ಯಾರೆಲೆ ನೀ ಸೊಬಗಿ
ನಿದಿರೆ ಬರದ ರಾತ್ರಿಯಲಿ
ಕನಸಂತೆ ಕಾಡುವವಳು
ನನ್ನೀ ಹೃದಯವ ದೋಚಿದವಳು...!
ಮಿಂಚುತಾಳೆ ಇವಳು
ಹೊಳೆಯುತಾಳೆ ಇವಳು
ಎದೆಯಲ್ಲಿ ಕಂಪನಗಳ
ಅಲೆಯ ಎಬ್ಬಿಸಿ ಕೆಣಕುತಾಳೆ ಇವಳು...!-
ನನ್ನೊಂದಿಗೆ ಸಾದ ನಾನಿರುವೆ...
ನಗುವೆ ಚಿಟ್ಟೆಯ ಅಸ್ತಿ... read more
ಮರೆತೆ ಹೋಗಿದ್ದ ಸಾಲುಗಳನ್ನು
ಮರಳಿ ಹೆಕ್ಕಿ ತರಬೇಕಿದೆ .
ಎಲ್ಲೂ ಸಿಗದ ಖುಶಿಯ
ಪುನಃ ಪಡೆಯಬೇಕಿದೆ.
ಮಂಜು ಮುಸುಕಿದ ಮನಸನ್ನು
ಅಕ್ಷರ ಮಾಲೆಯ ಕರವಸ್ತ್ರದಿಂದ
ಸ್ವಚ್ಛಗೊಳಿಸ ಬೇಕಿದೆ...
ಮರೆಯಾಗಿ ಇರಲಾರೆನು, ಮರಳಿ ಬರಲಾರೆನು.-
ಸಂಭ್ರಮ ಮತ್ತು ಸಹಸ್ಯ
ಲೆಟ್ಸ್ 💔 ಬ್ರೇಕಪ್
ಶ್.... ಇದು ಹೃದಯಗಳ ವಿಷಯ
( ರೀಡ್ ಕ್ಯಾಪ್ಶನ್ )
↘️⬇️↙️-
ನಾನೇ ಅದರಲ್ಲಿ ಇಣುಕುವಂತಿರಬೇಕು
ಮಸ್ತಿಕದಾಳದಲ್ಲಿ ಅಚ್ಚಾಗಿ
ಮನಸ್ಸಿನಾಳದಲ್ಲಿ ಮೆಚ್ಚಾಗಬೇಕು !
ಕಣ್ಣ್ಗಳು ಪದೇ ಪದೇ
ನೋಡಬೇಕು
ತುಟಿಗಳು ಪಿಸುನುಡಿಯಲಿ
ಗುನುಗುವಂತಿರಬೇಕು !
ಬೆರಳ ತುದಿಗಳಿಗೂ
ಖುಷಿಯಾಗಬೇಕು
ಓದುತಿರೆ ಕವಿತೆಯೆ ಓದಿಸಿಕೊಂಡು
ಹೋಗುವಂತಿರಬೇಕು !
ಆಹಾ, ಅಬ್ಬಬ್ಬಾ ಅನ್ನಿಸಬೇಕು
ಕ್ಷಣವಾದರೂ ಅದ್ಭುತ ಕಲ್ಪನೆಯಲಿ ನಾ
ತೇಲುವಂತಿರಬೇಕು ...!!
- ಚಿಟ್ಟೆ...🦋
-
ಸ್ವೀಟಿ ,ಕ್ಯೂಟಿ
ಎಂದು ಹಿಂದೆ ಸುತ್ತಿ
ಮೂರು ಗಂಟು ಹಾಕಿದ್ದ ಅಂದು !
ಶಾಕಿನಿ ಡಾಕಿನಿ ಮೋಹಿನಿ
ಎಂದ್ ಹೊಗಳಿ ಪಾತ್ರೆ ,
ಅಕ್ಕಿ ತೊಳಿತವನೆ ಇಂದು !
ಹಿಂದೆ ಮುಂದೆ
ತಿರುಗ್ತಾನೆ ಇದ್ದ ಅಂದು!
ಕತ್ತು ಮಾತ್ರ ಅಡ್ಡಾದಿಡ್ಡಿ
ಮೇಲೆ ಕೆಳಗೆ ತಿರುಗಸ್ತವ್ನೆ ಇಂದು!
ನನಗೆ ನೀನೆ ಬೇಕು ಬೇಕು
ಅಂತಿದ್ದ ಅಂದು!
ನನಗಿದು ಬೇಕಿತ್ತಾ ಬೇಕಿತ್ತಾ
ಅಂತಾನೆ ಇಂದು !
"ಅಂದು ಇಂದು "
ಮುಂದು ನಾನು ನೀನು ಒಂದು 🕴️💃🏻-
ನಾಜೂಕಿನ ಪೋಷಕಿನ
ಆಧುನಿಕ ಮಹಿಳೆಯಲ್ಲ
ಇಂಗ್ಲಿಷ್ ಭಾಷೆಯ
ಪರಿಚಯ ವಿಲ್ಲದವಳು
ಮೋಜು ಮಸ್ತಿ ಪಾರ್ಟಿಯ
ಪರಿವೆ ಇಲ್ಲದವಳು
ಬಿಂಕ ಬಿನ್ನಾಣವ , ವೈಯ್ಯಾರದ
ನುಡಿಯ ಅರಿಯದವಳು
ಮೇಕಪ್ ,ಹೈ ಹೀಲ್ಸ್
ಅರ್ಥವ ತಿಳಿಯದವಳು
ಗಂಡು ಹೆಣ್ಣು ಸಮಾನರು ಎನ್ನುವ ಕಾಲದಲ್ಲಿ
ಗಂಡೆಂದರೆ ಮಾರು ದೂರ ತಲೆಯೆತ್ತದೆ ನಿಲ್ಲುವವಳು
ಇಂತಿ ನಿಮ್ಮವಳಲ್ಲದ ನಿಮ್ಮವಳು...-
ಮನೆಗೂ ಮಸಣಕ್ಕೂ ನಡುವೆ ನಿಂತಿರುವೆ
ಈ ದೇಶಕ್ಕೆನಾದರು ಉಡುಗೊರೆಯ
ಕೊಟ್ಟೆ ಕೊಡುವೆ ...
ನನ್ನ ದೂರಿ ದೂರಗೊಳಿಸುವ
ನೋವ ಕೊಡುವ
ಎಲ್ಲರ ತೊರೆದು
ಭಾವನೆಗಳ ಮುಕ್ತಗೊಳಿಸಿ
ಒಬ್ಬಂಟಿಯಾಗಿರಲ್ಚಿಸುವೆ ...
ಕ್ರೂರತನವ ನನ್ನೊಳಗೆ
ಅದುಮಿಟ್ಟೋಷ್ಟು ಹೆಚ್ಚುವ
ನಾ ನಿಶಾಚರಿ ರಕ್ಕಸಿಯೂ...!
ಮನಸೆಳೆವ ಮೋಹಕ ನಗುವ ಹೆಣ್ಣಲ್ಲ
ತಂಪಿನ ರಾತ್ರಿಯಲು ಸುಡುವ
ಚಾಂದಿನಿಯಾಗ ಬಯಸುವೆ... !-
ಸುರು ಸುರುಬತ್ತಿ
ಯಾಕ ಸುಮ್ಮನೆ ನಿಂತಿ ... ?
ಅಂತಂದ್ರ ಕಡ್ಡಿ ಗಿರಾಕ ಬರ್ತಿ...-
ಓ ಹುಡುಗ
ನಾಚಿಕೆ ನವಿಲಾಗುವ ರೀತಿ
ಅಂಗೈಯಲ್ಲಿ ನೀ ಚಿತ್ರಿಸಿದ
ಮದರಂಗಿಯ ಚಿತ್ತಾರಕೆ
ನವಿರಾಗಿ ಕಂಪಿಸಿದೇನಾ ...
ಈ ಪ್ರೇಮ ಸ್ಪರ್ಶಕೆ
ಕೊಂಚ ಕೊಂಚ ಕರಗುವ
ಮೇಣದಂತಾದೇನಾ...
ನಿನ್ನೊಳಗೆ ನಾನು ಅವಿತು
ನನ್ನಲ್ಲೆ ನೀನು ಕಳೆದು
ನನ್ನ ಶೃಂಗಾರದೊಡವೆ ನೀನು
ನಾನೆಲ್ಲೆ ಮರೆಯಾದರುನು
ನನ್ನೂಡುಕಿ ಬರುವೆಯೇನು
ಸೇರಿ ನಡುವ ಪಯಣದಲಿ
ಕೈಯ ಹಿಡುವೆ ನಾನು...💕-
ನನ್ನದೆಯೊಳಗೆ ಬಚ್ಚಿಟ್ಟ
ನೀ ಕೊಟ್ಟ ಕೆಂಗುಲಾಬಿಯ
ದಳಗಳು ನನ್ನೋಡಿ ಅಣಕಿಸಿ
ಹುಚ್ಚು ಕೇಕೆಯಾಕಿ ನಗುತಲಿವೆ
ಒಂದೊಮ್ಮೆ ಪ್ರೀತಿಸಿದ್ದೆ ತಪ್ಪಾದರೆ
ಪ್ರೀತಿ ಕೊಟ್ಟದಾದರು ಏಕೆ ???
ಅದೆಷ್ಟೋ ಕನಸ ಹೊತ್ತಿದ್ದೆ ಅಂದು
ತರಗೆಲೆಯಂತೆ ತೂರಿ ಹೂತು ಹೋದೆ ಇಂದು
ಅಷ್ಟೆ ಅಲ್ಲವೆ ನೀ ನನ್ನ ಅರಿತಿದ್ದು
ಇಷ್ಟೆ ಅಲ್ಲವೆ ನೀ ನನ್ನ ಪ್ರೀತಿಸಿದ್ದು
ನಂಬಿದ ಪ್ರೀತಿಯಿಂದಲ್ಲವೆ
ಹೃದಯಕ್ಕೆ ಕೊಡಲಿ ಪೆಟ್ಟು ಬಿದ್ದದ್ದು???
ಮುಗಿದು ಹೋದ ಕನಸು ನೀನು
ಮತ್ತೆ ಹೊಸ ಮೊಗ್ಗು ಅರಳದು
ಮತ್ತೆಂದು ಬಾರದಿರು ನೆನಪುಗಳಿರಬಹುದು
ವಿನಹ ಹೃದಯದಲಿ ನೀನಿಲ್ಲ ಮರೆಯದಿರು...😔
-ಚಿಟ್ಟೆ...🦋
-