ತೊಡೆಮೇಲೆ ಗಣಕ ಕೈಯಲ್ಲಿ mouseಉ
ಮಾಸದ ಕಡೆಗೆ ಇಲ್ಲ ಜೇಬಲ್ಲಿ ಕಾಸು|
Bankಅಲ್ಲಿ EMI, ಕೂತು ಕೂತು ನೋವು ಮೈಯಿ
ಕಾಳಗವು ಬಾಳು ITಯಲಿ - ತಿಳಿತಿಮ್ಮ-
ಕಾಳನ್ನು ಕವಡೆ ನುಂಗಿತ್ತ ನೋಡವ್ವ ತಂಗಿ ಕಾಳನ್ನು ಕವಡೆ ನುಂಗಿತ್ತಾ
ಗರ ಬೀಳದ ಕೈ, ಮೋಸ ಮಾಡುವ ಕೈ,
ಕುಲ್ಲು ಬೀಳುವ ಮನಸು ಅಲ್ಲಿ ಪಕ್ಕ ಕುತಿತ್ತಾ ತಂಗಿ ಕಾಳನ್ನು ಕವಡೆ ನುಂಗಿತ್ತಾ
ಹಣ್ಣು ಆಗದ ಕಾಯಿ, ವಂಟಿಶುಂಠಿಯ ಕಾಯಿ, ಗಟ್ಟದಮೇಲೆ ಇದ್ದ ಕಾಯಿ ಹಾಯಾಗಿ ಕುಂತಿಟ್ಟ ತಂಗಿ ಕಾಳನ್ನು ಕವಡೆ ನುಂಗಿತ್ತಾ
ನಾಲ್ಕು ಕವಡೆಯ ಆಟ, ಕಂಚು ದಾಳದ ಆಟ,
ಶಕುನಿ ಬುದ್ದಿಯ ಸಂಚನು ಬೆಳೆಸುವ ಜಗಲಿ ಆಟ ತಂಗಿ
ಕಾಳನ್ನು ಕವಡೆ ನುಂಗಿತ್ತಾ-
ಗುಟ್ಟು ರಟ್ಟಾಗುತಿಹುದೀ ಜಗದಿ,
ರಟ್ಟಾದ ಗುಟ್ಟುಗಳ ರಟ್ಟು ಕಾಣುವುದೆಂತು???
ಗುಟ್ಟಾದ ರಟ್ಟುಗಳು, ರಟ್ಟಾದ ಗುಟ್ಟುಗಳು|
ರಟ್ಟೆ ಕಟ್ಟಿದವಗೆ ಹೊರತು, ಬರೀ ರೊಟ್ಟಿತಿನುವವಗಲ್ಲ - ತಿಳಿತಿಮ್ಮ||-
ನಸುಕಿನ ಮಂಜು ಮುಸುಕು,
ನೀಲ ನಭಕೆ ಶ್ವೇತ ಉಡುಪು|
ನಂಜಕಣ್ಣಿಗೆ ಮಂದ ಬೆಳಕು,
ಹಸಿರ ಎಲೆಗೆ ಮುತ್ತ ಹೊಳಪು||
ನಡೆವ ಜನಕೆ ಚಳಿಯ ಝಲಕು,
ಹಾರೋ ಖಗಕೆ ರೆಕ್ಕೆ ಗೆಲುಪು|
ಕನಸ ಮನಕೆ ಬೆಡಗಿ ತಳಕು,
ಕವಿಯ ಕಲೆಗೆ ಗಗನ ಮೇರುಪು||
ಧರೆಗೆ ಇಳಿದ ಮೋಡ ಬಲೆಗೆ,
ಮನಸು ಮೀನು ಹಾಳೆ ಹಡಗು|
ಕವಿಯ ಕೊನೆಯ ಮಾತುಗಳಿಗೆ
ಮೌನ ಮೇಘದ ಬರಹ ಗುಡುಗು||-
ಆಡು ನೀ ಕನ್ನಡದಿ, ನೋಡ್ ನಾಲಿಗೆ ನಲಿವುದ,
ಬೇಡು ನೀ ಕನ್ನಡದಿ, ನೋಡ್ ಹರಿಹರರೆ ಕರುಣಿಪುದ|
ಬರೆ ನೀ ಕನ್ನಡದಿ, ನೋಡ್ ಅಕ್ಷರವು ನುಡಿವುದ,
ಓದು ನೀ ಕನ್ನಡದಿ, ನೋಡ್ ಜ್ಞಾನ ಒಲಿವುದ|
ಕೇಳು ನೀ ಕನ್ನಡದಿ, ನೋಡ್ ಅದರ ಮಧುರವ,
ಆಡುವುದೋ ಬೇಡುವುದೋ, ಬರೆವುದೋ ಓಡುವುದೋ,
ಸತತ ಸ್ತುತಿಸುತಿರು ಮಧು ಮಮತೆಯ ಭಾಷೆ ಕನ್ನಡವ||-
ಮನಸು ಬೆಳೆದಂತೆಲ್ಲ ಹಸಿವುಬೆಳೆವುದಯ್ಯ
ತಣಿಸಲದನೋಗೆಯುವುದು ಬಗೆಬಗೆಯ ಯುಕ್ತಿ|
ಮನುಜನೇಳಿಗೆಅದರಿಂದ; ಆ ಮನಸಿನೆಳಿಗೆಗೆ ಕೊನೆಯೆಲ್ಲಿ
ಚಿಂತಿಸೆಲೋ - ಮಂಕುತಿಮ್ಮ-
ಅಳಬೇಕು ನಗಬೇಕು, ಸಮತೆ ಶ್ರಮವಿರಬೇಕು|
ಹೊಳೆಯ ನೆರೆವೊಲು ಹೃದಯ ರಸ ಹರಿಯಬೇಕು||
ಅಲೆಯಿನರಲು ಗದ ಬಂಡೆಯವೋಲಾತ್ಮ ವಿರಬೇಕು,
ತಿಳಿದವರ ಚರಿತವದು - ಮಂಕುತಿಮ್ಮ-
ಜಟ್ಟಿ ಕಾಳಗದಿ ಗೆಲ್ಲದೊಡೆ ಗರಡಿಯ ಸಾಮು|
ಪಟ್ಟುವರಸೆಗಳೆಲ್ಲ ವಿಫಲವೆನ್ನುವೆಯೇಮ್??
ಮುಟ್ಟಿ ನೋಡವನ ಮೈಕಟ್ಟು ಕಬ್ಬಿಣ ಗಟ್ಟಿ|
ಗಟ್ಟಿತನ ಗರಡಿಫಲ - ಮಂಕುತಿಮ್ಮ||
-