ಮಹಾಕಾಳಿ,ಮಹಾಲಕ್ಷ್ಮೀ, ಮಹಾಸರಸ್ವತಿ
ದುರ್ಗಾ ಆರಾಧನೆಗೆ, ಉಪಾಸನೆಗೆ, ಪಾರಾಯಣಕ್ಕೆ. ಯಾಗಗಳಿಗೆ ಉಪಯೋಗವಾಗುವ ಮಹಾಮಂತ್ರಗಳುಳ್ಳ ಮಾರ್ಕಂಡೇಯ ಮಹರ್ಷಿಯಿಂದ ದ್ರಷ್ಟವಾದ “ಸಪ್ತಶತೀ’ಯು ಮಹಾದೇವಿಯ ಆರಾಧನೆಗೆ ಕಲ್ಪಿಸಿಕೊಳ್ಳಬೇಕಾದ ಮೂರು ಸ್ವರೂಪಗಳನ್ನು ವಿವರಿಸಿವೆ. ಮಹಾಕಾಳೀ, ಮಹಾಲಕ್ಷ್ಮೀ, ಮಹಾಸರಸ್ವತೀಗಳೆ ಮೂರು ಸ್ವರೂಪಗಳು. ಅಂತೆಯೇ ಸಪ್ತಶತೀಯನ್ನು ಪ್ರಥಮ ಚರಿತೆ,ಮಧ್ಯಮ ಚರಿತೆ,ಉತ್ತಮ ಚರಿತೆಗಳೆಂದು ವಿಭಾಗಿಸಿವೆ. ಈ ಮೂರು ಚರಿತೆಗಳಿಗೆ ಅನುಕ್ರಮವಾಗಿ ಮಹಾಕಾಳೀ, ಮಹಾಲಕ್ಷ್ಮೀ, ಮಹಾಸರಸ್ವತೀ ಸ್ವರೂಪಗಳನ್ನು ಅಧಿದೇವತೆಗಳಾಗಿ ಒಪ್ಪಲಾಗಿದೆ, ಅದರಂತೆ ಪಾರಾಯಣ, ಅನುಷ್ಠಾನ, ಪುನಶ್ಚರಣೆಗಳು.
ಮಹಾಕಾಳೀ(ಮಹಾಕಾಲೀ), ಹೆಸರೇ ಧ್ವನಿಸುವಂತೆ ಒಂದು ಭೀಕರತೆಯನ್ನು ಸಾಂಕೇತಿಸುತ್ತದೆ. ಇದೇ ದುರ್ಗಾ ಪಾರ್ವತಿ ಎಂಬ ಅರ್ಥವನ್ನು ಹೇಳುತ್ತದೆ. ಮಹಾಲಕ್ಷ್ಮೀ ಎಂದರೆ ಸಂಪತ್ತಿನ ಅಧಿದೇವತೆ – ಶೋಭೆ, ಕಾಂತಿ,ಲಕ್ಷಣ ಸೌಂದರ್ಯ ಎಂದಾದರೆ ಮಹಾಸರಸ್ವತೀ ವಿದ್ಯಾಧಿ ದೇವತೆಯಾಗಿ, ಶಾರದೆಯಾಗಿ ಮಾತು( ವಾಕ್), ಜ್ಞಾನ ಎಂದು ಅರ್ಥೈಸಬಹುದು. ಈ ಮೂರು ಚರಿತೆಗಳನ್ನು ಕ್ರಮವಾಗಿ ತಾಮಸ, ರಾಜಸ, ಸಾತ್ವಿಕ ಗುಣಗಳ ವಿಕಾಸದ – ಪರಿವರ್ತನೆಯ ರೂಪಾಂತರಗಳೆಂದು ಸ್ವೀಕರಿಸಬಹುದು. ಸಪ್ತಶತೀಯು ದೇವಿಮಹಾತ್ಮ್ಯ ಎಂದೇ ಪ್ರಸಿದ್ಧ.-
ಶರದೃತು ಪ್ರಕೃತಿಯಲ್ಲಿ ಸ್ಥಿತ್ಯಂತರ ಸಂಭವಿಸುವ ವೇಳೆ. ಪ್ರಕೃತಿಮಾತೆಯ ಮೂಲಕ ಲೋಕಮಾತೆಯನ್ನು ಪೂಜಿಸುವ ಪುಣ್ಯಕಾಲ.
ನಿಸರ್ಗದ ಬದಲಾವಣೆಯನ್ನು ಗ್ರಹಿಸಿ ಬದುಕು ಕಟ್ಟಿಕೊಂಡ ಮಾನವ – ಪ್ರಕೃತಿ ಸಂಬಂಧವೇ ಅನಾದಿಯಿಂದ ಸಾಗಿಬಂದಿದೆ.ನಮ್ಮ ಆಚರಣೆಗಳೆಲ್ಲಈ ಮಾನವ ಕಲ್ಪಿತ ಸಂವಿಧಾನಕ್ಕೆ ಹೊಂದಿಕೊಂಡಿತು.
ನವರಾತ್ರಿಯು ರಮೋತ್ಸವವೂ ಹೌದು. “ರಮಾ’ ಅಂದರೆ ಲಕ್ಷ್ಮೀ, ಶೋಭೆ, ಸಮೃದ್ಧಿ ಎಂದು ಅರ್ಥ. ಭೂಮಿದೇವಿ ಫಲವಂತಿಕೆಯ ಅತಿಶಯತೆಯನ್ನು ಸಾಂಕೇತಿಸುವ ಪರ್ವಕಾಲ.ಇದು ಲಕ್ಷ್ಮೀ, ಸಂಪತ್ತಿಗೆ ಹೇತುವಾದ ಪರಿಸರವಲ್ಲವೇ ? ಹಾಗಾಗಿ ನವರಾತ್ರಿ ಸರ್ವಸಮೃದ್ಧಿ ಅನುಗ್ರಹವಾಗುವ ಕಾಲ, ಇದು ಉತ್ಸಾಹದ ಉತ್ಸವದ ಕಾಲ ಅದೇ ಲಕ್ಷ್ಮೀ ಒಲಿಯುವ ಆಮೂಲಕ ಶೋಭೆ ಮೆರೆಯುವ ಕಾಲ, ಇದುವೇ “ರಮೋತ್ಸವ’ ಕಾಲ.
ಒಂಬತ್ತು ದಿನಗಳ ಉತ್ಸವ, ಹತ್ತನೇ ದಿನದ ಸಮಾರೋಪ ಅವಭೃತ. ಇದರಿಂದ ಈ ಹತ್ತು ದಿನಗಳ ಉತ್ಸವ ಹತ್ತು ಹಗಲುಗಳು, ದಶಾರ್ಹ. ಹತ್ತುದಿನಗಳ ಅವಧಿ ದಶ + ಅಹರಾ = ದಸರಾ.”ಅಹರ’ ಎಂದರೆ ಹಗಲು ಎಂಬ ಅರ್ಥವಿದೆ.ಶಕ್ತಿ ಆರಾಧನೆಗೆ ಪ್ರಶಸ್ತಕಾಲ.”ಆಹರ’ಎಂದರೆ ಸಮೀಪಕ್ಕೆತರುವ ಎಂಬ ಅರ್ಥ ಇದೆ,ಅಂದರೆ ಮಹಾಮಾತೆಗೆ ಹತ್ತಿರದಲ್ಲಿರುವುದು ಎಂದರ್ಥ , ಹೀಗೂ ಗ್ರಹಿಸ ಬಹುದು.-
"ಗುರು” ಎನ್ನುವುದು ಒಬ್ಬ ವ್ಯಕ್ತಿ
ಎಂದು ನೋಡದೆ ನಾವು
ಒಂದು ಶಕ್ತಿ ಎಂದು
ಅರ್ಥೈಸಿ ಕೊಂಡರೆ
ನಮಗೆ ಗುರುವಿನ
ಮಹತ್ವ ಇನ್ನೂ ಹೆಚ್ಚು
ಆಳವಾಗಿ ತಿಳಿಯುತ್ತದೆ.
ಬೇರೆ ಬೇರೆ ಗುರುಗಳು
ಭೌತಿಕ ಶರೀರದಿಂದ
ಅಂದರೆ ಹೊರಗಿನಿಂದ
ನೋಡಲು ವ್ಯತ್ಯಾಸವಾಗಿದ್ದರೂ
ಅವರೆಲ್ಲರ ಒಳಗಿನ
“ಗುರು ತತ್ವ” ಮಾತ್ರ
ಒಂದೇ ಆಗಿರುತ್ತದೆ.
ಅವೆರೆಲ್ಲರೂ ಹೊರ
ಹೊಮ್ಮಿಸುವ, ಪಸರಿಸುವ
ಲಹರಿಗಳು ತುಂಬಾ
ಚೈತನ್ಯದಾಯಕವಾಗಿರುತ್ತದೆ.
ಗುರುವಿಗೆ ಯಾವಾಗಲೂ
ಶಿಷ್ಯನ ಉನ್ನತಿಯ,
ಬೆಳವಣಿಗೆಯ ಚಿಂತನೆಯೇ ಆಗಿರುತ್ತದೆ.
-
ಪ್ರಾಣಾಘಾತಾನ್ನಿವೃತ್ತಿಃ ಪರಧನಹರಣೇ
ಸಂಯಮಃ ಸತ್ಯವಾಕ್ಯಂ |
ಕಾಲೇ ಶಕ್ತ್ಯಾ ಪ್ರದಾನಂ ಯುವತಿಜನಕಥಾ
ಮೂಕಭಾವಃ ಪರೇಷಾಮ್ ||
ತೃಷ್ಣಸ್ರೋತೋವಿಭಂಗೋ
ಗುರುಷ ಚ ವಿನಯಃ
ಸರ್ವಭೂತಾನುಕಂಪಾ |
ಸಾಮಾನ್ಯಃ ಸರ್ವಶಾಸ್ತ್ರೇಷ್ವನುಪಹತವಿಧಿಃ
ಶ್ರೇಯಸಾಮೇಷ ಪಂಥಾಃ ||
ಪ್ರಾಣಹತ್ಯೆಯನ್ನು ಮಾಡದಿರುವುದು,
ಪರಧನ ತೆಗೆದುಕೊಳ್ಳುವ ವಿಷಯದಲ್ಲಿ ಮನೋ ಸಂಯಮ,
ಸತ್ಯವನ್ನೇ ಹೇಳುವುದು,
ಸಕಾಲದಲ್ಲಿ ಶಕ್ತ್ಯನುಸಾರ ದಾನ ಮಾಡುವುದು,
ಪರಸ್ತ್ರೀ ವಿಷಯದಲ್ಲಿ ಮೌನಧಾರಣೆ,
ಆಸೆಯ ಲೋಭಕ್ಕೆ ಒಳಗಾಗದಿರುವುದು,
ಗುರುಹಿರಿಯರು,ಪೂಜ್ಯರಲ್ಲಿ ವಿನಯ,
ಎಲ್ಲಪ್ರಾಣಿಗಳಲ್ಲೂ ದಯೆ,
ಇವು ಎಲ್ಲ ಶಾಸ್ತ್ರಗಳಲ್ಲಿಯೂ ಹೇಳಿರುವ,ವಿಹಿತವಾದ,
ಸರ್ವಮಾನ್ಯವಾದ ಶ್ರೇಯಸ್ಸನ್ನು ಪಡೆಯಲು ಇರುವ ಏಕೈಕ ಮಾರ್ಗ.
-
"ಆರೇ ಬಾಧಸ್ವ ದುಚ್ಛುನಾಮ್"||
(ಋಗ್.೯.೬೬.೧೯. ಸಾಮ.೬.೨೭.)
"ದುಷ್ಟ ವೇಗಗಳನ್ನು ದೂರಕ್ಕಟ್ಟಿರಿ".
ದುಷ್ಟಪ್ರವೃತ್ತಿಗಳೇ, ಕಾಮ, ಕ್ರೋಧ, ಲೋಭ, ಮೋಹ, ಮದ, ಮಾತ್ಸರ್ಯಗಳೇ ಈ ವೇಗಗಳು| ಇವುಗಳ ವೇಗವೆಷ್ಟಿರುತ್ತದೆಂದರೆ ಎಂತಹವರನ್ನೂ ಬಲುಬೇಗ ಸೆಳೆದುಬಿಡುತ್ತವೆ, ಆಕ್ರಮಿಸಿಕೊಂಡುಬಿಡುತ್ತವೆ. ಸ್ವಲ್ಪ ಅವಕಾಶಕೊಟ್ಟರೆ ಸಾಕು ಸಂಪೂರ್ಣ ಹಬ್ಬಿಕೊಂಡುಬಿಡುತ್ತವೆ. ದೂರದಲ್ಲೇ ನಿವಾರಿಸಿಕೊಂಡುಬೆಡಬೇಕು. ಈ ಕೆಲಸವನ್ನು ದೃಢಮನಸ್ಸಿನಿಂದ, ಕಠಿಣವಾಗಿ ಮಾಡಿದರೆ ಮಾತ್ರ ಜಯ ಸಾಧ್ಯ. ಈ ಕಾರ್ಯವನ್ನು ಸಮರ್ಪಕವಾಗಿ ಮಾಡಲ್ಲು ಬೇಕಾದ ಇಚ್ಛಾಶಕ್ತಿಯನ್ನು ಬಲ-ವೀರ್ಯಗಳನ್ನು, ಇವುಗಳನ್ನು ನೀಡುವಂತಹ ಸಾತ್ವಿಕ ಅನ್ನವನ್ನು ನಮಗೆ ನೀಡು ಎಂಬುದು ನಮ್ಮ ಪ್ರಾರ್ಥನೆಯಾಗಬೇಕು. ಅಂತೆಯೇ ಮಾಡುತ್ತೇನೆ ಎಂಬುದೇ ಸಂಕಲ್ಪವಾಗಬೇಕು. ಅದರಂತೆ ಅನುಷ್ಠಾನವಿಲ್ಲದಿದ್ದರೆ ಪ್ರಾರ್ಥನೆಯೆಂದಿಗೂ ಉತ್ತರಿಸಲ್ಪಡುವುದಿಲ್ಲ.-
ಮುತ್ತಿನಂತ ಪದಗಳು
ಕರೆಯದವರ ಮನೆಗೆ
ಊಟಕ್ಕೆ ಹೋಗಬೇಡ
ಕರುಣೆ ಇಲ್ಲದವರ ಹತ್ತಿರ
ಕಷ್ಟವನು ಹೇಳಬೇಡ
ಬಂದ ಭಾಗ್ಯವನು
ಕಾಲಲ್ಲಿ ಒದೆಯಬೇಡ
ಹಸಿವಿರದವಗೆ ಒತ್ತಾಯದ
ಊಟ ಬಡಿಸಬೇಡ
ಹೃದಯಹೀನರ ಹತ್ತಿರ
ಪ್ರೀತಿ ಭಿಕ್ಷೆ ಬೇಡಬೇಡ
ಹೆತ್ತವರೆದುರು ಎದೆಗೊಟ್ಟು
ಮಾತನಾಡಬೇಡ
ನದಿಮೂಲ ಹುಡುಕುವ
ತಂಟೆಗೆ ಹೋಗಬೇಡ
ದೇವರಿಲ್ಲವೆಂದು ಹುಚ್ಚು
ವಾದ ಮಾಡಬೇಡ
ನೊಂದವರ ನಿಟ್ಟುಸಿರಿಗೆ
ಕಾರಣನಾಗಬೇಡ
ಒಡಹುಟ್ಟಿದವರ ಪ್ರೀತಿಗೆ
ಪುರಾವೆ ಕೇಳಬೇಡ
ಕಂಡವರ ಎದುರಿಗೆ
ಹೆಂಡತಿಯ ನಿಂದಿಸಬೇಡ
ಗುರುಹಿರಿಯರ ಮಾತಿಗೆ
ಎದುರುತ್ತರ ಕೊಡಬೇಡ
ಅಸಹಾಯಕರ ಸ್ಥಿತಿಯ
ಕಂಡು ನಗಬೇಡ
ಸ್ನೇಹಿತನನ್ನು ನಂಬಿಸಿ
ಬೆನ್ನಿಗೆ ಚೂರಿ ಇರಿಯಬೇಡ
ಬಾಯಾರಿದಾಗ ನೀರುಕೊಟ್ಟ
ಮನೆಯನು ಮರೆಯಬೇಡ
ಯಾರನ್ನು ಅತಿಯಾಗಿ ನಂಬಿ
ಮೋಸಹೋಗಬೇಡ
ಕ್ಷೇಮವಾಗಿ ಮನೆ ತಲುಪಿಸಿದ
ದಾರಿಯನು ಮರೆಯಬೇಡ..
ಒಂಟಿ ನಾನೆನ್ನುವಾಗ, ಜೊತೆ ಬಂದ ಮನವನು ಮರೆಯಬೇಡ
ಲೋಕ ಸಮಸ್ಥ ಸುಖಿನೋ ಭವಂತು
-
ದ್ಯಾನದ ಕೊರತೆಯಿಂದಾಗಿ ಅಜ್ಞಾನ ಉಂಟಾಗುವುದು
ದ್ಯಾನ ಎನ್ನುವುದು ನಾವು ಮಾಡಿದ ಕಾರ್ಯಗಳ ಪ್ರತಿಫಲನವಾಗಿದ್ದು, ಪ್ರತಿಫಲನದ ಕೊರತೆಯಿಂದಾಗಿ ವ್ಯಕ್ತಿಯಲ್ಲಿ ಅಜ್ಞಾನವು ಬರಬಹುದು.
ಒಂದು ಕೋಣೆಗೆ ಕಾಲಕಾಲಕ್ಕೆ ಸರಿಯಾದ ಸ್ವಚ್ಛತೆಯು ಬೇಕಿರುವಂತೆ, ಮೆದುಳನ್ನು ಕೂಡ ಸರಿಯಾದ ರೀತಿಯಲ್ಲಿ ಶುದ್ಧೀಕರಿಸಬೇಕು. ಇಂದಿನ ದಿನಗಳಲ್ಲಿ ಜನರು ತುಂಬಾ
ಅಸ್ವಸ್ಥರಾಗಿರುವರು ದಿನದಲ್ಲಿ ಹಲವಾರು ಕಾರ್ಯಗಳನ್ನು ಮಾಡಿ, ಕೆಲವು ನಿರ್ಧಾರಗಳನ್ನು ಸಮಯಕ್ಕೆ ತಕ್ಕಂತೆ ತೆಗೆದುಕೊಳ್ಳುವರು.
ಸ್ವಲ್ಪವೂ ವಿಶ್ರಾಂತಿ ಪಡೆಯದೆ, ಮುಂದಿನ ಹಾದಿಯ ಬಗ್ಗೆ ಆಲೋಚನೆ ಮಾಡುವಷ್ಟು ಅವರಲ್ಲಿ ಸಮಯವಿರುವುದಿಲ್ಲ.
ಇದರಿಂದಾಗಿ ಅವರು ಅಜ್ಞಾನಿಗಳಾಗುವರು.
ಭೂಮಿ ಮೇಲಿರುವಂತಹ ಇತರ ಜೀವಿಗಳಿಗಿಂತ ಮನುಷ್ಯನು ಮೇಲಾಗಲು ಮುಖ್ಯ ಕಾರಣವೆಂದರೆ, ಆತನಲ್ಲಿ ಇರುವಂತಹ ಆಲೋಚನಾ ಶಕ್ತಿ. ಇದರಿಂದ ಮನುಷ್ಯನಾಗಿ ಇರಬೇಕಾದರೆ ಆಗ ನೀವು ಬೇರೆ ಪ್ರಾಣಿಗಳ ರೀತಿ ವರ್ತಿಸಬಾರದು. ಮನುಷ್ಯರು ಆತ್ಮಾವಲೋಕನ ಮಾಡಿಕೊಳ್ಳುವುದು ಅತೀ ಅಗತ್ಯ ಆಗಿರುವುದು. ಸರಿಯಾದ ರೀತಿಯಲ್ಲಿ ಆತ್ಮಾವಲೋಕನ ಮಾಡಲು ವಿಧಾನವೆಂದರೆ ಅದು
ದ್ಯಾನ ಮಾತ್ರ.
-
ನೀವು ದ್ವೇಷ ಮತ್ತು ಅಸೂಯೆಗಳನ್ನು ಹೊರಸೂಸಿದರೆ ಅವುಗಳು ಚಕ್ರಬಡ್ಡಿ ಸಮೇತ ನಿಮಗೇ ಹಿಂತಿರುಗುತ್ತದೆ
ಯಾವು ಶಕ್ತಿಯೂ ಅದನ್ನು ತಡೆಯಲಾರದು.
ಒಮ್ಮೆ ನೀವು ಅವುಗಳನ್ನು ಚಲಿಸುವಂತೆ ಮಾಡಿದರೆ ಅದರ ದುಷ್ಪರಿಣಾಮವನ್ನು ನೀವು ಅನುಭವಿಸಲೇಬೇಕು. ನೀವಿದನ್ನು ನೆನಪಿನಲ್ಲಿಟ್ಟುಕೊಂಡರೆ ದುಷ್ಕಾರ್ಯಗಳಿಂದ ಪಾರಾಗಬಹುದು.
ಪ್ರತಿಯೊಬ್ಬರಿಗೂ ಅನ್ವಯಿಸುತ್ತದೆ ಪ್ರಸ್ತುತ ರಾಜಕೀಯ ಸನ್ನಿವೇಶದಲ್ಲಿ ಇದನ್ನು ನೋಡಬಹುದು
-
ನೀವು ಯಶಸ್ಸನ್ನು ಪಡೆಯಲು ದೃಢ ಪ್ರಯತ್ನಬೇಕು, ಅಪಾರ ಇಚ್ಚಾಶಕ್ತಿ ಬೇಕು. ‘ನಾನು ಸಮುದ್ರವನ್ನೇ ಪಾನಮಾಡುತ್ತೇನೆ’, ಎಂದು ಪ್ರಯತ್ನಶೀಲನು ಹೇಳುತ್ತಾನೆ. ‘ನನ್ನ ಸಂಕಲ್ಪದ ಮುಂದೆ ಪರ್ವತಗಳೇ ಪುಡಿಪುಡಿಯಾಗುತ್ತವೆ’ ಎನ್ನುತ್ತಾನವನು. ಇಂತಹ ಶಕ್ತಿ ಯನ್ನೂ ಛಾತಿಯನ್ನೂ ಪಡೆಯಿರಿ; ಕಷ್ಟಪಟ್ಟು ದುಡಿಯಿರಿ, ನೀವು ಗುರಿ ಸೇರುವುದು ನಿಶ್ಚಯ.
ಸ್ವಾಮಿ ವಿವೇಕಾನಂದ-
"ವಿರೋಧವಿದ್ದಷ್ಟೂ
ಒಳ್ಳೆಯದೆ. ಒಂದು ನದಿಗೆ
ಅಡೆತಡೆಗಳಿಲ್ಲದೇ
ಇದ್ದರೆ ವೇಗ ಹುಟ್ಟುವುದೇ?
ಯಾವುದೇ ವಿಚಾರ,
ಭಾವನೆ ಹೊಸದಾಗಿದ್ದಷ್ಟೂ,
ಉತ್ತಮವಾಗಿದ್ದಷ್ಟೂ
ಅದಕ್ಕೆ ಪ್ರಾರಂಭದಲ್ಲಿ
ಅಡ್ಡಿ ಆತಂಕಗಳು ಹೆಚ್ಚು.
ವಿರೋಧವೇ ಬರಲಿರುವ
ಜಯದ ಚಿಹ್ನೆ.! ಎಲ್ಲಿ
ವಿರೋಧವಿಲ್ಲ, ಅಲ್ಲಿ ಜಯವೂ ಇಲ್ಲ.!!"
-ಸ್ವಾಮಿ ವಿವೇಕಾನಂದರು.
(ಪ್ರಸ್ತುತ ರಾಜಕೀಯ
ಸನ್ನಿವೇಶಕ್ಕೆ ಅನ್ವಯವಾಗುತ್ತದೆ)-