ಮತ್ತೆ ಮತ್ತೆ ಓದ ಬೇಕೆನಿಸುವ ನಿನ್ನ ಮನದ ಸಾಲುಗಳು...
ಕೆಲವೊಮ್ಮೆ ಮರಳುಗಾಡಿನ ಮಧ್ಯೆ ಸಿಕ್ಕ ಓಯಸಿಸ್ ನಂತೆ...
ನಿನ್ನ ಮಾತು... ನನ್ನ ಮೌನ...
ನಿನ್ನ ತರಲೇ... ನನ್ನ ಕೋಪ...
ನಿನ್ನ ಹಟ... ನನ್ನ ಮುನಿಸು...
ಪ್ರತಿಯೊಂದು ಭಾವವು ಕಳೆದು ಹೋಗಿಹುದು...
ಮತ್ತೊಮ್ಮೆ ಚಿಗುರಿಸುವ ಆಸೆಯೊಂದು ಮೂಡಿದರೆ
ಅನಂತವಾಗಿರಲೆಂಬ ಆಶೀರ್ವಾದ ನೀಡುವೆಯಾ...!!-
ನೀನಿಲ್ಲದೇ... ಮನಸ್ಸೇಕೋ ಖಾಲಿ ಖಾಲಿ...!!
ಜೊತೆಗಿಲ್ಲದೆಯೂ ಇದ್ದಂತಹ ಭಾವ ಮೂಡಿಸಿದ್ದು
ನೀನೇನಾ ಎನ್ನುವ ಗೊಂದಲ ಬರುವಷ್ಟು
ದೂರವಾಗಿದ್ದೇಕೆ??
ಮತ್ತೊಂದಿಷ್ಟು ಹೆಚ್ಚು ಸಲಿಗೆ ತೋರಲು
ಅಡ್ಡಿಯಿರುವ ಬಂಧವೇನು??
ಮೌನವೇ ಲೇಸೆನಿಸುವಾಗ ಸಾಕೆನಿಸುವಷ್ಟು
ಮಾತಿದ್ದಿದ್ದು ಈಗ ಮೌನಕ್ಕೂ ಬೇಸರವೆನಿಸುವಷ್ಟು
ಬದಲಾವಣೆಯೇಕೆ??
ಹೊಸದೊಂದು ಹೆಸರಿಡುವ ಅನಿಸಿಕೆ ನೀ
ತೋರಿದರೆ, ನಂಟಿಗೆ ಹೆಸರಿನ ಅವಶ್ಯವಿಲ್ಲ ಎಂದಿದ್ದೆ ತಪ್ಪಾ!?
ಹೆಸರಿಲ್ಲದ ಬಂಧಕ್ಕೆ ಆಯಸ್ಸು ಕಮ್ಮಿಯೇ ಇರುವೀ
ಪ್ರಪಂಚದಲ್ಲಿ ನಾವೊಂದು ಉದಾರಣೆಯಾಗಬಹುದಿತ್ತಲ್ಲ!?
ಈ ದೂರಾ... ಸಲಿಗೆ... ಮೌನ... ಮಾತು...
ನಂಟು... ಬಂಧ... ಎಲ್ಲಕ್ಕೂ ಎಲ್ಲರಂತೆ ನಾವು
ಕಟ್ಟುಬಿದ್ದೇವಾ...!!
ನಿದ್ದೆ ಇಲ್ಲದೆ ದೂಡಿದ ರಾತ್ರಿಯಲ್ಲಿ ನಿನ್ನ ನೆನಪು...
ಕಳೆದ ಕ್ಷಣ... ಆಡಿದ ಮಾತು... ಗೀಚಿದ ಸಾಲು...
ಬಹಳ ಕಾಡಿದ್ದು ನಿನ್ನಿಂದಲೇ ಏನೋ...!-
ಸಂಬಂಧಗಳು ತುಂಬಾ ವ್ಯವಹಾರಿಕವಾದಾಗ
ಅವುಗಳ ನಡುವಿನ ಬಂಧಾನು ಕಡಿಮೆ ಆಗುತ್ತೆ,
ಮಾತು ಮನಸು ಎರಡು ಖಾಲಿ ಖಾಲಿ ಅನ್ಸುತ್ತೆ.-
ಅವಶ್ಯಕತೆಗೋಸ್ಕರ ಹುಟ್ಟುವ ಸಂಬಂಧಗಳಿಗೆ ಆಯುಷ್ಯ ಕಡಿಮೆ. ಜೀವನದಲ್ಲಿ ಎಲ್ಲವು ಅವಶ್ಯಕತೆಯಿಂದಲೆ ಪೂರ್ಣವಾಗುವುದಿಲ್ಲ. ಒತ್ತಾಯದಿಂದ ಒತ್ತಾಸೆಯಾಗಿ ಇರುವುದಕ್ಕು ಯಾವತ್ತು ಸಾಧ್ಯವಿಲ್ಲ.
-
ಸಪ್ತ ಸಾಗರದಾಚೆಗೆ ಹಬ್ಬಿದ ನಿನ್ನ ಮೌನ
ವದನದ ಕಿರುನಗೆಗೆ ಪ್ರೀತಿಯ ಸಂಚಲನ
ನಿಂತಿಹೆ ನಾ ಕಾಯುತ ತೀರದಂಚಿನಲಿ
ಸಾಗದಾಗಿದೆ ಸಮಯ ನಿನ್ನ ಸಿಹಿ ಧ್ಯಾನದಲಿ-
ಕಾದಿರುವೆ ನಿನಗಾಗಿ;
ಕಣ್ಣಂಚಲಿ ಪ್ರೀತಿಯ ತುಂಬಿ,
ನಸುನಗಲು ನಾಚಿಕೆ;
ಮನದ ತುಂಬಾ ನಿನ್ನ ಕಲ್ಪನೆಯ ಬಿಂದು,
ಅರೆ ಬಿರಿದ ಮಲ್ಲಿಗೆಯಂತಗಿದೆ ಮನ
ನಿನ್ನ ನಿರೀಕ್ಷೆಯಲ್ಲಿ,
ತುದಿಗಾಲಲಿ ನಿಂತಿರುವೆ
ಆತ್ಮಸಖ ಪ್ರೇಮತೀರಕೆ ಸಾಗಲು.-
ಜೊತೆಗಾತಿ ನಿನ್ನ ಜೀವನಕೆ ನಾನು
ಸಂಗಾತಿ ನನ್ನ ಜೀವಕೆ ನೀನು
ದುಃಖವ ಕಳೆಯುವ ಅನುನಯಿಸಿ
ಸುಖವ ಕೂಡುವ ಸಂಭ್ರಮಿಸಿ
ಸಾಗುವೆ ಜೊತೆಯಾಗಿ ಬೆಸೆದಿಹ ಈ ಬಂಧನದಲ್ಲಿ
ನೀನೇ ಎಲ್ಲಾ ನನ್ನೀ ಪುಟ್ಟ ಪ್ರಪಂಚದಲ್ಲಿ...-
ದೂರ ಹೋಗ್ಬೇಕು ಅಂದೊರನ್ನ ಬಂಧಿಸಿ ಕೂರುವುದಕ್ಕಾಗಲ್ಲ ಅಲ್ವಾ... ನಮ್ಮ ಮನಸ್ಥಿತಿ ಹಾಗೂ ಪರಿಸ್ಥಿತಿ ಎರಡು ಗೊತ್ತಿದ್ದೂ ಹೋಗ್ಬೇಕು ಅನ್ಸಿದ್ರೆ ಅವರ ದಾರಿಯಿಂದ ದೂರ ಸರಿಯೋದು ಉತ್ತಮ ಆಯ್ಕೆ... ಸಂಬಂಧ ಯಾವತ್ತು ಬಂಧನ ಆಗಬಾರದು...
-
ಪುಟ್ಟ ರಾಜಕುಮಾರಿಯ ಆಗಮನ
ನೀಡಿದಳು ಸಂತೋಷದ ಹೂರಣ
ಬೆಳಗಬೇಕವಳು ಮನೆ ಮಹಾಲಕ್ಷ್ಮಿಯಂತೆ
ಅರಳಬೇಕವಳು ಬಿರಿದ ಮಲ್ಲಿಗೆ ಹೂವಂತೆ-