ಡಾ. ಮಲ್ಲೇಕಾವು ಮುಕುಂದರಾಜು   (ಡಾ.ಮಮು)
42 Followers · 23 Following

Joined 16 December 2018


Joined 16 December 2018

"ಚುಟುಕು"

ಮೂಗಿನ ಮೂಗುತ್ತಿ ಮೂದಲಿಸಿತ್ತು
ಕೈ ಬಳೆ ನಿಶ್ಯಬ್ದಕ್ಕೆ ಸೂಚನೆ ನೀಡಿತ್ತು
ತಲೆಯ ಪುಷ್ಪದ ಸುಗಂಧ ಸ್ವಾಗತಿಸಿತ್ತು
ಗೆಳೆಯನ ಕಂಡ ಮೊಗವು ಹರಳಿತ್ತು

-



"ನಸುಕಿಗೊಂದು ಚುಟುಕು-೧೧೨೧"

ವ್ಯಸನಗಳ ಅಡಿಯಾಳಾದರೆ
ವ್ಯಯಿಸುವ ಐಶ್ವರ್ಯವು ವ್ಯರ್ಥವಲ್ಲವೇ.. ?
ದುರ್ವ್ಯವಹಾರದಿ ದಣಿದರೆ
ದಾರಿದ್ರ್ಯವು ದಮನಿಸದೆ ಬಿಡುವುದೇ..?

-



"ಚುಟುಕು"

ನನ್ನವಳೇಕೋ ಈಗೀಗ ಮಂಕು
ಕೈಲಿ ಮೊಬೈಲ್ ಇಲ್ಲವೆಂಬ ಕೊಂಕು
ಮಾತಿಗೂ ಕೆಲಸಕ್ಕೂ ವಿರಾಮದ ಲಿಂಕು
ಭರವಸೆ ಕೊಟ್ಟಮೇಲೆ ಬಂದಿತು ನಗುವಿನ ಬರಾಕು

-



"ನಸುಕಿಗೊಂದು ಚುಟುಕು-೧೧೧೩"

ಸಹನೆಗೂ ಒಂದು ಕೊನೆಯಿಹುದು
ಸಂಬಂಧಕೂ ಒಂದು ಭಾವವಿಹುದು
ಸೋಲಿನಿಂದೆ ಮತ್ತೆ ಗೆಲುವಿಹುದು
ತಾಳ್ಮೆಯಲಿ ಸಾಗಿದರೆ ಸಂತಸವಿಹುದು

-



"ನಸುಕಿಗೊಂದು ಚುಟುಕು-೧೧೧೨"

ಕಾರಣಗಳ ಸೃಜಿಸುವ ಸಾಹಸವು ಬೇಕಿಲ್ಲ
ಕಾಲವೇ ಕೆಲವೊಮ್ಮೆ ಕಾರಣಗಳ ನೀಡುವುದಲ್ಲ
ಸಕಾರಣವ ತಿಳಿಯದೆ ತಿರಸ್ಕರಿಸುವುದು ಒಳಿತಲ್ಲ
ತೆರೆದ ಮನದೊಳಗೆ ಸಂಕುಚಿತತೆ ತೋರುವುದಿಲ್ಲ

-



"ನಸುಕಿಗೊಂದು ಚುಟುಕು-೧೧೧೧"

ಚಳಿಯು ಮೈಕೊಡವಿದಡೆ
ವಸಂತನಾಗಮನಕೆ ಸ್ವಾಗತವು
ಬಿಸಿಲಿನಾಟದ ಪ್ರಾರಂಭದಲಿ
ವರ್ಷಾರಂಭದ ಕನಸಿಹುದು

-



*ಶೀರ್ಷಿಕೆ : ಪ್ರಕೃತಿ ವಿಕೃತಿಯಾಗದಿರಲಿ*

ವರ್ಷಧಾರೆಯ ಆಗಮನದಾಗ
ಧರಣಿಯು ತಂಪ ಸೂಸುವಾಗ
ತರುವೃಕ್ಷಗಳು ನಳನಳಿಸುವಾಗ
ಮನುಜರ ಮನದಿ ನಗುವರಳಿತಾಗ

ವಸಂತಕಾಲವು ಹೊಸ್ತಿಲಿಗೆ ಕಾಲಿಟ್ಟಾಗ
ಜಗದೊಳು ಝೇಂಕಾರವು ಧ್ವನಿಸಿದಾಗ
ಧರಣಿಯು ಹಸಿರ ಸೀರೆಯುಟ್ಟಾಗ
ಕಣ್ಣರಳಿ ಮನದಿ ಆನಂವಡರಿತಾಗ

ತರುವೃಕ್ಷಗಳ ಮೈಮನದಿ ಫಲಪುಷ್ಪಳೇಳುವಾಗ
ಜನಮನದಿ ಭರವಸೆಯ ಬಿಂಬವು ಮೂಡುವಾಗ
ಭವಿಷ್ಯದಲಿ ಭಾಗ್ಯದಾ ಸೂಚನೆಯು ಕಾಣುವಾಗ
ಸುಂದರ ಪ್ರಕೃತಿ ಮನವನು ಸೆಳೆಯಿತಾಗ

ಉಳಿಸಿದರೆ ಇಂದುನಾಳೆಗಳಿಗೆ ವನವನ್ನೀಗ
ಜಗವುಳಿವುದು ಸಂತಸದಿ ಬರುವವರಿಗಾಗ
ಪ್ರಕೃತಿಯ ಸಕಲಕೂ ಜೀವನಾಧಾರವಾದಾಗ
ಪ್ರಕೃತಿಯಲಿ ವಿಕೃತಿಯಾಗದಿರೆ ಆನಂದವಿರುವುದಾಗ

-



"ಶೀರ್ಷಿಕೆ : ಭವಿಷ್ಯ ಚಿಂತೆ"

ಪ್ರೀತಿಯ ಮಾಯೆಯಲಿ ಸಾಗುತಾ
ಸಮಯದ ಅರಿವರಿಯದೆ ಹುಡುಕುತಾ
ಅರ್ಥವರಿಯದೆ ಹಣವನ್ನೆಲ್ಲಾ ವ್ಯಯಿಸುತಾ
ನಾಳೆಗಳ ಕನಸಿಲ್ಲದೇ ಗುರಿಯಿಲ್ಲದೆ ನಡೆದಾಡುತಾ
ಕಳೆದೋದ ಪ್ರೀತಿಯಲಿ ನಾ ಭಗ್ನಪ್ರೇಮಿ ಎನುತಾ
ದು:ಖಿಸೆ ಮರೆಯಾದದ್ದು ಮರಳಿ ಬರುವುದೇ ಜಗದೊಳು

-



"ನಸುಕಿಗೊಂದು ಚುಟುಕು-೧೧೧೦"

ಪ್ರೀತಿಯ ಅಮಲೇರಿದ ಮೇಲೆ
ನಾನೆಂಬ ಪರೆಯಾವರಿಸಿದ ಮೇಲೆ
ಗೌರವಾಧರಗಳ ಗಣಿಸಿದ ಮೇಲೆ
ಸಮಾಜವೂ ನಿನ್ನ ಸರಿಸುವುದು ಆಮೇಲೆ

-



"ಚುಟುಕು"

ಹರಸುವ ಹಾರೈಕೆಯೊಳು ಆನಂದವಿರಬೇಕು
ಹಾರೈಕೆಯ ಭಾವದೊಳು ನಿಷ್ಕಲ್ಮಶವಿರಬೇಕು
ನಿಷ್ಕಲ್ಮಶ ಮನದಿ ಸಂಸ್ಕೃತಿಯು ತಾಯಿಯಾಗಿರಬೇಕು
ತಾಯಿಯ ಸಹನತೆಯು ಸರಿಸಾಟಿಲ್ಲವೆಂತಿರಬೇಕು

-


Fetching ಡಾ. ಮಲ್ಲೇಕಾವು ಮುಕುಂದರಾಜು Quotes