Bits of Life 365   (ಉಫಾಕು)
0 Followers · 1 Following

Joined 18 June 2021


Joined 18 June 2021
5 FEB 2022 AT 1:16

ಅ‌ಧಿಕಾರದ ದಾಹಕ್ಕೆ
ಅದೆಷ್ಟು ದ್ವೇಷ?
ಅದೆಷ್ಟು ವೇಷ?
ಎದೆಯೊಳಗೆ ನಂಜು ತುಂಬಿಸಿ
ಅಶಾಂತಿ ಹರಡಲು ಹೊರಟ
ನಿಮ್ಮೆಲ್ಲರ ಪಾಪಗಳಿಗೆ
ಬಲಿಯಾಗದಿರಲಿ
ನನ್ನ ದೇಶ.— % &

-


22 JAN 2022 AT 10:56

ನಮಗೆ ನಮ್ಮ ಹೆತ್ತವರು, ಗುರು ಹಿರಿಯರು
ನೀಡುವ ಸನ್ಮಾರ್ಗ ದರ್ಶನದ ಮಾತುಗಳು
ಅಲರ್ಜಿಯಾಗುವುದಾದರೆ
ನಮ್ಮ ಬದುಕೇ ನಮಗೆ ಅಲರ್ಜಿಯಾಗಿ ಕಾಡ ತೊಡಗುತ್ತದೆ.
ಎಚ್ಚರ...
ಸುವಿಚಾರವೇ ಸದಾಚಾರ.

-


9 DEC 2021 AT 23:09

ಜೀವನ ಪೂರ್ತಿ ದುಡಿಯದೆ ಇತರರ ಹಣದಿಂದ ಬದುಕುವ ಒಂದು ವರ್ಗವಿದೆ. ಅವರು ಸ್ವಂತ ದುಡಿಮೆಯಿಂದ ಬದುಕಬೇಕೆಂದು ಬಯಸುವುದೂ ಇಲ್ಲ. ಅವರಿಗೆ ಇನ್ನೊಬ್ಬರು ದುಡಿದು ಸಂಪಾದಿಸುವುದನ್ನು ನೋಡಿ ಅರಗಿಸಿಕೊಳ್ಳಲೂ ಆಗುವುದಿಲ್ಲ.

-


14 NOV 2021 AT 16:28


ಮುಂದಿನ ಜನಾಂಗವಾಗುವ ಇಂದಿನ ಮಕ್ಕಳಿಗೆ,
ಪರಸ್ಪರ ಪ್ರೀತಿಸುವುದನ್ನು ಕಲಿಸಿದರೆ ಚೆನ್ನಾಗಿ ಬಾಳುತ್ತಾರೆ.
ದ್ವೇಷಿಸುವುದನ್ನು ಕಲಿಸಿದರೆ ಪರಸ್ಪರ ಕಾದಾಡಿ ಸಾಯುತ್ತಾರೆ.
ಭವಿಷ್ಯದ ಆಯ್ಕೆ ನಮ್ಮ ಕೈಯಲ್ಲಿ ಇದೆ.

ಮಕ್ಕಳ ದಿನಾಚರಣೆಯ ಶುಭಾಶಯಗಳು

-


27 SEP 2021 AT 21:32

ಕೋಟಿ ಕೋಟಿ ಸಂಪಾದಿಸುವ ಸಿನಿಮಾ ತಾರೆಗಳು,
ಕ್ರಿಕೆಟ್ ತಾರೆಗಳು, ಉದ್ಯಮಪತಿಗಳು,
ದೇಶವನ್ನು ಹರಾಜಿಗೆ ಇಡುವ ರಾಜಕಾರಣಿಗಳು ದೇಶದ ಹೀರೊಗಳಲ್ಲ.

ಜೀವದ ಹಂಗು ತೊರೆದು ದೇಶ ಕಾಯುವ ಸೈನಿಕರು,
ನಮ್ಮ ಆಹಾರ ಬೆಳೆಯುವ ರೈತರು,
ನಮ್ಮನ್ನು ಪುರೋಗತಿಗೆ ಕೊಂಡೊಯ್ಯುವ ವಿಜ್ಞಾನಿಗಳೇ ನೈಜ ಹೀರೋಗಳು.

-


26 SEP 2021 AT 1:40

ಮನುಷ್ಯರೆಲ್ಲ ಇಲ್ಲಿ ಸತ್ತು ಸಮಾಧಿಯಾಗಿದ್ದಾರೆ.
ಮತ್ತೆ ಮನುಷ್ಯತ್ವ ನಿರೀಕ್ಷಿಸುವುದು ಹೇಗೆ?

ಶವದ ಮೇಲೆ ಕುಣಿದಾಡುವ ಹೀನ ಜಂತುಗಳಿರುವ
ದುರ್ಗಮ ಘಟ್ಟದಲ್ಲಿ ನಾವಿರುವುದೇ ದುರಂತವಲ್ಲವೇ?

ಓ ಕಾಲವೇ ನೀನು ಕಾಣುವುದಿಲ್ಲವೇ?

-


24 SEP 2021 AT 21:41

ಮನುಷ್ಯರ ಜೊತೆ ಮನುಷ್ಯರಾಗಿರಿ.
ಸಾವನ್ನು ಬಯಸುವ,
ಸಾವನ್ನು ಸಂಭ್ರಮಿಸುವ ಹೀನ ಜಂತುವಾಗಬೇಡಿ.

ದ್ವೇಷ ಬಿಡದೆ ಬದುಕು ಸಿಗದು.
ಪ್ರೀತಿ ಇಲ್ಲದ ಬದುಕು ಬರಡು.

ಪ್ರಜ್ಞೆ ಇರಲಿ.

-


23 SEP 2021 AT 13:00

ಯಾರ ಜೊತೆಯಾದರೂ‌ ಮಾತಾಡಬೇಕೆನಿಸಿದರೆ ಬದುಕಿರುವಾಗಲೇ ಮಾತನಾಡಿರಿ.
ಯಾಕೆಂದರೆ ಸತ್ತವರು ಮಾತಾಡಿದ ಚರಿತ್ರೆ ಇಲ್ಲ.

-


23 SEP 2021 AT 11:56

'ಯಶಸ್ವಿ ವ್ಯಕ್ತಿ'
ಎಂಬುದು ಒಂದು ಕಲ್ಪನೆ.

ನಿರ್ದಿಷ್ಟ ವಿಷಯ ಸಮಯ ಸಂದರ್ಭಗಳಿಗೆ ಅನುಸಾರವಾಗಿ ಯಶಸ್ಸು ನಿರ್ಧರಿಸಲ್ಪಡುತ್ತದೆ.

-


11 SEP 2021 AT 16:25

ಡ್ರೈವಿಂಗ್ ಒಂದು ತಪಸ್ಸು.
ಡ್ರೈವರ್ ಒಬ್ಬ ತಪಸ್ವಿ.
ಏಕೆಂದರೆ
ತಾಳ್ಮೆ ಒಂದು ತಪಸ್ಸು.
ಅಂಥ ತಪಸ್ವಿಯೇ ಉತ್ತಮ ಡ್ರೈವರ್.

-


Fetching Bits of Life 365 Quotes