ಪೊರೆರೆಬಿಟ್ಟ ಮರಗಳ ಸಾಲಿನಲ್ಲಿ,
ನೆರಳಂಗಿ ಹರಿದು!
ಚಳಿಗಾಲದ ಬಿಸಿಲು ಮೈ ಸೋಕುತಿಹುದು.
ಮರಗಳೆಲ್ಲವೂ ಮೈಗೊಡವಿ
ಧೂಳ ಹರಿಸಿಣವ ಮಿಂದು
ವಸಂತಕೆ ಸಿಂಗಾರಗೊಂಡಿಹವು
ಎಳೆಗಳೆಲ್ಲವೂ ಗಾಳಿಯೊಂದಿಗೆ ಸೇರಿ
ಭೂಮಿಗೂ ಆಕಾಶಕು
ಧೂಳ ಸೆರಗ ಕಟ್ಟಿಹವು!
ಅಲ್ಲಲ್ಲಿ ನೆರಳು,
ಅಲ್ಲಲ್ಲಿ ಬಿಸಿಲು,
ಕಣ್ಣಿಗೆ ಕಾಣುವಷ್ಟು ದೂರ
ಬೆಳಕಿನೂಟ ಸಾಗಿಹುದು!
ತರಗೆಲೆಗಳ ವೃಷ್ಟಿಯಲಿ ಕೂತು
ಚಹಾ ಕುಡಿಯುವ ಜನರೇಳುವುದೊಂದೇ
ಹಾಳು ಬಿಸಿಲು ಚಳಿಗಾಲಕ್ಕೆ ಶುರುವಾಯ್ತಲ್ಲಪ್ಪ!
ಬೇಸಿಗೆಗೆ ಸ್ಮಶಾಣವೇ ಗತಿಯಲ್ಲಪ್ಪ!
- ಚಂದ್ರಮನು-
ಚಂದ್ರಮನು
(ಸುಧಾಂಶ)
113 Followers · 35 Following
BSc (Ag) MSc (Ag)
ಕನಸುಗಾರ
ಯಾವ ಭಾವವು ಛೇದಿಸದ ಭೇದಿಸದ ಬೇರ್ಪಡಿಸದ ಲೋಕವ ಹುಡುಕುತ , ರಂಗಲೋಕದ ಬಣ್ಣ... read more
ಕನಸುಗಾರ
ಯಾವ ಭಾವವು ಛೇದಿಸದ ಭೇದಿಸದ ಬೇರ್ಪಡಿಸದ ಲೋಕವ ಹುಡುಕುತ , ರಂಗಲೋಕದ ಬಣ್ಣ... read more
Joined 14 March 2018
4 MAR 2022 AT 14:30
20 JAN 2021 AT 20:58
ಎಲ್ಲವೂ ಬತ್ತಿ ಹೋದ ಮೇಲೆ
ಖಾಲಿಯಾದುದೊಂದು ಉಳಿದಿದೆ
ಅದಕ್ಕೆ
ಅರ್ಥವೂ ಇಲ್ಲ !
ಅಸ್ತಿತ್ವವೂ ಇಲ್ಲ !-
4 JAN 2021 AT 19:44
ಕಾಣದ ದೇವನು
ಮೊಗದ ನಗುವಿಗೂ !
ಮನದ ನೋವಿಗೂ !
ನಂಟೊಂದ ಬೆಸೆದನು ,
ಕಣ್ಣೀರ ದಾಸೋಹ ಬೇಡಿದನು!.-
1 JAN 2021 AT 18:24
ಹೊಸತನ ವ್ಯಕ್ತಿಯಲ್ಲಿರಲಿ
ಹೊಸತನ ವ್ಯಕ್ತಿತ್ವದಲ್ಲಿರಲಿ
ಹೊಸತನ ಚಿಂತನೆಯಲ್ಲಿರಲಿ
ಹೊಸತನ ನಿಮ್ಮ ಸಿರಿತನವಾಗಲಿ
ಹೊಸತನ ದಿನಚರಿಯಾಗಲಿ,
ಅದನ್ನ ಕೇವಲ ಒಂದು ದಿನಕ್ಕೆ ಸೀಮಿತ ಗೊಳಿಸುವ ಯತ್ನ ಬೇಡವೆಂದು ಆಶಿಸುವ ಶುಭಾಶಯಗಳು :-
27 DEC 2020 AT 21:41
ನೀನು ಶ್ರೀಮಂತನಾಗಿದ್ದರೂ
ಬಡವನಾಗಿದ್ದರೂ
ದುಷ್ಟನಾಗಿದ್ದರೂ
ಶಿಷ್ಟನಾಗಿದ್ದರೂ
ಅನ್ನದ ಮುಂದೆ ನಾವೆಲ್ಲರೂ
ಭಿಕ್ಷುಕರೇ
-
27 DEC 2020 AT 13:55
ದೇವರದರೂ ಸರಿಯೇ ?
ದೆವ್ವವಾದರೂ ಸರಿಯೇ ?
ನಮ್ಮ ಜೀವನದ ಅನುಭವಗಳಿಗೆ
ಅವರ ಅದೃಶ್ಯ ಶಕ್ತಿಯ
ಕುರುಹು ಲೇಪಿಸಿದಾಗಲೇ!
ಅವರ ಅಸ್ತಿತ್ವ ಅನಾವರಣವಾಗುವುದು.-
18 AUG 2020 AT 17:24
ಅದೆ ಈಗ್ಲೇ ಸ್ವಲ್ಪ ಕೂದ್ಲಿದೆ
ತಲೆ ಕೆಡ್ಸ್ಕೊಂದು ಅವನ್ನು ಕಳ್ಕೊಬೇಕ
ಸುಮ್ನಿರು ಗುರು ನೀನು-