DARSHAN G P   (ನಾನು)
29 Followers · 32 Following

ಉಳಿಸಲಾದರೂ ಬಳಸು ಕನ್ನಡ.!
Joined 26 October 2019


ಉಳಿಸಲಾದರೂ ಬಳಸು ಕನ್ನಡ.!
Joined 26 October 2019
26 JUL AT 0:16

ಸೆಳೆತವೊಂದು ಸಹಿಸಲಾಗದೆ ಸಿಹಿಗನಸಾಗಿದೆ
ತ್ವರಿತವಾಗಿ ಪ್ರೀತಿಯೆಂದು ಹೆಸರಿಸಲೇಬೇಕಿದೆ..

-


21 AUG 2024 AT 19:38

ಮುನಿಸೇ ನಿಂಗೂ ಮಳೆಗಾಳಿಯೇ
ಕೇಳಬಾರದೇ ನನ್ನೊಮ್ಮೆ ಮುಂದೋಗೋ ಮುನ್ನ..
ಅವಳಿಗೆ ನನ್ನ ಭಾವವ ಅರ್ಥೈಸುವುದಿತ್ತು
ಕಾಲವಂದು ಸರಿದು ಹೋಗುವ ಮುನ್ನ..!!

ಇತ್ತೇನೋ ನಿನ್ನ ಬಳಿಯೂ ಹಲವಾರು
ಹೀಗೆ ಭಾವವ ತಿಳಿಸುವ ಅಹವಾಲು..
ಮೌನವಾಗೇ ಇರಬೇಕಿತ್ತು ಭಾವ ನನ್ನದಂದು
ಉಳಿಯುತ್ತಿರಲಿಲ್ಲ ಪ್ರೀತಿ ಒಂಟಿಯಾಗಿ ನನ್ನಲಿಂದು..!!

-


18 AUG 2024 AT 19:33

ಮುನ್ನುಡಿಯಲೇ ಮುಗಿದಿಹ ಕಥೆಯೊಳಗೆ..
ಹೇಳದೇ ಉಳಿದಿದೆ ಭಾವಗಳ ಕೆಲ ಸಾಲು..
ಅವಳ ಬಗೆಗೇ ಇರಬಹುದೇನೋ ಬಹುಪಾಲು..!!

ಕೇಳಲಿಹರ್ಯಾರು ಸಮಯವಿಲ್ಲದ ಬದುಕೊಳಗೆ..
ದಿನವೂ ಕಾಡುವ ಮುಸ್ಸಂಜೆಗೆ ಮಾರಿರಲು ಮನಸೂರು..
ಮೋಡಗಳಲೇ ಅಚ್ಚಾಗಲಿ ಬಿಡಿ ಒಲವ ಒಂಚೂರು ಪಾಲು..!!

-


31 JUL 2024 AT 18:38

ಮುತ್ತಿಡುತ ತಂಗಾಳಿಗೆ..
ಮೈಗೊಡುತ ಮಳೆನೀರಿಗೆ..
ದಿಕ್ಕು ತೋಚದೆ ಬಂದಿಹೆನು ಸಲಹು ಬಾ ನೀ ಎನ್ನ..

ಮುಳುಗಿರಲು ನೋವೊಳಗೆ..
ಕಣ್ಣೀರಲಿ ಸಲಹುದೇಗೆ..
ಸವರಬಹುದಷ್ಟೇ ನಾ ಈ ತಿಳಿಹಸಿರ ಮೈಯನ್ನ..

-


27 JUL 2024 AT 22:34

ಸವಿ ಸಂಜೆಯಲಿ ಸುಮ್ಮನೆ ಹೀಗೆ
ನಿನ್ನ ಜೊತೆ ನಾ ಕಳೆದ ಹಾಗೆ..!!

ಅಂಗಳದಲಿ ಬಂಧಿಯಾಗಿರಲು ಈ ಮನಸು
ಇರಬಹುದೇನೋ ಮುಗಿಯದ ಕಥೆಯೊಂದು
ಅಂಗಳದಲೇ ಅಡಗಿ ಕುಳಿತು..

ಹೆಜ್ಜೆಯೂ ನಾಚಿರಲು ನಿನ್ನ ಬಳಿ ಬರಲು
ತಿಳಿನೋಟದಲೇ ಕನವರಿಸಿಬಿಡೋಣ
ತಿಳಿಯದೇ ಉಳಿದಿಹ ಭಾವಗಳ ಕುರಿತು..

ಸವಿ ಸಂಜೆಯಲಿ ಸುಮ್ಮನೆ ಹೀಗೆ
ನೀನಿರದೆಯೂ ನಿನ್ನ ಜೊತೆ ನಾ ಕಳೆದ ಹಾಗೆ..!!

-


24 MAR 2024 AT 20:51

ಕಳೆದು ಹೋಗಿರಬಹುದು ಪುಟಗಳು ಹೊತ್ತು ಕೆಲವು ಸಾಲು..
ಚಿಂತೆಯೇಕೆ ಈ ಮನಕೆ
ಹೃದಯ ತೆರೆದರೂನು ನೋಡಿದವರಾರು..?

ಹುಡಕದೇನೆ ಸಿಗಲಿ ಬಿಡಿ ಕೆಲವು ಪುಟಗಳು ಕೆಲವರಿಗೆ..
ಅರ್ಥವಿಹುದು ನನ್ನ ಬಳಿ
ಇಲ್ಲಿವರೆಗೆ ಬರುವರಾರು..?

-


23 SEP 2023 AT 8:51

ಮನಸಿಗೀಗ ಕನಸನೂರ ತೊರೆದು ದೂರ
ಸಿಗದ ತೀರ ಸೇರುವಾಸೆ..
ಪಯಣವೀಗ ಮುಗಿದು ಬೇಗ ಒಲವ ದಾರಿ ಸಿಗದು ಈಗ
ಕಣ್ಣೀರಿಗೆ ಕರಗುವಾಸೆ..
ಇರುವುದೇನು ಇರದೆ ನೀನು ಹೊರಟ ಹೃದಯ ಕರೆಯಲೇನು ಎಲ್ಲ ಮರೆತು ನಗಲೇ ನಾನು..?
ಮಾತಿಗೀಗ ಮೌನಕಾಲ ಧ್ವನಿಗೆ ಇಲ್ಲ ಚೂರು ಜಾಗ
ಮುಳುಗೊ ಸೂರ್ಯನಾಗಲೇನು ಅಲೆಯ ಆಚೆ ಸೇರಲೇನು..?

-


22 JUL 2023 AT 21:05

ಹನಿಹನಿಯಿಂದ ಮರುಚೇತನವ ತರುವಲ್ಲಿ
ಮಳೆಯಿಂದೇಕೋ ಮನದಲಿ, ಮುಗಿಲಲಿ..!!
ನೆನೆ-ನೆನೆದು ಉಳಿದಿಲ್ಲವೇನು ನನ್ನಲ್ಲಿ
ಕನಸಿನ್ನೇನು ಕಳೆದ ತರದಲ್ಲಿ..!!
ಹುಡುಕುವಿರಿ ನನ್ನನು ಇನ್ನೆಲ್ಲಿ
ಕನಸೊಂದಿಗೆ ಸೇರಿರಲು ನಾ ಮುಗಿಲ ಮಡಿಲಲ್ಲಿ..!!

-


21 JUL 2023 AT 23:48

ಬಾಡಿದ ಒಲವ ಹೂ ಮತ್ತೆ ಅರಳಬಲ್ಲದೆ
ಖಾಲಿ ಆಕಾಶ ಒಮ್ಮೆಲೆ ಮಳೆಗರೆಯಬಲ್ಲದೆ
ಮರೆತ ಹೆಸರು ಮತ್ತೆ ಮನಕಿಳಿಯಬಲ್ಲದೆ
ನಿಂತ ನೀರು ಮತ್ತೆ ಶುಚಿಯಾಗಬಲ್ಲದೆ
ನೀಲಿ ಆಕಾಶವಿದೋ ನಿನ್ನದಲ್ಲ
ನಕ್ಕರೂ ನೋಡದು ಅತ್ತರೂ ನೋಡದು..!!
ಹಿಂದೆಂದೋ ಅಳಿದ ಪ್ರೀತಿ
ನಿನ್ನನು ಕೇಳದು ಹತ್ತಿರ ಬಾರದು..!!

-


21 FEB 2023 AT 22:32

ಅಂದವೀಗ ಅಂದಾಜಿಗೇ ಸಿಗದಾಗಿದೆ..
ನಿನ್ನ ಮುದ್ದು ಮುಖವ ಸೇರಿದಾಗಿನಿಂದ..
ಗಾಳಿಯೂ ನಿನಗ್ಹೇಳದೆ ಸೋಕಿದೆ..
ಚೆಂದ ಚಹರೆಯ ಸ್ಪರ್ಶಿಸುವ ಹೆಳೆಯಿಂದ..!!

ಮನಸು ಸದ್ದಿಲ್ಲದೆ ಕಳ್ಳ-ಹೆಜ್ಜೆ ಹಾಕಿದೆ..
ಒಲವ ಹೊಸ ಕಾವ್ಯ ಬರೆಯಲು ಇಂದಿನಿಂದ..
ನನ್ನ ಸೇರಿ ಪೂರ್ಣಗೊಳಿಸು ಒಂದು ಬಾರಿ..
ನನ್ನ ನಿನ್ನನು ಸೇರಿದ ಒಂದೆರೆಡು ಸಾಲಿಂದ..!!

-


Fetching DARSHAN G P Quotes