ಸಖಿ,
ಹೀಗೇಯೇ
ರಾತ್ರಿಪೂರ ಕವಿತೆಗೆ ಕವಿತೆಯ
ಪೋಣಿಸುತ್ತಾ
ರೂಪ ರಸ ಗಂಧಗಳ
ಮೇಳೈಸುತ್ತಾ
ನಿದ್ರೆಗೆಡುವ ಹನಿ ಮದಿರೆ
ಗುಟುಕಿಸುತ್ತಾ
ಹೊರಗಿನ ಮೌನ ಒಳಗಿಳಿವನಕ
ಎದೆಯ ಮಾತೆಲ್ಲಾ ಹಾಡಗಲಿ
ಖಾಲಿಯಾಗದ ಹೊರತು
ಹೊಸತಕ್ಕೆ ತಾವೆಲ್ಲಿ!-
A passionate Teacher.
Facilitator. Public speaker. Writer.
Art. Music. L... read more
ಸಖಿ
ಬೇಲಿಯಿಲ್ಲದ ಭೂಮಿ ಮೇಲೆ
ಕಿಟಕಿ ಬಾಗಿಲು ಮುಚ್ಚಿ
ತಾರಸಿಗೊಂದು ಗವಾಕ್ಷಿಯಿಟ್ಟು
ಬೆಕಳಿಗೆಂದು ಕಾದು ಕೂತವರು,
ತಮ್ಮವರ ಕಂಡರೆ ಒಂದಿಷ್ಟೂ
ಮುಗುಳ್ನದೆ ಹೋದರು.
ಎದೆಯಗತ್ತಲಿಗೆಲ್ಲಿ ಗವಾಕ್ಷಿ?
ಸಂಕ್ರಮಣದ ಸೂರ್ಯ
ನುಸುಳಬಲ್ಲನೆ ಎದೆಯ?
-
ಸಖಿ
ಬೇಲಿಯಿಲ್ಲದ ಭೂಮಿ ಮೇಲೆ
ಕಿಟಕಿ ಬಾಗಿಲು ಮುಚ್ಚಿ
ತಾರಸಿಗೊಂದು ಗವಾಕ್ಷಿಯಿಟ್ಟು
ಬೆಕಳಿಗೆಂದು ಕಾದು ಕೂತವರು,
ತಮ್ಮವರ ಕಂಡರೆ ಒಂದಿಷ್ಟೂ
ಮುಗುಳ್ನದೆ ಹೋದರು.
ಎದೆಯಗತ್ತಲಿಗೆಲ್ಲಿ ಗವಾಕ್ಷಿ?
ಸಂಕ್ರಮಣದ ಸೂರ್ಯ
ನುಸುಳಬಲ್ಲನೆ ಎದೆಯ?
-
ಸಖಿ,
ಈ ಜಗತ್ತು
ಚಟ್ಟಕ್ಕೆ ಸುತ್ತಿದಷ್ಟು ಹೂ
ತೊಟ್ಟಿಲಿಗೆ ಕಟ್ಟಲಿಲ್ಲ.
ಸಾವನ್ನೇ ವಿಜೃಂಭಿಸುವವರ
ನಡುವೆ
ಬಾ ಒಂದು ಹೂದೋಟ ಮಾಡೋಣ.-
ಮೂಳೆ ಮೂಳೆಯನ್ನೂ ಡವಗುಟ್ಟಿಸಿ
ಮುದುಡಿ ಮೂಲೆ ಹಿಡಿವಂತೆ ಮಾಡುವ
ಏಕಾಂತಕ್ಕೆ ತೊಡೆ ತಟ್ಟಿ ,
ಕಾಫಿ ಹಬೆಯಾಡಿಸಿ
ಎರಡು ಪುಟ ತಿರುಗಿಸಿ
ಇಷ್ಟದ ಹಾಡು ಗುನುಗಿ
ನಮ್ಮ ಸಹವಾಸವನ್ನ ನಾವೇ
ಸಹಿಸಿಕೊಳ್ಳುವ
ತಾಕತ್ತಿಗೆ -
ಜೀವಂತಿಕೆ ಎಂಬ ಹೆಸರು.-
ಬದುಕೆ ಸ್ವಲ್ಪ
ಮೆಲ್ಲತೆರೆ
ಮಾಯಪೆಟ್ಟಿಗೆ .
ನಿನ್ನ ಜಾದುಗಳ
ಶುರುವಾತಿನ ಸುಳಿವಿಗೂ
ಬೆನ್ನ ಮೂಳೆನಡುಗುತ್ತದೆ.-
ಬದುಕೆ ಸ್ವಲ್ಪ
ಮೆಲ್ಲತೆರೆ
ಮಾಯಪೆಟ್ಟಿಗೆ .
ನಿನ್ನ ಜಾದುಗಳ
ಶುರುವಾತಿನ ಸುಳಿವಿಗೂ
ಬೆನ್ನ ಮೂಳೆನಡುಗುತ್ತದೆ.-
माना था तुम्हें
मेरे हर गम कि
दुवा और दवा।
माफ़ी रहे मेरे
इस बेवक़ूफ़ी के।
दिलीप सहरूद्मन।-