ಅಂದ ಹಾಗೆ ಆ ದಿನದಿ
ನನ್ನಷ್ಟಕ್ಕೇ ನಾನಿರುವಾಗ
ಏತಾಳಕೆ ಬಂದಳೆಂದು ಕೊರಗುತಿಹೆನು ಈಗ!
ಖುಷಿಯಾಯಿತೇನೋ ಆ ಸಮಯ
ಪಾರವೇ ಇಲ್ಲದಷ್ಟು ಮನಸ್ಸಿಗೆ ತೂಕ ಕೊಟ್ಟಳೇನೋ?
ಎಲ್ಲೆಯಿಲ್ಲದಷ್ಟು ನೆನೆದು ಮನ ಭಾರವಾಯಿತೋ.
ಮೈಲುಗಲ್ಲುಗಳೇ ಕ್ರಮಿಸಿತು ಚಿಂತಿಸುತನೇ
ನಿರಾಸೆಯಲ್ಲೇ ಗಡಿಯಲ್ಲಿ ನಿಂತಿಹೆನು ,
ನಾಳೆಯೆಂಬ ಕಾಯುವಿಕೆಯಲ್ಲಿ
ಕವಿಯಾಗಿಹೆನು ಈ ದಿನ.-
ವ್ಯಂಗ್ಯತನ ಜಾಸ್ತಿ, ಗೇಲಿ ಹವ್ಯಾಸ ಬೇಕಾದಲ್ಲಿ,
ನಗು ಬಾನೆತ್ತರದ್ದೂ🙂
ಪರರ ... read more
ದೂರದ ಪಯಣ ಖಚಿತವಲ್ಲದು,
ದಿನದಿನವು ನೋಡುತಿಹ ತರತರಹದ ಪ್ರಕೃತಿಯ ಅಳಲಿನ ಚಿತ್ರಣವದು,
ಬಿಸಿಲ ಬೇಗೆಯು ಅತಿಯಾಗಿ ಸುಡುತಿಹುದು
ಎಲ್ಲೆಂದರಲ್ಲೂ,
ಕಾಲದ ಚೌಕಟ್ಟಿನ ಹೊರಗಿಂದ ಸುರಿಯುತಿಹ ಮನಸ್ಸೋ ಇಚ್ಛೋ ಮಳೆಯೋ,
ಪ್ರಾಕೃತಿಕ ಪರಿವಿಡಿಯಲ್ಲಿ ಅದೇನೋ ಅದಲುಬದಲಾದಂತಹ ಅನುಭವವೇನೋ,
ಹಾಗೆಯೇ..
ಮನುಕುಲ ಎಚ್ಚೆತ್ತುಕೊಳ್ಳೋ ಕ್ಷಣಗಣನೆಯ ದಿನದಿನವು ಪರಿಸರ ನೆನಪಿಸುತಿಹುದು,
ಜಲ, ಗಾಳಿ, ಬೆಳಕು ಈ ಮೂರರ ಚಿತ್ತ ಬತ್ತಿಹೋಗದಂತೆ,
ಕಾಯುವ ಕಾಯಕರಾದರೆ ಇನ್ನೊಬ್ಬನಿಲ್ಲ ನಿಮ್ಮಂತವರು.-
ಆಗುಂಬೆಯ ಹಸಿರಲ್ಲಿ ಮೈ ಮರೆಯುತ
ಸಾಗಿದೆವು ಆ ನಿನ್ನ ತಲೆಯವರೆಗೆ
ಅದು ಸಾಲಲಿಲ್ಲವೆಂಬ ಸಾವಕಾಶವ ಮರೆತು
ಮುಂದೋಡಿದೆವು ಕುಂದಾದ್ರಿ ಶಿಖವರದವರೆಗೆ
ಹೋದ ಉದ್ದೇಶವೇ ಶಾರದೆಯ ಒಲಿಯಲು ಆದರೆ,
ಶರವೇಗವ ಹಿಡಿದೆವು ಶೃಂಗೇರಿಯ ಕಡೆಗೆ, ಎಲ್ಲೆಂದರಲ್ಲಿಯೂ ಮಳೆಯ ನೆನಪಿಸುತಿಹ
ಕಿಗ್ಗದ ಋಷ್ಯಶೃoಗನ
ಬಿಟ್ಟೆವಾದರೂ ಹೇಗೆ,
ಹಾಗೆ ಮುಗಿಯಿತು ಇಂದಿನ ಪಯಣ
ಸಿಗೋಣ ಮುಂದೊಂದು ದಿನ😊-
Somebody asked whats your stand on relationship, It can be personal or public...???
I said one word, 'trust'.
The trust you set them, that will be remembered all the time✅
I say relationship stands with trust🙂-