ಚಂದ್ರ ಬಿಂಬ   (ಚಂದ್ರಬಿಂಬ)
602 Followers · 517 Following

Joined 26 March 2020


Joined 26 March 2020
20 MAY 2023 AT 22:39

ವಿದಾಯಗಳೊಟ್ಟಿಗೆ ಬಿಳ್ಕೊಟ್ಟ
ನಮ್ಮಿಬ್ಬರ ಭೇಟಿಯಾದ ಸ್ಥಳಗಳಷ್ಟು
ಮತ್ತೆ ನಮ್ಮನ್ನೇ ಸಂಧಿಸುತ್ತಿವೆ ನೋಡು,,
ನೆನಪುಗಳ ಸಂದಾಯದ ನೆಪ ಹುಡುಕಿ.!!

ಆದರೆ ಮತ್ತೆ ಹೊಂಟು ಬಾ,,,,,
ಗುಂಡಾಗಿನ ಭುವಿಯೊಳಗೆ
ಎಂದೋ ಒಂದಿನ ಎದುರು ಬದುರಾಗಿ ನಿಂತು
ಅಪರಿಚಿತರಂತೆ ನಟಿಸುವ ಪ್ರೇಮೇಯವಿರದು.!!!!

-


12 JUL 2022 AT 22:01

'ಹಿತ' ಕಾಣೆಯಾಗುತ್ತೆ

-


10 MAY 2022 AT 14:04

"ಅದ್ಯಾವ ಆಘಾತಕಾರಿ ಸಂಗತಿಗಳು ಜರುಗಲಾರವು
ನೀನೆಂಬ ಅನಾಹುತ ಸಂಭವಿಸಿದಮೇಲೆ"

-


24 JAN 2022 AT 22:51





*ಪಾಂಚಾಲಿ*
👇👇👇— % &

-


2 APR 2020 AT 22:07

ನಿಷ್ಕಲ್ಮಶ ಪ್ರೀತಿಯ ಪರಿಶುದ್ಧ ಮನ ನಿನ್ನದು..

ಅನುಮಾನದ ನೆರಳನು ತಾಗಿಸದ ನಂಬಿಕೆ ನನ್ನದು..

ಪ್ರೀತಿಯ ಕ್ಷಣವೊಂದರ ಬೇಡಿಕೆಯೊಂದೇ ಉಸಿರ ಕೊನೆಯ ಎಳೆತದುದ್ದಕೂ ಪದಗಳಿಲ್ಲ ಆರ್ತೈಸಲು ನಾ ನನ್ನನು..

ಜೊತೆಯೇ ನೆಡೆಯುತಿರುವೆ ನೀನೆಂಬುದನೆಂದೂ ನಾ ಮರೆತು ಬಾಳೆನು.!!

-


17 NOV 2021 AT 9:43

ನಗುನಗುತಲೆ ಅಪ್ಪಿಕೊಂಡಿರಿ ಕಾಲನ ಆಹ್ವಾನ,,
ಇಷ್ಟ ಪಟ್ಟು ದುಪ್ಪಟ್ಟು ದುಃಖ ಕೊಟ್ಟು ಹೊತ್ತು ಹೊಯ್ದ ದೊಡ್ಡ ಗುಣ ಶ್ರೀಮಂತಿಕೆ ತುಂಬಿದ ಹೃದಯನ,,
ಸ್ವರ್ಗದಲೂ ನಗುವಿಗೆ ಕೊರತೆ ಇತ್ತೇನೋ
ಸಹಿಸದಾದ ಭೂಮಿಯ ತುಂಬೆಲ್ಲ ತುಂಬಿದ್ದ ನಿನ್ನ ಹೂನಗೆಯ.!
ಚೂರು ಸಾಲಕೊಟ್ಟು ಹಿಂತಿರುಗಬಾರದೆ ಅಭಿಮಾನಿ ದೇವರ ಒಡೆಯ.!!
ಧಾನವಾಗಿಸಿ ಬಿಟ್ಟೆ ಜೀವವಾ,,
ಉಳಿಸಿ ಹೊರಟೆ ಗಂಟಲೊಳಗೆ ಮಡುಗಟ್ಟಿದ ನೋವಾ,,
ಭಾರವಾಗಿದೆ ಮನಸು ಅತ್ತು ಹಗುರಾಗಲಾರೆ,
ಕಣ್ಣಲಿ ಕಂಬನಿಯಾಗಿಸಲಾರೆ, ನೀ ಕರಗಿಹೋಗುವೆ ಎಂಬ ಭಯವಿದೆ.!
ಕೋಟ್ಯಂತರ ಹೃದಯದಲಿ ಗಿಟ್ಟಿಸಿ ಹೊರಟೆ ಅಗ್ರಸ್ಥಾನ.!
ಅಸೂಹೆ ಆ ಶಿವನಿಗೆ ವಶಪಡಿಕೊಂಡೆಯೇನೋ ಎಂದು ಅವನ ಧ್ಯಾನ.!!!!

-


11 NOV 2021 AT 22:29

ನೆನಪಿದೆ ಮಳೆಗೆ ನಿನ್ನಾ ಸಲುಗೆ
ಮನಸಿನ ಇಳೆಗೆ ಬಿಡದು ಈ ಒಲವಾ ಜಿಡಿಯೂ,,,,,
ನೀಡದೆ ಬಿಡುಗಡೆ,ತಲುಪಲಿ ಹೇಗೆ ನಾ ನಿನ್ನ ಬಳಿಗೆ.!!

ನಡೆದ ದಾರಿ ಬಿಳ್ಕೊಟ್ಟ ಹಾಗೆ
ವಿಳಾಶವಿಲ್ಲ ನಿನ್ನ ಊರಿಗೆ,,,,,
ಮುಂದಿನ ದಾರಿ ಕವಲು, ನಾ ಸೇರಲು ನಿನ್ನ ಸಾಗಲಿ ಯಾವ ಕಡೆಗೆ.!!

ಕಾಡುವ ನೂರು ಪ್ರಶ್ನೆಯಾ ಕುರಿತು
ಹಿಂಬಾಲಿಸ ಹೊರಟೆ ಉತ್ತರ ನೂರು,,,,,
ಹೃದಯದ ಬಡಿತ ಕ್ಷಣ ನಿಂತ ಭಾವ, ನೀರವ ಮೌನ ಮೊದಲ ಬಾರಿಗೆ.!!

ಇರುಳ ಸುಳಿಗೆ ಸಿಲುಕಿದೆ ಮನಸು
ಕಣ್ಣ ತುಂಬಾ ನಿನ್ನದೇ ಕನಸು,,,,
ಸುಳಿವೇ ನೀಡದೆ ಬಂದು ನೆಲೆಸಿದೆ,ಅಂದು ಈ ಹೃದಯದ ಕೋಟೆಗೆ.!!

ಮರೆಯಲಾರೆನು ಮರೆತು ನಿನ್ನ ನಿಮಿಷ,
ವಶವಾದೆನು ದೂರಿದ್ದಷ್ಟು ಸನಿಹ,,
ಸಾಕು ಸಹಿಸಿದಷ್ಟು ವಿರಹ,
ಬೇಕಿಲ್ಲ ಬೇರೇನೂ ನಿನ್ನ ವಿನಹ.....!!!!

-


9 NOV 2021 AT 23:05

ನಿನಗಿಂತ ನಿನ್ನವರಿಲ್ಲವೋ ಜಗದಲಿ
ಹುಡುಕದಿರು ಅವರಿವರ ನಡುವಲಿ
ನನ್ನವರಾರೆಂದು ಈ ಹುಚ್ಚು ಸಂತೇಲಿ
ನೀ ಎಂದೂ ಒಬ್ಬಂಟಿ ಹುಟ್ಟುಸಾವಲಿ

ಸತ್ಯಸುಳ್ಳುಗಳ ಜಂಜಾಟ ಉಳಿದಿಲ್ಲ ಇಲ್ಲಿ
ಇಷ್ಟ ಕಷ್ಟಗಳ ತಿಕಲಾಟ ಇನ್ನೆಲ್ಲಿ
ಚಲಿಸೋ ಕಾಲಚಕ್ರದಡಿಯಲಿ
ಸಿಕ್ಕುಮಾಯ ಜೀವ ಕ್ಷಣದಲಿ

ಸಾರ್ಥಕ ಬದುಕಿನ ಬಂಡಿ
ಕಾಲುಮುರಿದು ಕೂತಿದೆ
ಮಾಯಜಿಂಕೆಯ ಬೆನ್ನೇರಿ
ಕಾಣದಷ್ಟು ದೂರ ಸಮಯ ಸರಿದು ಹೊರಟಿದೆ

ಗುರಿಯ ಗುರುತು ತಪ್ಪಿಹೋಗಿ
ಗುರುವ ವಿದ್ಯೆಗೂ ಮತಿಭ್ರಮಣೆ ನೋಡಿಗ
ಮೌಲ್ಯಗಳ ಗಾಳಿಗೆ ತೂರಿ
ಹೃದಯಗಳೇ ಬಿಕರಿಗಿವೆ ಮನಸ ಮಾರುಕಟ್ಟೆಯಲಿ ಆಗಾಗ....

-


30 OCT 2021 AT 8:35

ಹೊಂಚು ಹಾಕಿ

ಬೆನ್ನ ಹಿಂದೆ

ಹಿಂಬಾಲಿಸಿ ಬಂದ ಸಾವೇ,,

ಇರಿವ ಮುನ್ನ

ಕೊಂಚ ಹೊತ್ತು

ಪಕ್ಕ ಕೂತು ಯೋಚಿಸ ಬಾರದೆ,,

ಕ್ರೂರಿ ವಿಧಿಯ ಆಜ್ಞೆಗಿಂತ

ಮುಗ್ಧ ನಗುವ ಹೃದಯ ದೊಡ್ಡದೆಂದು.!

ತಡ ಮಾಡದೆ ದುಡುಕಿದೆ ನೀನು,

ನಿನ್ನ ಮೋಸವ ಅರಿತು

ನಿನ್ನೊಂದಿಗೆ ಮರುಮಾತಿಲ್ಲದೆ

ನಡೆದ ಮಹಾನುಭಾವ ಇವನು.!!

-


20 OCT 2021 AT 10:48

ಹೊಲಿಯ ಬಾರೆ ಈ ಹರಿದ ಹೃದಯ
ಚೂರು ಚೂರೇ ಚುಚ್ಚಿ ಪ್ರೀತಿ ವಿಷಯ
ಬಿಸಿ ಹೇರಿದೆ ನೋಡು ತನುವ ಹರೆಯ
ಇನ್ನು ಉಳಿದಿಲ್ಲ ತುಸು ಕಾಯೋ ಸಮಯ

ಹುಟ್ಟಿತಂದೇ ನಗುವ ಸದ್ದಿಗೆ ಪ್ರೀತಿ
ಬೇರೆಯಾಗಿದೆ ಗುಂಡಿಗೆ ಬಡಿಯೋ ರೀತಿ
ನಿನ್ನ ನೆನಪಲಿ ತಿಳಿಯದಾಗಿದೆ ಹಗಲು ರಾತ್ರಿ
ಕನಸ ಭೇಟಿಗೆ ಎದ್ದು ಹೊರಟೆ ಇಂಥವೇ ಫಜೀತಿ

ನಿನ್ನ ಸಾಲು ಸಾಲು ಚಿತ್ರಗಳೇ
ನನ್ನೀ ಎದೆಯ ಪರದೆಯ ಮೇಲೆ
ಬಣ್ಣವನ್ನಚಿದ ನೀ ತಾರೆ
ಮಿನುಗುವ ವೈಖರಿ ಮೀರಿದೆ ಏಲ್ಲೆ

ನೀನೊಂತರ ಹಿತವಾದ ಯಾತನೆ
ನನಗೆ ನಾ ಸಿಗುತ್ತಿಲ್ಲ ಇತ್ತೀಚೆಗೆ ಸುಮ್ಮನೆ
ತುರ್ತಾಗಿ ರವಾಣಿಸಬೇಕಿದೆ ನನ್ನೆಲ್ಲಾ ತುಡಿತ ತಲ್ಲಣ್ಣ ವೇಧನೆ
ಇರಲಿ ಬಿಡು ನಿನ್ನ ಜೊತೆ ಖಾಸಾಗಿ ಸಂಭಾಷಣೆ

ಸವಿಮಾತಿಗಿಷ್ಟು ಸಕ್ಕರೆಯ ಬೆರೆಸಿ
ಮಾತುಮಾತಿಗೂ ಒಂದಿಷ್ಟು ಲಜ್ಜೆಯ ಸೇರಿಸಿ
ಮುಸ್ಸಂಜೆಯ ಸುಳಿಗಾಳಿಗೆ ಬಿಸಿಯುಸಿರ ಉಡುಗೆಯ ಹೊದಿಸಿ
ಮೋಡದ ಮರೆಯಲಿ ಹನಿ ನೀರ ಮುತ್ತಾಗಿ ಸಂಭ್ರಮಿಸಿ
ಆಗಸದ ಚುಕ್ಕಿಯ ನಮ್ಮಿಷ್ಟ ದಂತೆ ಎಣಿಸಿ
ಲೋಕವ ಮರೆತು ಅಪ್ಪಿವ ಒಮ್ಮೆ ತೀರದ ದಾಹಕೆ ಹಸಿವ ಕಲಿಸಿ...

-


Fetching ಚಂದ್ರ ಬಿಂಬ Quotes