ಮೃದುವಾದ ಅಂಗೈಯಲ್ಲಿ
ಅರಳಿದೆ ಕನಸಿನ ರಂಗಿನ ಚಿತ್ತಾರ
ಆ ರಂಗು ರಂಗಿನ ಕನಸಿನೊಳು
ಮೂಡಲಿ ಅವನೊಲವಿನ ಶೃಂಗಾರ!-
"Writing is the painting of the voice."
4th Aug 🎈🎈
ಯಾರ ಬಳ... read more
ಪ್ರೇಮಭಾಷೆಯನ್ನು ತೋರುವ
ಆ ನಿನ್ನ ಮನೋಹರವಾದ ನಯನ
ನನ್ನ ಹೃದಯ ಗೆದ್ದ ನಿನ್ನ ತುಂಟ ನಗೆ
ಕಂಡರಷ್ಟೇ ಸಾಕೆನಗೆ
ದಿನವಿಡೀ ಹಬ್ಬದ ವಾತಾವರಣವೇ!!-
ಶಿಕ್ಷಣವೇ ಮನುಜನ ಆಸ್ತಿ
ಆ ಆಸ್ತಿಯಿಂದಲೇ ಹೆಚ್ಚಲಿ ಮನುಜನ ಸ್ಮರಣಶಕ್ತಿ
ಶಿಕ್ಷಣವಾಗದಿರಲಿ ವ್ಯಾಪಾರದ ಸಂತಿ!!
-
ಗೋಚರಿಸು ನನ್ನ ಹೃದಯಕೆ
ಪ್ರೀತಿಯ ಚಿಲುಮೆಯಾಗಿ
ನೋವು-ನಲಿವುಗಳಲ್ಲಿ ಜೊತೆಯಾಗಿ ಬಾ
ನನ್ನ ಬಾಳಿಗೆ ಅದೃಷ್ಟವಂತನಾಗಿ
ಸದಾ ಕಾಯುತಲಿರುವುದು
ಈ ನನ್ನ ಹೃದಯ ನಿನ್ನ ಬರುವಿಕೆಗಾಗಿ!!-
ಮನೆಯಂಗಳದಲ್ಲಿ ಹೆತ್ತವರ ಮಡಿಲಿನಲಿ
ಆಡಿಕೊಂಡಿದ್ದ ಈ ಪುಟ್ಟ ಮರಿಗಳು...
ಎಂದೋ ತಾಯಿಯ ಲಾಲನೆ ಪಾಲನೆಯಿಂದ
ಬೆಳೆದು ಬಲದಿಂದ ಸಾಗಿದವು ತಂತಮ್ಮ ದಾರಿಯೆಡೆಗೆ!
ರೆಕ್ಕೆ ಬಂದಮೇಲೆ....
ಹೆತ್ತವರ ತ್ಯಾಗ, ಮಮತೆ,
ಮಳೆಯಲ್ಲಿ ತಾವು ಒದ್ದೆಯಾಗಿ, ತಮ್ಮ ಮಕ್ಕಳಿಗೆ ಸೆರಗಂಚಿನಲ್ಲಿ ತೆಕ್ಕೆಯಲ್ಲಿಟ್ಟುಕೊಂಡು ರಕ್ಷಿಸಿದ ದೈವ
ಮುಪ್ಪಿನ ಸಮಯದಲ್ಲಿ ಅನಿಷ್ಟಗಳಿಗೆ ಹೊರೆಯಾದರಂತೆ!
ಬಾಯಿಯೇ ಇಲ್ಲದ ವೃದ್ಧಾಶ್ರಮದ ಗೋಡೆಗಳಿಗೆ...
ತನ್ನ ಮರಿ ಇಂದಲ್ಲ ನಾಳೆ ಬರುವುದು ಎಂಬ ಹಂಬಲ
ದೂರದೂರಿನ ಮಗನಿಗೆ ತಲುಪುವುದು ಹೇಗೆ...!!-
ಬರೆಯಲಾಗದು ಇನಿಯ
ಮನದ ಭಾವನೆಗಳನ್ನು
ಎಂದಿಗೂ ಲಿಖಿತ.
ನೂರಾರು ಕಲ್ಪನೆಗಳಿದ್ದರೂ...
ಕೊನೆಗೆ ಇರಲೇಬೇಕು
ನಿನ್ನದೇ ಅಂಕಿತ!-
ನನ್ನ ಭಾವಂತರಂಗದಲ್ಲಿ
ನಾಕುತಂತಿಯ
ಮೀಟುತಿರುವನು ಅವನು;
ಅವನ ರಾಗಕೆ
ನನ್ನೀ ಹೃದಯಬಡಿತವೇ
ಆನು ತಾನು!-
ಕನಸೊಳಗೆ ಪ್ರೇಮದ ಮಹಲನ್ನೇ ಕಟ್ಟಿ
ಮರೆಯಾದ ಮೌನ ನೀನು!
ಮತ್ತದೇ ಕನಸಲ್ಲಿ ನಿನ್ನ ಮುದ್ದಿಸಿ
ಮತ್ತೆ ಕರೆತರಲೇ ನಾನು!!-