ರಾಮೋ ರಾಜಮಣಿಃ ಸದಾ ವಿಜಯತೇರಾಮಂ ರಮೇಶಂ ಭಜೇ ರಾಮೇಣಾಭಿಹತಾ ನಿಶಾಚರಚಮೂ ರಾಮಾಯ ತಸ್ಮೈ ನಮಃ ।
ರಾಮಾನ್ನಾಸ್ತಿ ಪರಾಯಣಂ ಪರತರಂ ರಾಮಸ್ಯ ದಾಸೋತಸ್ಕ್ಯಹಂ ರಾಮೇ ಚಿತ್ತಲಯಃ ಸದಾ ಭವತು ಮೇ ಭೋ ರಾಮ ಮಾಮುದ್ಧರ ॥39॥
ಯಾವಾತನಿಂದ ರಾಕ್ಷಸ ವೃಂದವು ನಾಶಮಾಡಲ್ಪಟ್ಟಿತೋ ಅಂತಹಾ ರಾಜಮಣಿಯೆನಿಸಿರುವ ರಾಮನನ್ನು ನಾನು ಸದಾ ಸ್ಮರಿಸುವೆ. ಶ್ರೀರಾಮನಿಗೆ ಸದಾ ಜಯವಾಗಲಿ. ರಾಮಕಿಂಕರನಾದ ನನಗೆ ರಾಮನಲ್ಲದೆ ಅನ್ಯತ್ರ ಆಶ್ರಯವಿಲ್ಲ ಆದ್ದರಿಂದ ನನ್ನ ಸರ್ವಸ್ವವಾಗಿರುವ ಆ ಶ್ರೀರಾಮನ ಸ್ಮರಣೆಯಲ್ಲಿ ನನ್ನ ಮನಸ್ಸು ಲೀನವಾಗಿರಲಿ, ಆ ಕರುಣಾಮಯಿ ರಾಮನು ನನ್ನನ್ನು ಸದಾ ಉದ್ಧರಿಸಲಿ.-
ಶ್ರೀರಾಮ ರಕ್ಷಾ ಸ್ತೋತ್ರ
ಭರ್ಜನಂ ಭವ ಬೀಜಾನಾಂ ಆರ್ಜನಂ ಸುಖಸಂಪದಾಂ ।
ತರ್ಜನಂ ಯಮದೂತಾನಾಂ ರಾಮ ರಾಮೇತಿ ಗರ್ಜನಂ ॥38॥
ಪುನರ್ಜನ್ಮಕ್ಕೆ ಕಾರಣವಾಗುವ ಪಾಪ ಸಮೂಹವನ್ನು ಸುಡುವ, ಸುಖ ಸಂಪತ್ತನ್ನು ಒದಗಿಸುವ, ಯಮದೂತರಿಗೆ ಭೀತಿಯನ್ನುಂಟು ಮಾಡುವ ರಾಮ ರಾಮಾ ಎಂಬ ಪುಣ್ಯ ನಾಮದ ಮಹಿಮೆ ವರ್ಣಿಸಲಸದಳ.-
ಶ್ರೀರಾಮ ರಕ್ಷಾ ಸ್ತೋತ್ರ
ಆಪದಾಮಪ ಹರ್ತಾರಂ ದಾತಾರಂ ಸರ್ವ ಸಂಪದಾಂ ।
ಲೋಕಾಭಿರಾಮಂ ಶ್ರೀರಾಮಂ
ಭೂಯೋ ಭೂಯೋ ನಮಾಮ್ಯಹಂ ॥37॥
ಸಕಲ ಸಂಕಷ್ಟಗಳನ್ನು ದೂರೀಕರಿಸುವವ, ಸರ್ವ ಸಂಪದವನ್ನು ಅನುಗ್ರಹಿಸುವವ, ಸರ್ವಾನಂದದಾಯಕನಾಗಿರುವ ಶ್ರೀರಾಮಚಂದ್ರನ ಪದತಲಗಳಿಗೆ ಪುನಃಪುನಃ ನಾನು ಎರಗುವೆನು.-
ಶ್ರೀರಾಮ ರಕ್ಷಾ ಸ್ತೋತ್ರ
ಕೂಜಂತಂ ರಾಮ ರಾಮೇತಿ ಮಧುರಂ ಮಧುರಾಕ್ಷರಂ |
ಆರುಹ್ಯ ಕವಿತಾಶಾಖಾಂ
ವಂದೇ ವಾಲ್ಮೀಕಿ ಕೋಕಿಲಂ ॥36॥
ಮರದ ಕೊಂಬೆಯ ಮೇಲೆ ಕುಳಿತು ಕೋಗಿಲೆಯು ಕುಹೂ ಕುಹೂ ಎಂದು ಸುಮಧುರವಾಗಿ ಕೂಗುವ ರೀತಿಯಲ್ಲಿ ವಾಲ್ಮೀಕಿ ಎಂಬ ಕವಿಕೋಗಿಲೆಯು ಕವಿತೆಯೆಂಬ ಮರದ ಮೇಲೆ ಕುಳಿತು "ರಾಮ ರಾಮಾ" ಎಂದು ಸುಮಧುರವಾಗಿ ಹಾಡುತ್ತಾ ಕಾವ್ಯ ಪದಲ್ಲಿ ಶ್ರೀರಾಮನ ಗುಣಗಾನ ಮಾಡಿದ್ದು, ಅಂತಹಾ ಆದಿಕವಿಶ್ರೇಷ್ಠ ವಾಲ್ಮೀಕಿ ಮಹರ್ಷಿಗೆ ನಾನು ನಮಸ್ಕರಿಸುವೆನು.-
ಶ್ರೀರಾಮ ರಕ್ಷಾ ಸ್ತೋತ್ರ
ಮನೋಜವಂ ಮಾರುತ ತುಲ್ಯ ವೇಗಂ ಜಿತೇಂದ್ರಿಯಂ ಬುದ್ಧಿಮತಾಂ ವರಿಷ್ಠಂ ।
ವಾತಾತ್ಮಜಂ ವಾನರಯೂಥ ಮುಖ್ಯಂ ಶ್ರೀ ರಾಮದೂತಂ ಶರಣಂ ಪ್ರಪದ್ಯೇ ॥35॥
ವಾಯುವಿನ ವೇಗಕ್ಕೆ ಸಮಾನವಾದ ವೇಗವುಳ್ಳವನೂ, ಚುರುಕು ಬುದ್ಧಿಯವನೂ, ಇಂದ್ರಿಯನಿಗ್ರಹಿಯೂ, ಅಪ್ರತಿಮ ಧೀಮಂತನೂ, ಬುದ್ಧಿವಂತರಲ್ಲಿ ಶ್ರೇಷ್ಠನೂ, ವಾಯು ನಂದನನೂ, ವಾನರಾಗ್ರೇಸರನೂ ಆಗಿರುವ ಶ್ರೀರಾಮದಾಸ ಹನುಮನಿಗೆ ನಾನು ಶರಣಾಗುವೆ.-
ಶ್ರೀರಾಮ ರಕ್ಷಾ ಸ್ತೋತ್ರ
ಮನೋಜವಂ ಮಾರುತ ತುಲ್ಯ ವೇಗಂ ಜಿತೇಂದ್ರಿಯಂ ಬುದ್ಧಿಮತಾಂ ವರಿಷ್ಠಂ ।
ವಾತಾತ್ಮಜಂ ವಾನರಯೂಥ ಮುಖ್ಯಂ ಶ್ರೀ ರಾಮದೂತಂ ಶರಣಂ ಪ್ರಪದ್ಯೇ ॥35॥
ವಾಯುವಿನ ವೇಗಕ್ಕೆ ಸಮಾನವಾದ ವೇಗವುಳ್ಳವನೂ, ಚುರುಕು ಬುದ್ಧಿಯವನೂ, ಇಂದ್ರಿಯನಿಗ್ರಹಿಯೂ, ಅಪ್ರತಿಮ ಧೀಮಂತನೂ, ಬುದ್ಧಿವಂತರಲ್ಲಿ ಶ್ರೇಷ್ಠನೂ, ವಾಯು ನಂದನನೂ, ವಾನರಾಗ್ರೇಸರನೂ ಆಗಿರುವ ಶ್ರೀರಾಮದಾಸ ಹನುಮನಿಗೆ ನಾನು ಶರಣಾಗುವೆ.-
ಶ್ರೀರಾಮ ರಕ್ಷಾ ಸ್ತೋತ್ರ
ಲೋಕಾಭಿರಾಮಂ ರಣರಂಗಧೀರಂ ರಾಜೀವನೇತ್ರಂ ರಘುವಂಶ ನಾಥಂ ।
ಕಾರುಣ್ಯ ರೂಪಂ ಕರುಣಾಕರಂ ತಂ ಶ್ರೀರಾಮ ಚಂದ್ರಂ ಶರಣಂ ಪ್ರಪದ್ಯೇ ॥34॥
ಲೋಕಕ್ಕೆ ಆನಂದವನ್ನು ಕರುಣಿಸುವವನೂ, ಯುದ್ಧಭೂಮಿಯಲ್ಲಿ ಅಜೇಯನೂ, ಕಮಲದಳಗಳನ್ನು ಹೋಲುವ ಕಣ್ಣುಗಳುಳ್ಳವನೂ, ರಘುವಂಶ ಕುಲದೀಪಕನೂ, ದಯಾಮೂರ್ತಿಯೂ, ಕರುಣಾಸಾಗರನೂ, ಆಗಿರುವ ಶ್ರೀರಾಮಚಂದ್ರನಿಗೆ ನಾನು ಶರಣು ಹೋಗುತ್ತೇನೆ.-
ಶ್ರೀರಾಮ ರಕ್ಷಾ ಸ್ತೋತ್ರ
ದಕ್ಷಿಣೇ ಲಕ್ಷ್ಮಣೋ ಯಸ್ಯ ವಾಮೇತು ಜನಕಾತ್ಮಜಾ ।
ಪುರತೋ ಮಾರುತೀ ಯಸ್ಯ ತಂ ವಂದೇ ರಘುನಂದನಂ ॥33॥
ಯಾವಾತನ ಎಡ ಭಾಗದಲ್ಲಿ ಲಕ್ಷ್ಮಣನೂ, ಬಲ ಬದಿಯಲ್ಲಿ ಸೀತೆಯೂ, ಎದುರು ಭಾಗದಲ್ಲಿ ಆಂಜನೇಯನೂ ಇರುವರೋ ಅಂತಹಾ ಶ್ರೀರಾಮಚಂದ್ರನಿಗೆ ನಾನು ನಮಸ್ಕರಿಸುವೆ.-
ಶ್ರೀರಾಮ ರಕ್ಷಾ ಸ್ತೋತ್ರ
ಮಾತಾರಾಮೋ ಮತ್ತ್ಪಿತಾ ರಾಮಚಂದ್ರಃ ಸ್ವಾಮೀ ರಾಮೋ ಮತ್ಸಖಾ ರಾಮಚಂದ್ರಃ!
ಸರ್ವಸ್ವಂ ಮೇ ರಾಮಚಂದ್ರೋ ದಯಾಲುರ್ ನಾನ್ಯಂ ಜಾನೇ ನೈವ ಜಾನೇ ನ ಜಾನೇ ॥32॥
ನನ್ನ ತಾಯಿ, ತಂದೆ, ಸ್ನೇಹಿತ, ಸರ್ವಸ್ವವೂ ರಾಮಚಂದ್ರನೇ ಆಗಿದ್ದಾನೆ. ಈ ಭೂಮಿಯಲ್ಲಿ ಅವನ ಹೊರತಾಗಿ ಬೇರೊಬ್ಬ ಕರುಣಾಳುವನ್ನು ನಾನು ಅರಿಯೆ.-
ಶ್ರೀರಾಮ ರಕ್ಷಾ ಸ್ತೋತ್ರ
ಶ್ರೀರಾಮಚಂದ್ರ ಚರಣೌ ಮನಸಾ ಸ್ಮರಾಮಿ ಶ್ರೀರಾಮಚಂದ್ರ ಚರಣೌ ವಚಸಾಗೃಣಾಮಿ ।
ಶ್ರೀರಾಮಚಂದ್ರ ಚರಣೌ ಶಿರಸಾ ನಮಾಮಿ ಶ್ರೀರಾಮಚಂದ್ರ ಚರಣೌ ಶರಣಂ ಪ್ರಪದ್ಯೇ ॥31॥
ಶ್ರೀರಾಮಚಂದ್ರನೇ ನಿನ್ನಚರಣಗಳನ್ನು ಮನಸಾ ಸ್ಮರಿಸುವೆನು. ಶ್ರೀರಾಮಚಂದ್ರನೇ ನಿನ್ನ ಚರಣಗಳನ್ನು ಬಾಯಿಯಿಂದ ಉಚ್ಛರಿಸುವೆನು. ಶ್ರೀರಾಮಚಂದ್ರನೇ ನಿನ್ನ ಚರಣಗಳನ್ನು ಶಿರಸಾ ಧರಿಸುವೆನು. ಶ್ರೀರಾಮಚಂದ್ರನೇ ನಿನ್ನ ಚರಣಗಳಿಗೆ ನಮಸ್ಕರಿಸುವ ಮೂಲಕ ಸಾಷ್ಟಾಂಗ ನಮಸ್ಕರಿಸುತ್ತಾ ಶರಣಾಗುವೆ.-