ನೆಪವಾಗಲಿ ಹೇಗೆ ಹೇಳು ನೆನಪಾಗಲು
ಸನಿಹವಾಗಲಿ ಹೇಗೆ ಹೇಳು ನಶೆಯಾಗಲು
-
ಮರುಕಳಿಸಿ ಬರುತಿದೆ
ಮರೆತ ಮರೆವೊಂದು
ಅನುಕರಿಸಿ ಬರುತಿದೆ
ಅನುದಿನವೂ ಅಳುವೊಂದು...-
ಮನವೆಂಬ ಮನೆಗೆ ಸೂರಿಲ್ಲಾ
ಆಲೋಚನೆಗಳಿಗೆ ಬಾಗಿಲಿಲ್ಲಾ
ಆದರೂ ಭಾವನೆಗಳು ಖೈದಿಯಾಗಿವೆ
ಬಿಂಬಿಸಲು ಸಾಧ್ಯವಾಗದಷ್ಟು ಬಂಧಿಯಾಗಿವೆ...-
You think life is like a star
which shines from far
But when went near
actually its burning-
ಬದಲಾಗಬೇಕು ಇದ್ದ ಹಾಗೆ ಇರಬೇಕೆಂದರೆ
ಹದವಾಗಬೇಕು ಈ ಜಗದ ನಡುವೆ ಬೆರೆಯಬೇಕೆಂದರೆ...-
ಮಳೆ ನಿಂತರೂ ಮುಗಿದಿಲ್ಲಾ ಹನಿಗಳ ಕವನ
ಮಾತು ನಿಂತರೂ ಮುಗಿದಿಲ್ಲಾ ನೆನಪುಗಳ ಪಯಣ
-
ನೀ ನಸು ನಗುವೆ ಒಮ್ಮೊಮ್ಮೆ
ಹಿಂದೆಂದೂ ನಗಲೇ ಇಲ್ಲಾ ಎಂಬಂತೆ
ನೀ ತುಸು ಅಳುವೆ ಇನ್ನೊಮ್ಮೆ
ಮುಂದಿನ್ನು ಅಳುವೆ ಎಲ್ಲಾ ಎಂಬಂತೆ...-
ಕುಟಿಲ ಜಗದೊಳು ಜಟಿಲ ಮನ
ಹುಡುಕುತಿದೆ ಮೆಲ್ಲಗೆ ತನ್ನತನ
ಸಮಸ್ಯೆಯೊಂದೇ ಕಾಣುವ ಕಾನನ
ಯಾವ ಕಡೆ ಉತ್ತಮವೋ ಪಯಣ...
-
ನಾಲ್ಕು ಜನ ಇದ್ದಾಗ ಮಾತಾಡಿದರೆ
ನೀನು ದೊಡ್ಡ ವ್ಯಕ್ತಿಯಾಗಲ್ಲಾ
ನಾಲ್ಕು ಜನ ಇದ್ದಾಗ ಮಾತೇ ಆಡದಿದ್ದರೆ
ನೀನು ಸಣ್ಣ ವ್ಯಕ್ತಿಯಾಗಲ್ಲಾ...
-
ಬರಿಯ ಬವಣೆಯ ಬದುಕು
ನಾಲ್ಕು ಪವಣೆಯ ಕನಸು
ನಮ್ಮದಲ್ಲದ ಖುಷಿಯ ದಿರಿಸು
ಆದರೂ ಹೇಗಾದರೂ ಧರಿಸು
ಸ್ವಲ್ಪ ನಿನ್ನ ಮನಸ ಸಹಿಸು...
-