ಮುಸ್ಸಂಜೆಯಲ್ಲಿ ರವಿಯು
ಭೂತಾಯಿಯ ಮಡಿಲಿಗೆ
ಜಾರುತ್ತಿರುವಂತೆ..!!
ನನ್ನ ಮಡಿಲಿನಲ್ಲಿ ನೀ ನಿದ್ರೆಗೆ
ಜಾರುತ್ತಿದ್ದೆ ಮುದ್ದು ಮಗುವಿನಂತೆ..!!-
ಬೆಂಗಳೂರು ಹುಡುಗಿ
ಕಲ್ಪನೆಯ ಬರಹ ನನ್ನದು...
ಕೆಲವೊಮ್ಮೆ ಭಾವನೆಗಳು ಮತ್ತು ಅನುಭವಗಳು ಪದಗಳಾಗುತ... read more
ಮುದ್ದು...,
ಎಲ್ಲರ ಜೊತೆಗಿನ ಸಮಯ
ಚೆನ್ನಾಗಿಯೇ ಇರುತ್ತಿತ್ತು,
ಆದರೆ ನಿನ್ನ ಜೊತೆಗಿನ
ಸಮಯ ವಿಷೇಶವಾಗಿತ್ತು...!!-
ಮನಸಿಗೆ ನಿನ್ನ ಒಲವಿನ ಆಗಮನ...
ನನಗೀಗ ನನ್ನ ಮೇಲೆಯೇ ಅನುಮಾನ...
ನಿಜಕ್ಕೂ ಇದು ನಾನೇನಾ...!!-
ಸತ್ಯ ಮತ್ತು ಒಳ್ಳೆಯತನಕ್ಕೆ ಜೊತೆಯಾಗಿರುತ್ತೆ,
ಸುಳ್ಳು ಮತ್ತು ಕೆಟ್ಟತನಕ್ಕೆ ವಿರುದ್ಧವಾಗಿರುತ್ತೆ.-
ಏಕಾಂತದ ಜೀವನಕ್ಕೆ
ರಾಜೀನಾಮೆ ಕೊಟ್ಟಾಯ್ತು ಇಂದು,
ಹೊಸ ಜೀವನಕ್ಕೆ
ಅರ್ಜಿಯನ್ನು ಸಲ್ಲಿಸಲಾಯ್ತು ಇಂದು,
ಉಂಗುರ ಬದಲಾಯಿಸುವುದರ
ಮೂಲಕ ಒಪ್ಪಂದದ ಪತ್ರಕ್ಕೆ ಸಹಿಹಾಕಾಯ್ತು
ಇಂದು,ಎಂದೆಂದಿಗೂ ನಾ ಜೊತೆಗೆ
ಇರುವೆನೆಂದು.-
ಹೊಸ ವರ್ಷದ ಪ್ರತಿ ನಿಮಿಷಗಳ
ಸವಿಯುತ್ತಾ, ಎಲ್ಲರಿಗೂ
ಒಳ್ಳೆಯದನ್ನು ಬಯಸಿ ಜೀವಿಸುವ
ಮುಂಬರುವ ದಿನಗಳಲ್ಲಿ.
ಹೊಸ ವರ್ಷದ ಹಾರ್ದಿಕ ಶುಭಾಶಯಗಳು...!!-
ನಿನ್ನ ನಾ ಬಯಸಿದೆ ಪ್ರೀತಿಯ ಹೆಸರಿನಲ್ಲಿ,
ನನ್ನ ಬಾಳಿಗೆ ನೀ ಬರಬೇಕಿದೆ
ಗಂಡನ ಹೆಸರಿನಲ್ಲಿ,
ಉಸಿರು ಇರುವವರೆಗೂ
ನಿನ್ನ ಜೊತೆಗೆ ಇರಬೇಕಾಗಿದೆ
ನಾವು ಬೆಸೆದಿರುವ ಸಂಬಂಧದಲ್ಲಿ,
ಒಬ್ಬರನ್ನೊಬ್ಬರು ಬಿಟ್ಟಿರದಷ್ಟು ಪ್ರೀತಿ
ಇರಲಿ ನಮ್ಮಿಬ್ಬರ ಮುಪ್ಪಿನಲ್ಲಿ.
ನಮ್ಮ ಸುಂದರ ಜೀವನ ಕೊನೆಗಾಣಲಿ
ನಮ್ಮಿಬ್ಬರ ಸಾವಿನಲ್ಲಿ.-
ಪ್ರೀತಿಸಿದವರು ಬಿಟ್ಟೋದರೆ
ಹೃದಯ ಚಡಪಡಿಸುವಂತೆ,
ಮಕ್ಕಳು ಬಿಟ್ಟೋದರೆ
ತಾಯಿ ತಂದೆ ಚಡಪಡಿಸುತ್ತಾರೆ.
ಪ್ರೀತಿಸಿದವರು ಪ್ರೀತಿನ ಬಿಟ್ಟು ಹೋಗುವುದು,
ಮಕ್ಕಳು ಹೆತ್ತವರನ್ನು ಬಿಟ್ಟು ಹೋಗುವುದು,
ಇದೆಲ್ಲಾ ಕಲಿಯುಗದಲ್ಲಿ ಸಹಜ...!!
ಏಕೆಂದರೆ, ಮನುಷ್ಯತ್ವ ಕಳೆದುಕೊಂಡವನೆ ಮನುಜ..!!
-
ಕಾಲ ಚಕ್ರದ ನಿಯಮದಂತೆ,
ಕತ್ತಲೆಯ ಹಿಂದೆ ಬೆಳಕುಂಟು...,
ಕಷ್ಟದ ಹಿಂದೆ ಸುಖವುಂಟು...,
ಸ್ವಲ್ಪ ತಾಳ್ಮವೆಂಬುದು
ಮನುಜನಿಗೆ ಬೇಕುಂಟು..!!-
ಗೊತ್ತಿಲ್ಲದೇ ಹಚ್ಚಿಕೊಂಡ ಪ್ರೀತಿ
ಬೇಸರದಿ ಕೊಚ್ಚಿಕೊಂಡು ಹೋಯಿತು,
ಪ್ರತಿ ತಪ್ಪಿಗೂ ಕ್ಷಮೆಯೆಂಬ ಮಾಲೆಯನ್ನು
ಅರ್ಪಿಸಿದ ಪ್ರೀತಿಯನ್ನು ಲೆಕ್ಕಿಸದೇ ದೂರವಾಗಿತ್ತು,
ಮನದಲ್ಲೇ ಬಚ್ಚಿ ಇಟ್ಟಿರುವ ಪ್ರೀತಿ ಮುಂದೆ
ನಂಬಿ ಬರುವವರಿಗೆಂದು ಮೀಸಲಾಯಿತು,
ಕೊನೆಗೆ ಗೊತ್ತಿಲದೇ ಹಚ್ಚಿಕೊಂಡ ಪ್ರೀತಿ
ಕಣ್ಗೆ ಕಾಣದ ಹಾಗೆ ಮರೆಯಾಗಿತ್ತು,
ಮನದಲ್ಲಿ ಹಸಿಯಾಗಿ ಉಳಿಯಿತು.-