ನಾವೆಲ್ಲರೂ ಕಥೆಗಳೇ
ಕೆಲವು ಹೇಳಿಕೊಂಡು
ಕೆಲವು ಹೇಳದೆ ಕೊಂದು
ಪಾತ್ರಗಳ ಸೇರಿಸಿ ಸರಿಸಿ
ಮುಂದಿನದು ತಿಳಿಯದೆ
ಹಿಂದಿನದು ಮರೆಯದೆ
ಉಸಿರು ಬತ್ತುವವರೆಗೆ
ಬರೆಯುತ್ತಲೇ ಇರುವ ಕಥೆಗಳು
-
ನಾನು ನಾನು ಎನ್ನುವ ಮನವೇ
ನನ್ನದು ನಾನು ಮಾಡಿದು ಎಂಬುವ ಜಂಬವೆ
ನನ್ನಿಂದಲೇ ಎಲ್ಲ ಎನ್ನುವ ಬುದ್ಧಿಯೇ
ಒಮ್ಮೆ ಕಣ್ಣಮುಚ್ಚಿ ನೋಡು ಜೀವವೇ
ನಿನ್ನ ಬದುಕೆಲ್ಲ ನೀನೇ ತುಂಬಿರುವೆಯ?
ನೀನು ನೀನಾಗಲು ನೀನು ಮಾತ್ರ ಸಾಕೆ?
ಎಂದು ಅರಿಯುವೆ ನೀನು
ಸಕಲ ಸೃಷ್ಟಿಯ ಋಣ ನಿನ್ನ ಮೇಲೆ ಇದೆಯೆಂದು
ನೀನು ಏನು ಅಲ್ಲವೆಂದು.-
ಎಷ್ಟಾದರೂ ಹೇಳು ಕೇಳುತ್ತಾ ಕೂರುವೆ
ಕಷ್ಟವಾದರು ಹೇಳು ಇಷ್ಟವಾದರೂ ಹೇಳು
ಮಾತಲ್ಲೇ ಹೇಳು ಮೌನದಲ್ಲೇ ಹೇಳು
ಸನ್ನೆಯಲ್ಲೆ ಹೇಳು ಮನದಲ್ಲೇ ಹೇಳು
ಏನೇ ಹೇಳು ಹೇಗೆ ಹೇಳು
ನಿನ್ನ ಕೇಳಲೆಂದೆ ನಾನಿರುವೆ
ನಿನ್ನ ಹೆಜ್ಜೇಜ್ಜೆಗು ಅನುಸರಿಸುವೆ-
ಒಡೆದ ಚೂರುಗಳ ಕೂಡಿಸಲು
ಮರೆತ ಹಾದಿಯ ನೆನೆಯಲು
ಕಳೆದ ಹೋದ ನನ್ನ ನಾನೇ ಹುಡುಕಲು-
ಏನ ಅರಸುತಿರುವೆವು ನಾವು ಇನಿಯ
ನಗುವೋ ನಗವೋ?
ಎತ್ತ ಹೋಗುತಿರುವೆವು ನಾವು
ಆಯುಷ್ಯ ಸವೆಸಲೋ ಭವಿಷ್ಯದ ಪಾಯ ಹಾಕಲೋ?
ನಾಳೆಗಾಗಿ ಇಂದೆಲ್ಲ ಮರೆತಾಯ್ತು
ಇನ್ನೆಂದು ಅಂತರ ಕಳೆಯುವ ಆಂತರ್ಯದ ಭೇಟಿ
ತಾಳ್ಮೆಯೂ ಕಳಚುತಿದೆ ಪೊರೆಯಾ
ನೀ ಮಾಡುತ್ತಿರುವುದು ಸರಿಯಾ ಇನಿಯ
ಯಾರಿಗಾಗಿ ಈ ಹೃದಯ
-
ಕುಣಿದೆ ಆಗಸದ ವೇದಿಕೆಯಲ್ಲಿ
ಸೂತ್ರ ಇನ್ಯಾರದೋ ಎಂದು ತಿಳಿದರೂ,
ತೇಲಿದೆ ಬೀಸೋ ಗಾಳಿಗೆ
ದಿಕ್ಕು ದೆಸೆ ತಿಳಿಯದಿದ್ದರೂ ,
ನಿನ್ನ ಇರುವಿಕೆಗೆ ಕಾರಣ ಸೂತ್ರವ , ಗಾಳಿಯ?
ಯಾರ ನಂಬಿ ಹಾರುತಿರುವೆ?
ನೆಲಕಚ್ಚುವ ಭಯವಿಲ್ಲದೆ
-
ಗೆದ್ದವರ ಕತೆ ಕೇಳುವವರೇ ಎಲ್ಲರೂ
ಸೋತವರ ಕತೆಯೂ ಕೇಳಬೇಕು
ಇರಬಹುದು ಅಲ್ಲೊಂದು ಪಾಠ
ಗೆದ್ದವರು ಕೂಡ ಹೇಳಲಾಗದ ಪಾಠ-
I don't know when I became those characters
The one I read ,the one I saw somewhere, the one I heard from someone
I didn't hate them, I didn't love them either but I just felt sorry for them
They loved the whole world and lived less of their own life
It's all about the happiness of their loved ones they cared about
Gave up their dreams, broke down in dark, smiled at each face
I don't know when I turned into them or is that how life is?-