"ದಯವಿಟ್ಟು
ಹಾಗೇ ನೋಡದಿರು
ಜಾತಕಕ್ಕೆಲ್ಲ
ಸೂತಕ
ಹುಟ್ಟುವ
ಸಂಭವವಿದೆ.. !
-- ಹೀಗೊಬ್ಬ ಅಲೆಮಾರಿ-
Materialistic
Most Selfish creature.
Self lover
With a fucking behavior.
Rgv🖤... read more
"ಜಗದ
ಪ್ರತೀ ಶಬ್ಧಕೂ
ಅಳು ಹುಟ್ಟುತಲಿದ್ದಾಗ
ನನ್ನೀ ಹೊಟ್ಟೆಯ ಹಸಿವನ್ನೋ
ಅಥವಾ
ಎದೆಯ ಆಕ್ರಂದನವನ್ನು
ನೀಗಿಸಿದ್ದು ಮಾತ್ರ
ನಿನ್ನಾ
ತುಟಿಯ ಮೊಲೆ ಹಾಲೇ ಆಗಿತ್ತು..!
-- ಹೀಗೊಬ್ಬ ಅಲೆಮಾರಿ
-
"ತುಟಿಗೆ ಯಾವ ತುತ್ತಿಕ್ಕದೇ ಕೂಡ
ವಿಷಪ್ರಾಶನ ಮಾಡಿಸುವ
ಶಕ್ತಿ ಆ ನಿನ್ನ ಕಣ್ಣಲ್ಲಿದೆ..
ಪ್ರಶ್ನೆ ತುಂಬಿದ
ಯಾವೊಂದು ನೋಟವ
ನನ್ನೆಡೆಗೆ ಬೀರದಿರು
ಬದುಕಿನ ದೃಷ್ಟಿ
ಮಾಯವಾಗುವ ಸಂಭವವಿದೆ...!
-- ಹೀಗೊಬ್ಬ ಅಲೆಮಾರಿ-
"ಆ ಆಕ್ರಂದನ ದಲ್ಲಿ
ಅದೆಷ್ಟು ಹಸಿವಿತ್ತು..
ತುಟಿಗಳನು
ಮುಳ್ಳಿಂದ
ಹೊಲಿಯುವ ಬದಲು
ಮುಳ್ಳಿನ ತೊಟ್ಟಿಲಲ್ಲಿದ್ದಾಗಲೆ
ಎನ್ನನು ಮುಟ್ಟದೇ
ಬಿಟ್ಟು ಬಿಡುಬಹುದಿತ್ತಲ್ಲ...!
-- ಹೀಗೊಬ್ಬ ಅಲೆಮಾರಿ-
"ಜಗದ ಕಣ್ಣೆಲ್ಲಾ
ನಿನ್ನ ಹರಿದ
ಸೀರೆಯ ಒಳಗೆ ಇದ್ದರೂ
ಜಗದ ಯಾವೊಂದು
ಕಣ್ಣೂ
ಬೀಳದಂತೆ
ಸೆರಗೊಳಗೆ
ಮಡಿಲು ಕೊಟ್ಟವಳು ನೀನು..!
-- ಹೀಗೊಬ್ಬ ಅಲೆಮಾರಿ-
"ಉಸಿರಾಟದ
ಸಮಸ್ಯೆಯ
ಪರಿಹಾರಕ್ಕಾಗಿ
ವೈದ್ಯರ ಹತ್ತಿರ
ಹೋಗಿದ್ದೆ
ಉಸಿರಾಡುವುದು
ಕಷ್ಟವಾದಾಗ
ನಿನ್ನ ತುಟಿಗೆ ತುಟಿ ಇಟ್ಟು
ಉಸಿರಾಡಲು ಹೇಳಿದ್ದಾರೆ
ಆಗಾಗ ಮುತ್ತಿಟ್ಟರೆ
ಕ್ಷಮೆ ಇರಲಿ
ರಸಿಕತೆ ಬಯಸುವ ಗಂಭೀರ
ಖಾಯಿಲೆ ನನ್ನದು...!
" ಹೀಗೊಬ್ಬ ಅಲೆಮಾರಿ
-
"ನಮ್ಮಿಬ್ಬರ ನಡುವೆ
ಪ್ರತೀ ಬಾರಿ ಆಗುತ್ತಿರುವ
ಕಲಹದ ಅಂತ್ಯಕ್ಕಾಗಿ
ಜ್ಯೋತಿಷಿಯ ಮೊರೆ
ಹೋಗಿ ಪರಿಹಾರ ಕೇಳಿದೆ
ಅವರು ಹೇಳಿದ್ದಾರೆ
ಸೀರೆ ಪಂಚೆಯ ಸಮಸ್ಯೆಗೆ
ಗ್ರಹಗಳು ಯಾಕಾಗಿ
ಪ್ರವೇಶಿಸುತ್ತವೆ
ಮಾತು ಶುರು ಆಗುವ ಮೊದಲೇ
ನಿನ್ನವಳ ತುಟಿಗೊಂದು
ಮುತ್ತಿಡು ಎಂದು ಹೇಳಿದ್ದಾರೆ..!
-- ಹೀಗೊಬ್ಬ ಅಲೆಮಾರಿ
-
"ಹೃದಯವನ್ನು
ಅದರ ಪಾಡಿಗೆ
ಸಮಾಧಿಯಲ್
ಇರಲು ಬಿಡುವೆನು
ಅದರ ಉಸಿರಾಟಕ್ಕಾಗಿ
ನಿನ್ನ ಹೆಸರ
ಜಪಿಸಲು ಹೇಳುವೆನು..!
-- ಹೀಗೊಬ್ಬ ಅಲೆಮಾರಿ-
"ಜೀವಂತವಾಗಿದ್ದೇನೆ
ಎನ್ನುವುದು
ಮಾತ್ರ ಪ್ರತೀ ಬಾರಿ
ಉಸಿರಾಡುವಾಗ
ಅರಿವಾಗುತ್ತಿತ್ತು
ಆದರೆ
ನೀ ಹತ್ತಿರ ಸುಳಿದು
ಹೋಗುವಾಗಲೆಲ್ಲ
ಏರು ಪೇರಾಗುತ್ತಿದ್ದ
ಹೃದಯದ ಬಡಿತದ
ಅನುಭವ ಆದಾಗಲೇ
ಜೀವಂತಿಕೆಯನ್ನು
ಬೇರೊಂದು ಹೃದಯದಿಂದ
ಪಡ್ಕೋತೀವಿ ಅನ್ನೋದು
ಅರಿವಾಗಿತ್ತು...!
-- ಹೀಗೊಬ್ಬ ಅಲೆಮಾರಿ
-