Darshan Hegde   (Kanasugala_kathegaara)
15 Followers · 15 Following

read more
Joined 1 March 2020


read more
Joined 1 March 2020
4 MAR 2024 AT 0:57

ಕಷ್ಟಗಳನು ಅರಿತು ಸುಖದಿಂದ ಹಂಚಲು ಕಲಿಸುವ ಭಗವಂತನಿಗೆ, ಸರಿ ತಪ್ಪುಗಳ ಲೆಕ್ಕಾಚಾರ ಕಲಿಸಿಕೊಡಬೇಕೆ?
ಎಲ್ಲವೂ ಕಾಲನಿರ್ಣಯವೆಂಬಂತೆ ನಾಶ, ಏಳಿಗೆ ಎಂಬ ಪದಗಳಿಗೆ ಅವನ ಯೋಜನೆಯೇ ಬೇರೆ.
ಕನಸಲಿ ಕಂಡಿದ್ದು ಸಾವಾದರೆ ಮಗು ಜನಿಸುವ ಶಕುನ ಎಂಬಂತೆ ನಮ್ಮ ಜೀವನವೇ ಉಲ್ಟಾ ಪಲ್ಟಾ....ಜೀವನದ ಕೊನೆ ಶ್ವಾಸದವರೆಗೂ ಪಾಠಕಲಿಸುವವರಿರುವಾಗ ನನ್ನದಿನ್ನು ಎಷ್ಟು ವಯಸ್ಸಿದೆ ಅನ್ನೋದು ತಿಳಿದಿಲ್ಲ ಎಲ್ಲವನು ಸಹಿಸಿಕೊಳ್ಳುವೆ ಎಂದು ಊಹಿಸಿದರೆ ಕಾಲ್ತೊಳೆದು ಬಿಳ್ಕೊಡುವೆ ಮತ್ತೆ ನನ್ನ ಹುಡುಕಿ ಬರದಂತೆ. 🫡

-Hegdedarshan

-


1 AUG 2022 AT 23:03

ಪ್ರೀತಿಯ ಬಯಸಿ ಪ್ರೆಯಸಿ ಎಂದು ಮೂಢನಾದೆ
ಸ್ನೇಹದ ಹೆಸರಲ್ಲಿ ಪ್ರೀತಿ ಅಂತ್ಯಗೊಂಡಿದೆ,
ಹೆಮ್ಮೆಯಿಂದ ಹೇಳುವೆ ಪ್ರೀತಿಸಲಸಾಧ್ಯ ಇನ್ನಾರೂ ನನ್ನಂತೆ
ಮುಳುಗಿತು ಕನಸುಗಳೆಲ್ಲ ನೆನಪಿಗೆ ಸೆರಗೊಂದ ನೀಡಿ.

-


26 NOV 2021 AT 20:50

ಕಲ್ಪನೆಯಲಿ ಇದ್ದವಳು,
ಮನಸಲಿ ಮೂಡಿದವಳು,
ಕನಸಲಿ ನೆನಪಾಗಿ ಬಂದಿಹಳು.

ಕಣ್ಣ ಮುಂದೆ ಬಂದ ಅವಳು,
ನಗುವೆಂಬುದ ತೋರಿದವಳು,
ಹಳೆಯ ನೆನಪಿಗೆ ಮರುಜೀವ ತಂದಿಹಳು.

ಅವಳ ನೆನಪಿರಲು ಮನಸೊಳಗೆ ಈ ಜೀವಕೆ ಬೇಡ ಮತ್ತೇನು....

-


13 OCT 2021 AT 20:02

ತೆರೆದ ಹೃದಯವ ಕಾಡಿಸಿ
ತೊರೆದು ಹೋದೆ ನೀ...

ಹೋಗು....

ಮುರಿದ ಹೃದಯವ ಜೋಡಿಸಿ
ಮೆರೆದು ಬಾಳುವೆ ನಾ... 😌😌

-


5 AUG 2021 AT 21:57

ನೀ ಸೃಷ್ಟಿಸಿದ ಕತ್ತಲೆಯ ಲೋಕದಲಿ ಆಗ
ಜಗವನೇ ಮರೆಸಿದ ನಿನ್ನ ನಗುವದು,
ನೀ ನೀಡಿದ ನೆನಪುಗಳ ಶೋಕದಲಿ ಇದೀಗ
ಮೌನವೇ ತಿಳಿಸಿದೆ ನನ್ನ ಅಳುವನು.

ಕೇಳಲು ಮನಮೋಹಕ
ನೋಡಲು ಮನ ಭಾವುಕ.
- Kanasugala_kathegaara



-


7 JUN 2021 AT 9:50

ಇದೀಗ,
ನನ್ನ ಉಸಿರಿನ ಮೂಲೆ ಮೂಲೆಯಲ್ಲಿ
ಕಾಡಿದ ನಿನ್ನ ನೆನಪುಗಳಿಗೆ ಕೊನೆದಾರಿ😎✌️
ನಿನ್ನ ಕಾಡಿಗೆಯ ಅಂಚು ಅಂಚಿನಲ್ಲಿ
ಮೂಡಿದ ನನ್ನ ಕನಸುಗಳೀಗ ಅಲೆಮಾರಿ 🙄😑

-


2 JUN 2021 AT 9:21

ಕತ್ತಲು ಲೋಕದಲಿ
ಮೂಡುವ ಕಲ್ಪನೆಗಳು ಹತ್ತಾರು
ಕಾಣುವ ಕನಸುಗಳು ನೂರಾರು
ಕಾಡುವ ನೋವುಗಳು ಸಾವಿರಾರು
ತೋಚುವ ಬಯಕೆಗಳು ಹಲವಾರು.
ಆದರೆ,
ಮೂಡಿಯೂ ತಿಳಿಯದ ಯೋಚನೆಗಳು
ಕಂಡೂ ಅರಿಯದ ತಪ್ಪುಗಳು
ಕೂಡಿಯೂ ಮುಗಿಯದ ಕೆಲಸಗಳು
ತೊರೆದೂ ಮರೆಯದ ನೆನಪುಗಳು
ಈ ಜೀವಕೆ ಉರುಳಾಗಿವೆ.

-


21 MAY 2021 AT 21:34

ಓ ಗೆಳತಿ,

ನನ್ನ ಮನದಿಂದ ಜಾರಲು
ಒಂದು ನುಡಿಯ ಕೇಳದೆಯೆ
ನೀರವ ಮೌನದ ಬುತ್ತಿಯ ಹೊತ್ತು
ನೆನಪುಗಳ ಹೊರೆಯನು ಬಿಟ್ಟು
ಆ ಕಡಲ ತೀರದ ಕಡೆಗೆ ಸಾಗುವಷ್ಟು
ಕೋಪವೇ ನನ್ನ ಮೇಲೆ!?

-


10 MAY 2021 AT 23:11

ಮತ್ತೆ Lockdown ಸಹವಾಸ
Road ಗೆ ಇಳಿಯೋದೆ ಸಾಹಸ
ಬದುಕಲು best ಮನೆವಾಸ
ಹೊರಗಡೆ ತಿರುಗಿದರೆ direct ಕೈಲಾಸ.

-


4 MAY 2021 AT 22:00

ಮತ್ತದೇ ಹಾಡು ಅದೇ ಕಥೆ,
ಅದರಲ್ಲಿ ನಮ್ಮ ಹಳ್ಳಿ ವ್ಯಥೆ.

ಮಕ್ಕಳಿಗೆ ಶಾಲಿ ಇಲ್ಲ,
ಓದೋಕೆ ಬುಕ್ ಕಾಣ್ತಿಲ್ಲ ,
ಮೊದಲೇ ನೆಟ್‌ವರ್ಕ್ ಸಿಗಲ್ಲ,
ಆದರೂ ಆನ್ಲೈನ್ ಕ್ಲಾಸ್ ಇದೆಯಲ್ಲ.

ನೋಡೋಕೆ ಐಪಿಎಲ್ ಆಡಲ್ಲ,
ಸೀರಿಯಲ್ ನಾವ್ ನೋಡಲ್ಲ,
ನ್ಯೂಸ್ ಅಂತೂ ಹಚ್ಚಲ್ಲ,
ಒಳ್ಳೆ ಪಿಚ್ಚರ್ ಇದ್ದಾಗ ಕರೆಂಟೇ ಇರಲ್ಲ.

-


Fetching Darshan Hegde Quotes