ಪ್ರಶ್ನಿಸುವವರು ಇಲ್ಲದಿದ್ದರೆ ವ್ಯಕ್ತಿ ತಾನು
ಮಾಡಿದ್ದೇ ಸರಿಯೆಂದು ಮೆರೆಯುತ್ತಾನೆ.
ಪ್ರಶ್ನಿಸಲು ಧೈರ್ಯವಿಲ್ಲವೆಂದಲ್ಲಾ, ಅಷ್ಟೂ
ಅರಿವಿಲ್ಲವೆಂಬುದು ಖಾತ್ರಿಯಾದ್ದರಿಂದ.-
ಶ್ರೀ ಸಿದ್ದಾರ್ಥ ಶಿಕ್ಷಣ ಮಹಾವಿದ್ಯಾಲಯ ತುಮಕೂರು
ಹವ್ಯಾಸಿ ಕಲಾವಿದ
ಹವ್ಯಾಸಿ ಸಮಾಜ ಸೇವಕ
ಹ... read more
ಬಿಡಬೇಕೆಂಬ 'ಮನಸ್ಥಿತಿ' ಅಚಲವಾಗಿರುವ
ವ್ಯಕ್ತಿಗಳು ಮಾತ್ರ ಧೃಢವಾದ ನಿಲುವು
ಹೊಂದಲು ಸಾಧ್ಯ. ನೆಪ ಮಾತ್ರಕ್ಕೆ ತ್ಯಜಿಸುವವ 'ಜೀವನದಲ್ಲಿ' ಏನನ್ನೂ ಬಿಡಲಾರ.-
ಸರ್ವರೂ ವ್ಯಸನಿಗಳಾಗಬೇಕು ಸದಭಿರುಚಿ
'ಒಳ್ಳೆಯತನ' ದಾನ ಧರ್ಮಗಳಿಗೆ.
'ನಿರ್ವ್ಯಸನಿಗಳಾಗಬೇಕಿದೆ' ದುರುಳತ್ವದಿಂದ, ಸಮಾಜಘಾತುಕ ಕೃತ್ಯಗಳಿಂದ.-
ಉದಾರವಾದ 'ಗುಣವಿರುವ' ವ್ಯಕ್ತಿಗಳು
ಉದರದಲ್ಲಿ ಸಂಕಟ ತುಂಬಿದ ಜನರ
'ಹಸಿವು' ನೀಗಿಸುವವರೇ ಹೊರತು, ತಮ್ಮ
ಲಾಭಕ್ಕಾಗಿ ದಾನದ ನಾಟಕ ಮಾಡುವುದಿಲ್ಲ.-
ನಮ್ಮ 'ಪ್ರತಿಕ್ರಿಯೆಗಳು' ಎದುರಾಳಿಗೆ
ಮಾಹಿತಿಯನ್ನು ಕೊಟ್ಟು 'ಸಮಾಧಾನಿಸುವಂತೆ' ಇರಬೇಕೇ
ಹೊರತು ದಾಳಿ ಮಾಡುವಂತಿರಬಾರದು.-
ನೀವು 'ಸಂಭಾವಿತರೇ' ಆಗಿದ್ದರೂ
ಸಮಾಜ ಅದನ್ನು ಒಪ್ಪಬೇಕಾದರೆ,
ನಿಮ್ಮ ಸಂಭಾವಿತನವು 'ಪರರಿಂದಲೇ'
ಅನುಮೋದಿಸಲ್ಪಡಬೇಕು.-
ಬರೆಯುವುದೆಂದರೆ 'ತೋಚಿದ' ಪದಗಳನ್ನು
ರಾಶಿ ಹಾಕುವುದಲ್ಲ. ಕಲ್ಪನೆ, ಭಾವನೆಗಳಿಗೆ
ಅರ್ಥಪೂರ್ಣ 'ಪದಪುಂಜಗಳ' ರೂಪ
ಕೊಟ್ಟು ಜೀವ ತುಂಬುವುದು.-
ನಿಮ್ಮ ಜೀವನದಲ್ಲಿನ ನೋವು, ನಲಿವು
ನಿಮ್ಮದೆಂದೇ 'ಅನುಭವಿಸಿ' ಆನಂದಿಸಿ.
ಪರರಿಗಾಗಿ ನಿಮ್ಮ 'ಖುಷಿಯನ್ನು' ತಡೆದು
ಅದರಿಂದಲೂ ವಂಚಿತರಾಗಬೇಡಿ.-
ನಮ್ಮ ಪ್ರತಿಕ್ರಿಯೆಗಳು 'ಸಕಾಲವಾಗಿದ್ದರೆ'
ಮಾತ್ರವೇ ಸೂಕ್ತ ಬೆಲೆ ಸಿಗುತ್ತದೆ. ಇಲ್ಲವೇ
ಪ್ರತಿಕ್ರಿಯೆ ತೋರಿದ ವ್ಯಕ್ತಿಯೂ ಕ್ರಮೇಣ
ತನ್ನ 'ಮೌಲ್ಯವನ್ನು' ಕಳೆದುಕೊಳ್ಳುತ್ತಾನೆ.-
ಬಲಿಷ್ಠನಾದವ ತನ್ನ 'ಬಲಹೀನತೆಯನ್ನು'
ಮರೆಮಾಚುವ ಪ್ರಯತ್ನಗಳಲ್ಲಿಯೇ,
ತನಗರಿವಿಲ್ಲದೆಯೇ ತನ್ನ ಬಲಹೀನತೆಯ
'ಲಕ್ಷಣಗಳನ್ನು' ಪ್ರದರ್ಶಿಸುತ್ತಲಿರುತ್ತಾನೆ.-