27 MAY 2019 AT 17:36

ಅಂತಃಶಕ್ತಿ ಎಂದರೇನು ಎಂದು ಒಮ್ಮೆ ಕೇಳಿಕೊಳ್ಳಿ. ಹಲವಾರು ಉತ್ತರಗಳು ಬರತೊಡಗುತ್ತದೆ.  ಕೆಲವೊಮ್ಮೆ ಅಂತಃಶಕ್ತಿ ಎನ್ನುವುದು ಮೂಲವಾದ ಸಹಜ ಭಾವನೆ(Instinct)  . ಇನ್ನು ಕೆಲವೊಮ್ಮೆ ಸಹಜವಾದ  ಭಾವನೆ ಅಲ್ಲ. ಇನ್ನು ಕೆಲವೊಮ್ಮೆ ಬುದ್ಧಿಮತ್ತೆಗೆ ಸಂಪೂರ್ಣ ವಿರುದ್ಧವಾದ ಸಂಗತಿ. ಹೀಗೆ ಅದು ಹಲವಾರು ಅರ್ಥಗಳನ್ನು ತೆರೆಯುತ್ತಾ ಸಾಗುತ್ತದೆ. ಅಂತಃಶಕ್ತಿ ಸಹಜವಾದ ಭಾವನೆ (Instinct)  ಆಗಿ ಕಾಣುವುದೇಕೆಂದರೆ ಸಹಜ ಭಾವನೆ,ಮೂಲಗುಣವಿಲ್ಲದೆ ಅಂತಃಶಕ್ತಿ ಉದ್ದೀಪಿತವಾಗುವುದಿಲ್ಲ. ಅದು ಪ್ರಜ್ಞೆಯ ಒಂದು ಭಾಗ ಮತ್ತು ನಮ್ಮ ದೇಹದ್ದೇ ಒಂದು ಭಾಗ. ನೀವು ಸಹಜ ಭಾವನೆಯಿಂದ ಹೊರತಾಗಿ ಏನನ್ನೂ ಮಾಡಲಾರರಿ ಮತ್ತು ಅಂತಃಶಕ್ತಿಗೂ ಹೊರತಾಗಿ ಏನನ್ನೂ ಮಾಡಲಾರಿರಿ. ಆದರೆ ನಿಮ್ಮ ಸಹಜಭಾವನೆ ಮೂಲಗುಣವನ್ನು ನೀವು ತೃಪ್ತಿಪಡಿಸಲೇಬೇಕು. ಅದಕ್ಕೆ ಮೇವನ್ನು ಒದಗಿಸಲೇಬೇಕು. ಅದಕ್ಕೆ  ನೀವು ತೆರೆದುಕೊಳ್ಳಬೇಕು. ಅದಕ್ಕೆ ಸ್ವಾತಂತ್ರ್ಯವನ್ನು ಕೊಡಲೇಬೇಕು. ಆಗ ನೀವು ಅದರ  ಶಕ್ತಿಯನ್ನು ಕಂಡು ಚಕಿತರಾಗುವಿರಿ. ಆ ಶಕ್ತಿಯನ್ನು ಹೊತ್ತುಕೊಳ್ಳುವಿರಿ. ಆ ಶಕ್ತಿ ಅಂತಃಶಕ್ತಿಗಿಂತ ಭಿನ್ನವಾದುದಲ್ಲ.  ಆ ಶಕ್ತಿ ನಿಮಗೆ ಹಲವು ಅಮೋಘವಾದ ಉತ್ತರಗಳನ್ನು ಕೊಡಲಾರಂಭಿಸುತ್ತದೆ.

-