ನಗಬೇಕು... ಖುಷಿ ಕೊಂಚವೇ ಇದ್ದರು.
ನಗಬೇಕು... ದುಃಖ ತೀವ್ರವಾಗಿದ್ದರು.
ನಗಬೇಕು... ಜೇಬಿನಲ್ಲಿ ಹಣವಿದ್ದಾಗ.
ನಗಬೇಕು...ಅದೇ ಹಣಕ್ಕೆ ಹೆಣಗಾಡುವಾಗ.
ನಗಬೇಕು... ಬಾಳಿನ ಬೆಳಕು ಸಿಕ್ಕಾಗ.
ನಗಬೇಕು...ಆ ಬೆಳಕೇ ಬಾಳನು ಸುಟ್ಟಾಗ.
ಜೀವನದಲ್ಲಿ ಏನೇ ಬರಲಿ...
ಮುಖದ ಮೇಲೆ ನಗವೊಂದಿರಲಿ.
-
ಎಡಬಿಡದೆ ನನ್ನ ಹಿಂಬಾಲಿಸುವಳು ಅವಳು...ಛೇ... ಅವಳಲ್ಲ ಅವಳ ನೆನಪು.
ನಿರೀಕ್ಷೆ ಇಲ್ಲದ ಅವಳ ಬರುವಿಕೆಗೆ ಕಾಯುತಿರುವೆ... ಛೇ...ನಾನಲ್ಲ...ನನ್ನ ಕನಸು.-
ನಾ ಕಂಡಂತೆ ನೀನು
ನಿನ್ನ ಮಾತು ಹೊರಟು... ಆ ಹೊರಟುತನ ನಿನ್ನ ಮನಸಿನಲಿಲ್ಲ.
ನಿನ್ನ ಜೀವನ ಶೈಲಿ ನಿರ್ದಿಷ್ಟ... ಆ ನಿರ್ದಿಷ್ಟತನ ನೀ ಬಯಸಿ ಮಾಡಿಕೊಂಡಿದಲ್ಲ.
ಸ್ನೇಹಿತರು ಅಲ್ಪವೇ ಆದರು... ಸ್ನೇಹ ಅಲ್ಪಾವಾಗಿಲ್ಲ.
ಸರಳ ಸ್ವಭಾವದವಳಾದರು... ನೀ ಎಲ್ಲರಿಗೂ ಅರ್ಥವಾಗೋದಿಲ್ಲ.
ನಿನ್ನೊಳಗು ಅಳುಕಿದೆ... ಅದ ನೀ ಯಾರೊಂದಿಗು ಹಂಚಿಕೊಳ್ಳೋದಿಲ್ಲ.
ನಿನ್ನೊಳಗು ಆಸೆಗಳಿವೆ...ಆ ಆಸೆಗಳಿಗೆ ಆಸರೆಯಾಗಿ ಇನ್ನು ನೀ ನಿಂತಿಲ್ಲ.
Life ನಾ ತುಂಬಾ seriousಆಗಿ ತಗೋಬೇಡ... ಅದು ನಿನ್ನ ತಿಂದ್ ಬಿಡುತ್ತೆ.
take it easy... ಯಾವಾಗ್ಲೂ ನಿನ್ನ ಮುಖದಲ್ಲಿ ನಗುನೇ ಇರುತ್ತೆ.
-
ಬಾಳಿನ ಎಲ್ಲಾ ತಿರುವುಗಳಿಗು ಒಂದು ಕೊನೆ ಇದೆ....
ಆ ಕೊನೆಯ ಕೊನೆಯಲ್ಲಿ ಶುರುವಿದೆ.
ಮರಳಿ ಬಾರದ ತಿರುವಿಗಾಗಿ ಪರಿತಪಿಸದೆ... ಮುಂದೆ ಬರುವ ಹೊಸ ತಿರುವುಗಳನ್ನು ನೀರಿಕ್ಷಿಸಿ.
-
ನಮ್ಗೆ ಮರ್ಯಾದೆ ಕೊಡೋರಿಗೆ... ಮರ್ಯಾದೆ.
ನಮ್ಗೆ ಪ್ರೀತಿ ಕೊಡೋರಿಗೆ... ಪ್ರೀತಿ.
ಮುಂದೆ ಪಾಲಿಸೋದು ಇದೊಂದೆ ನೀತಿ.-
ಇಡುವ ಹೆಜ್ಜೆಗಳು ನೂರಾರು... ಕಾಲುಗಳಿರುವುದು ಎರಡೇ.
ತುಡಿವ ಯೋಚನೆಗಳು ಸಾವಿರಾರು... ಇರುವುದೊಂದೆ ಬುರುಡೇ...
ಹ್ರದಯ ಇರುವುದೊಂದೇ... ಅದರಲ್ಲಿ ಕೇಳುವ ಬಡಿತದ ಸದ್ದು... ಸದಾ ನಿಂದೇ... ನಿಂದೇ... ನಿಂದೆ.-
ನಿನ್ನ ನಗುವೊಂದೇ ಸಾಕು, ನನ್ನ ದಿನಪೂರ್ತಿ ಕಳೆಯಲು...
ನಿನ್ನ ಹಾಜರಿ ಬೇಕೆ ಬೇಕು, ನಾ ಸ್ಥಿರವಾಗಿ ಉಳಿಯಲು ...
ಎಡಬಿಡದೆ ಸಾಗಿವೆ ಸಾವಿರ ಸಂಚು, ನಿನ್ನ ಸ್ನೇಹ ಗಳಿಸಲು...
ಅದೇನು ಮಾಡಬೇಕೋ ತಿಳಿಯದು, ನಿನ್ನ ಮನ ಸೆಳೆಯಲು...
ಸದ್ಯಕ್ಕೆ ನಾನು ನಿಸ್ಸಹಾಯಕ.-
ನೆನಪಿಸಿಕೋ ಒಮ್ಮೆ...
ಸದಾ ನಿನಗಾಗಿಯೇ ತುಡಿಯುತ್ತಿದ್ದ ಮನಸಾ...
ಜೊತೆಗೂಡಿ ಇಬ್ಬರು ಕಾಣುತ್ತಿದ್ದ ಕನಸಾ...
ನೆನಪಿಸಿಕೋ ಒಮ್ಮೆ...
ಎಂದೆಂದೂ ಕೈ ಬಿಡನೆಂದು ನೀ ಕೊಟ್ಟ ಭಾಷೆ...
ನನಸು ಮಾಡದೆ ಕನಸಾಗೆ ಉಳಿಸುವೆಯಾ... ನನ್ನೆಲ್ಲಾ ಆಸೆ.-
ಒಲವಲ್ಲಿ ನೋವಿರದಿದ್ದರೆ ಅದು ಒಲವಲ್ಲ...
ಅದು...ಬರೀ ನಿಮ್ಮ ಸ್ವಾರ್ಥದ ಗೆಲುವಷ್ಟೇ.
-
ಭಾಷೆಗಳು ಇರಬಹುದು ಹಲವು...
ಛಾಪು ಮೂಡಿಸಿರಬಹುದು ಕೆಲವು...
ಏನೇ ಬಂದರೂ...
ಕನ್ನಡವೇ ನಮ್ಮ ಒಲವು...
ಕನ್ನಡವೇ ನಮ್ಮ ಕುಲವು.
-