ಅವಶ್ಯಕತೆ ಇದ್ದಾಗ ಎಲ್ಲರಿಗೆ ಎಲ್ಲರೂ ಬೇಕು, ಅವಶ್ಯಕತೆ ಮುಗಿದ ಮೇಲೆ ಯಾರಿಗೆ ಯಾರೂ ಬೇಡ. ಅವಶ್ಯಕತೆ ಇದ್ದಾಗ ಮೂಡೊ ಭಾವನೆಗಳಿಗೆ ಪ್ರೀತಿ ಅನ್ನೋ ನಾಮಕರಣ ಮಾಡಿ, ಅವಶ್ಯಕತೆ ಮುಗಿದ ಮೇಲೆ ಅದರ ಹೆಸರನ್ನ ಆಕರ್ಷಣೆ, ಸ್ನೇಹ ಅಥವಾ ಮತ್ತೊಂದು ಅಂತ ಬದಲಾಯಿಸ್ತಿವಿ. ನಾವು ನಮ್ಮ ಅವಶ್ಯಕತೆಗಳಿಗೆ ಭಾವನೆಗಳನ್ನ ಬೆಳೆಸಿಕೊಳ್ತಿವೆ ವಿನಃ ನೈಜವಾಗಿ ಬೆಳೆದ ಭಾವನೆಗಳಿಗೆ ಬೆಲೆ ಕೊಡಲ್ಲ. ಯಾವುದೇ ಅಪೇಕ್ಷೆ ಇಲ್ಲದೇನೆ ಒಬ್ಬರ ಮೇಲೆ ಮೂಡೊ ಭಾವನೆ ಪ್ರೀತಿನೆ ಹೊರತು ಅವಶ್ಯಕತೆಗೆ ಹುಟ್ಟುವ ಭಾವನೆ ಪ್ರೀತಿಯಾಗೋಕೆ ಯಾವತ್ತು ಸಾಧ್ಯ ಇಲ್ಲ.
- Davala
25 JUL 2019 AT 22:12