ನಿನ್ನ ಮಾರ್ದನಿ ಜನದನಿ ಆಗುವತನಕ ಹೋರಾಡು
-
Deepak joshi
([Deepak])
92 Followers · 39 Following
INDIAN
Joined 30 March 2019
4 DEC 2021 AT 20:10
Being good its not changing your style
It is becoming someone's reason of smile-
5 MAY 2021 AT 20:28
ಕರೋನಾ ಕಲಿಸಿದ ಪಾಠ
ಇದು ನೆರಳು ಊಟಕ್ಕಲ್ಲದ ಕಾದಾಟ
ಕ್ಷಣ ಕ್ಷಣದ ಉಸಿರಿಗಾಗಿ ಹೋರಾಟ-
13 APR 2021 AT 8:00
ಒಣಗಿದ ಎಲೆಗಳು ಮತ್ತೆ ಚಿಗುರುವಂತೆ
ನಲುಗಿದ ಜೀವ ನಗಲಿ ಮರೆತು ಚಿಂತೆ
ಮಾರಿಯಾ ಕೊನೆಯಾಗಿ ಜಗವೆಲ್ಲ ನಗುತಿರಲಿ
ದಿನವೂ ಸಂಭ್ರಮಿಸಿ ಯುಗಾದಿಯಂತೆ-
12 JAN 2021 AT 9:53
ನಿನ್ನನ್ನು ನೀನು ಅರಿ ,ನಿನ್ನ ಅರಿಗಳನ್ನೆಲ್ಲ ತೊರಿ
ಸೋಲು ಗೆಲುವಿನ ಮಧ್ಯೆ ಮಂದಹಾಸವೇ ಬೀರಿ
ವಿವೇಕದ ಪಥದಲ್ಲಿ ಸಿಗುವ ಆನಂದದ ಝರಿ
ಅವರೇ ಭಾರತಾಂಬೆಯ ಮಡಿಲ ಸಿಂಹದಮರಿ-
23 DEC 2020 AT 9:13
ಮುಗಿಲ ಹನಿಯ ನಂಬಿ ನೇಗಿಲನ್ನು ಹಿಡಿದ
ಬೆವರ ಹನಿಗಳ ತುಂಬಿ ಬೆಳೆಗಳನ್ನು ಬೆಳೆದ
ಕಷ್ಟಕ್ಕೆ ಎದೆಗುಂದಿ ಜೀವದ ಹಂಗು ತೊರೆದು
ದೇಶದ ಹಸಿವನ್ನು ನೀಗಿಸಲು ಸಿದ್ಧ-
16 OCT 2020 AT 17:32
ಪಯಣಿಗರಿಲ್ಲದ ಹಡಗು ತೇಲಿ ಬಿಟ್ಟಂತೆ
ಬಾಡಿದ ಹೂಗಿಡಕ್ಕೆ ನೀರು ಎರೆದಂತೆ
ಗುರಿ ಇಲ್ಲದ ವಿಷಯ ಅನ್ವೇಷಿಸಿದಂತೆ
ನನ್ನೊಳಗೆ ನಾನು ಸತ್ತು ಹೋದಂತೆ-