ಕನಸುಗಳ ಕೊನೆ
ನಿಲ್ದಾಣ...???-
ಅದೇ ರಾಗ.. ಅದೇ.. ಹಾಡು....!!!
ಕ್ವಾರಂಟೈನ್
ಸೀಲ್ಡೌನ
ಲಾಕಡೌನ.......!!!-
ಮನದ ತುತ್ತ ತುದಿಯಲ್ಲಿ
ಅಣಕಿಸುತ್ತಿದೆ ಸಂಬಂಧಿಗಳ
ಹಿಡಿ ಶಾಪ...
ದೊಡ್ಡದಾಗಿ ಕಾಣುತ್ತಿದೆ
ಭಾವನೆಗಳ ಬಿರುಕು
ತಪ್ಪೀಲದ ತಪ್ಪುಗಳ ಸರಮಾಲೆ
ಕೊರಳ ಅಲಂಕರಸಿದೆ
ಮಸಣದ ಹೂವು ಕುಡಾ
ಕರಿಯುತ್ತಿದೆ ಕೊರಳ ಸಿಂಗರಿಸಲು
ಕೊನೆಯ ದಿನಗಳ ಏಣಿಕೆ
ಬದಕು ಜವಾಬ್ದಾರಿಯ ಬಯಕೆ...!!
-
ವರ್ಷದ ಬೆಳಕು ಹರುಷದ ಹೊನಲ,
ಎಲ್ಲಿಂದ ಎಲ್ಲಿಯವರೆಗೂ
ಗೋತ್ತಿಲ್ಲದ ನಡುಗೆ ಗುರಿಯಿಲ್ಲದ ಬದಕು,
ಎತ್ತ್ ನೂಡಲಯ್ಯ ..
ಮಮತೆಯ ಕಡೆಗೂ ಮಡದಿಯ ನಡೆಗೂ
ಎತ್ತ ನೋಡಿದಿರೆ ಒಂದರಲ್ಲಿ ಬಿರುಕು,
ಎಲ್ಲರನ್ನೂ ಅರ್ಥ್ಯಸುವದರಲೆ
ಜೀವನ ಅಂತ್ಯ...
ನೆಮ್ಮದಿ ಎಂಬ ವಯಸ್ಸು ಸವಿಯುತ್ತ
ಸವಿಯುತ್ತಾ ಸ್ವಾರ್ಥ ಜನರ ನಡುವೆ
ಏಕಾಂಗಿಯ ಬಡಿದಾಟ..
ನೆಮ್ಮದಿಯಿಲ್ಲದ ಜಂಜಾಟ..
ಇದು ಮುಗಿಯದ ಕಥೆ ಬರೆದರು ಸಾಲದು
ಪುಟಗಳ ಏಣಿಕೆ... ಓದಿದರೆ ಅರ್ಥ
ತರ್ಕೀಸಿದರೆ ಅನರ್ಥ.....!!!!
-
ನೋವುಂಡು ನೋವು
ಸಹಿಸಿ ನಡಿಸುವ ಜೀವ..
ಒಳಗೊಳಗೆ ಸುಡುತ್ತಿದ್ದರು
ಹೊರಗೆ ನಗುವ
ಜೀವ... ಜೀವನ.....!!!
-
ಅಪೇಕ್ಷೆಗಳು ಹುಸಿಯಾದಾಗ
ಹೃದಯ ಬಾರವಾಗುತ್ತದೆ
ಆಸೆಗಳು ನಿರಾಸೆಯಾದಾಗ
ನೆಮ್ಮದಿಯ ನೀರಿಕ್ಷೆಕೆಗಳು
ಅನಿರೀಕ್ಷಿತವಾಗಿ ಅನಿವಾರ್ಯವಾಗುತ್ತವೆ....!!!-
ಕಳೆದುಹೋದ ಪ್ರೀತಿಯ
ಕಥೆ ಬರೆಯಲೋ..
ಇಂದು ನನ್ನನ್ನು ಹುಡುಕಿ
ಬಂದ ಪ್ರೀತಿಗೆ ಮುನ್ನುಡಿ
ಬರೆಯಲೋ..!!!-
ನನ್ನ ಹೃದಯದಲ್ಲಿ ಅರಳಿದ
ಪ್ರೀತಿಯ ಕಥೆ..
ಬರೆದರು ಸಾಲದು ಆ ದಿನಗಳ
ನೆನಪಿನ ಕವಿತೆ..
ಒಂದು ಒಳ್ಳೆಯ ಶೀರ್ಷಿಕೆಯೂಂದಿಗೆ
ಬರೆಯುವೆ ನನ್ನ ಪ್ರೀತಿಯ ಪುಸ್ತಕ ದ ಚರಿತೆ..!!!-
ಸಮುದ್ರ ತೀರದಲ್ಲಿ ಸಾಗೋಣ ಒಂದು ದಿನ
ಸೂರ್ಯಾಸ್ತದ ಕ್ಷಣ ಕ್ಷಣ..
ಹೆಜ್ಜೆಯ ಮೇಲೊಂದು ಹೆಜ್ಜೆಯ ಇಡುತ್ತಾ..
ತೀರಕ್ಕೆ ಅಪ್ಪಳಿಸುವ ತೆರೆಯು ಪಾದಕ್ಕೆ ಒರಗಿ
ಮುತ್ತಿಕ್ಕುವ ಪ್ರೀತಿಯ ಆಲಿಂಗನದಲ್ಲಿ...!!!-