರೆ ಈ ಜನಗಳು.. ತಮ್ಮ ಆಸ್ತಿ ಹಂಚಿಕೆ ಅಂತ ಬಂದಾಗ ಬೇಕಿದ್ರೆ ತಮ್ಮವರನ್ನೇ ಕೊಲೆ ಮಾಡ್ಲಿಕ್ಕೂ ಹೇಸಲ್ಲ ಹೊರತು ಧರ್ಮಕ್ಕೆ ಯಾವುದನ್ನು ತಮ್ಮವರಿಗೇ ಬಿಟ್ಟು ಕೊಡಲ್ಲ ಇನ್ನು ದಾನ ಧರ್ಮ ಮಾಡ್ತಾರಾ.. ಇದು ನಮ್ಮ ದೇಶ, ನಮ್ಮ ಜನ ಹಾಗೂ ಜನರ ಮನಸ್ಥಿತಿ.. ಬಾಯಲ್ಲಿ ಬೆಣ್ಣೆ ಮನಸಲ್ಲಿ ಪೂರ್ತಿ ಕೊಳೆ ತುಂಬಿಕೊಂಡಿರುತ್ತಾರೆ..ಇದೇ ಪೂರ್ತಿ ಸತ್ಯ.. ಮನಸಿನಲ್ಲಿರುವುದು ಜೆರಾಕ್ಸ್ ತೆಗೆಯುವ ಒಂದು ಮೆಷಿನ್ ಏನಾದ್ರು ಕಂಡು ಹಿಡಿದ್ರೆ ರಿಯಾಲಿಟಿಯಲ್ಲಿ ಒಳ್ಳೆಯವರ ಶೇಕಡಾವಾರು 0% ಇರುತ್ತೆ.. ಇದೇ ಸತ್ಯ 😂
-