Happy Friendship Day
ನೀರಿಕ್ಷಿತವಾಗಿಯೋ
ಅಥವಾ ಅನಿರೀಕ್ಷಿತವಾಗಿಯೋ
ನನ್ನೀ ಬಾಳ ಪಯಣದಲ್ಲಿ
ನನ್ನ ಜೊತೆಯಾದವರಿಗೆ..😊
ಹಿಂದೆ ಜೊತೆಯಲ್ಲಿದ್ದವರಿಗೆ..☺
ಈಗ ಜೊತೆಯಲ್ಲಿರುವವರಿಗೆ..😘
ಮುಂದೆ ಜೊತೆಯಾಗುವವರಿಗೆ..😍
ಹಾಗು ನನ್ನ ಜೊತೆಯನ್ನು
ತೊರೆದು ದೂರಾದವರಿಗೆ..😒
ತಮ್ಮ ವರ್ತನೆಯಿಂದ
ನನಗೆ ನೋವು ತರಿಸಿದವರಿಗೆ..😢
ಸವಿಪ್ರೀತಿಯ ತೋರಿ
ನನ್ನ ನೋವ ಮರೆಸಿದವರಿಗೆ..🤗
ಹತ್ತಿರವಿದ್ದರೂ ದೂರವಿರುವವರಿಗೆ..💔
ದೂರವಿದ್ದರೂ ಸಹ ಹತ್ತಿರವಿರುವವರಿಗೆ..❤
ಹೀಗೆ ಪ್ರತಿಯೊಬ್ಬರಿಗೂ ಸಹ ಈ ನಿಮ್ಮ ಸ್ನೇಹಿತನಿಂದ
ಸ್ನೇಹಿತರ ದಿನದ ನಲ್ಮೆಯ ಶುಭಾಶಯಗಳು..💞💞💞-
Engineer..👨🏻🎓
ಮಾತು ನಡೆ ನುಡಿ ಸ್ವಲ್ಪ ಒರಟು ಅನ್ಸುದ್... read more
🌺~ಭಾವೋಕ್ತಿ~🌺
ಜೀವನದಲ್ಲಿ ಬರುವಂತಹ
ಪ್ರತಿಯೊಂದು ಸವಾಲು..
ಪ್ರತಿಯೊಂದು ಸಂಘರ್ಷ..
ಪ್ರತಿಯೊಂದು ಏರಿಳಿತಗಳೂ ಸಹ
ನಮ್ಮ ಯಶಸ್ಸಿನಾ ಮೆಟ್ಟಿಲುಗಳೇ ಆಗಿರುತ್ತವೆ..
ಹ್ಹಾಗಾಗಿ..
ಧೃತಿಗೆಡದೆ ನಮ್ಮ ಗುರಿಯೆಡೆಗೆ ಮುನ್ನಡೆಯೋಣ..
ಮುಂದೆ ಸಿಕ್ಕೇ ಸಿಗುವುದು ನಮಗೆ ಸುಖದ ನಿಲ್ದಾಣ..!😊-
Its true ryt...?
ಕೆಲವೊಂದು ಬಾರಿ
ಕೆಲವೊಂದು ವಿಷಯಗಳು
ಎಷ್ಟು ವಿಚಿತ್ರ ಅಂತ ಅನ್ಸುತ್ತೆ ಅಲ್ಲಾ..
ಒಮ್ಮೊಮ್ಮೊ ಎಷ್ಟೇ ಯತ್ನಿಸಿದ್ರೂ ಸಹ
ಏನ್ ಆಗ್ತಿದೆ..
ಹೇಗ್ ಆಗ್ತಿದೆ..
ಯಾಕ್ ಹೀಗ್ ಆಗ್ತಿದೆ ಅನ್ನೋದೆ ಗೊತ್ತಾಗಲ್ಲ..
ಮತ್ತೊಮ್ಮೊಮ್ಮೆ ಗೊತ್ತಾದ್ರೂ ಸಹ
ಏನ್ ಮಾಡೋದಕ್ಕೂ ಕೂಡ ಮನ್ಸಾಗಲ್ಲ...!-
ನಿನ್ನ ಕ್ಷಮಿಸೊಲ್ಲಾ..!
ನಿದಿರೆ ಬಾರದ ನನ್ನೆಲ್ಲಾ ರಾತ್ರಿಗಳಿಗೂ
ನೀನೇ ಕಾರಣ ಅಲ್ಲವೇ..
ಹೇಳು...
ದೂರಾದ ಮೇಲೂ ಸಹ ಏತಕೆ ನೀ ಹೀಗೆ
ನನ್ನ ನೆನಪಿಗೆ ಬಂದು ಕಾಡುವೆ..??
ತಡರಾತ್ರಿಯಲ್ಲೂ ಕೂಡ
ಇದ್ದಕ್ಕಿದ್ದಂತೆ ಎಚ್ಚರವಾಗುತ್ತೇನೆ..
ಹೀಗೆ ನಿನ್ನನ್ನೇ ಕುರಿತು
ಏನಾದರೊಂದು ಗೀಚುತ್ತಲಿರುತ್ತೇನೆ..
ಒಮ್ಮೊಮ್ಮೆ ನಗುತ್ತೇನೆ,
ಮತ್ತೊಮ್ಮೆ ಅಳುತ್ತೇನೆ..
ನಿನ್ನೊಟ್ಟಿಗೆ ಕಳೆದ ಕ್ಷಣಗಳೆಲ್ಲವ ನೆನೆದು
ಕನವರಿಸುತ್ತಾ ನಾ ಮರುಗುತ್ತೇನೆ...
ಇಲ್ಲಿ ನನ್ನ ತಪ್ಪೇನಿಹುದೆಂದು ಇಂದಿಗೂ ತಿಳಿದಿಲ್ಲ..
ಬಹುಸಃ ನನ್ನೀ ಮನಸು ಎಂದಿಗೂ ನಿನ್ನ ಕ್ಷಮಿಸೊಲ್ಲಾ..!-
ಮುಟ್ಟು (Menstruation)
ಮುಟ್ಟಾಗಿಹಳೆಂದು ಮುಟ್ಟಿಸಿಕೊಳ್ಳದೆ
ಮೂಲೆಗೇತಕೆ ತಟ್ಟುವಿರಿ ಅವಳನ್ನು,
ಆ ಮುಟ್ಟಿನಾ ಮನೆಯಿಂದಲೇ ಅಲ್ಲವೇ
ನಾವೆಲ್ಲರೂ ಹೊರಬಂದದ್ದು..!!
ಅನಾದಿ ಕಾಲದಿಂದಲೂ
ನಡೆಯುತಲೇ ಇಹುದು
ಹೆಣ್ಣಿನ ಶೋಷಣೆಯು
ಹೀಗೆಯೇ ನಿರಂತರವಾಗಿ..
ವಿವಿಧ ರೀತಿಗಳಲ್ಲಿ..
ವಿಧ ವಿಧವಾದ ರೂಪಗಳಲ್ಲಿ..
ಏಕೆ..
ಅವಳೂ ನಮ್ಮಂತೆಯೇ
ಮನುಷ್ಯಳಲ್ಲವೇ..??
ಅವಳಿಗೂ ಸಹ
ಒಂದು ಮನಸ್ಸೆಂಬುವುದಿರುವುದಿಲ್ಲವೆ..??
ಮುಟ್ಟಾದ ಹೆಣ್ಣನ್ನು
ಮುಟ್ಟುವುದು ಅನಾಚಾರವಾಲ್ಲ;
ಅವಳನ್ನು ಮುಟ್ಟಿಸಿಕೊಳ್ಳದೇ
ಆಕೆಯನ್ನು ದೂರವಿಡುವುದು ಅನಾಚಾರ..
ಧರ್ಮದ ಹೆಸರಿನಲ್ಲಿ
ನಡೆಯುತಿರುವ ಧುರಾಚಾರ..!!-
ಕೇಳು ನೀ ಗೆಳತಿ..
ನೆನೆಯುವೆ ಏತಕೆ ನೀನು
ಗತಿಸಿ ಹೋದ ದಿನಗಳನ್ನು..
ಮರೆತುಬಿಡು ಗೆಳತಿ
ನಿನ್ನೆಲ್ಲ ಕಹಿ ನೆನಪುಗಳನ್ನು..
ತಪ್ಪುಗಳಾಗುವುದು ಸಹಜವೇ ಅಲ್ಲವೆ..
ಅದನ್ನೇಕೆ ನೆನೆದು ನೀ ಸುಮ್ಮನೆ ಕೊರಗುವೆ..
ಆದದ್ದು ಆಗಿ ಹೋಯಿತು
ನಡೆದುದರಲ್ಲಿ ನಿನ್ನದೇನು ತಪ್ಪಿಲ್ಲದ ಮೇಲೆ
ಯೋಚಿಸುವುದರಲ್ಲಿ ಅರ್ಥವೇನಿಹುದು...?
ಎಲ್ಲವನ್ನೂ ಮರೆತು ನೀ ಹಾಯಾಗಿರು
ಉತ್ತಮವಾದುದೆ ನಿನಗೆ ಮುಂದೆ ಸಿಗುವುದು..!
Never regret yourself for what happened in your past..
Its just a bad memory so forget it and keep moving...!-
ಅಪ್ಪುಗೆ ..💞
ಛೇ..
ನಿನ್ನ ಅಪ್ಪುಗೆಯಲ್ಲಿಷ್ಟು ಹಿತವುಂಟು ಎಂದು
ಈ ಮೊದಲೇ ನನಗೆ ತಿಳಿದಿದ್ದರೆ.....
ದಿನವಿಡೀ ಹೀಗೆ
ಅಪ್ಪಿಕೊಂಡೇ ಇರುತ್ತಿದ್ದೆ ನಿನ್ನ..!-
ಏನೆಂದು ಹೇಳಲಿ ಈ ಭಾವದ ಪರಿಯ..!
ಈ ಬದುಕು, ಈ ಬವಣೆ
ಎಲ್ಲವೂ ಎಷ್ಟೊಂದು ವಿಚಿತ್ರ ಅನ್ಸುತ್ತೆ ಅಲ್ವಾ..
ಒಮ್ಮೊಮ್ಮೆ ತುಂಬಿದಾ ಪಾತ್ರೆಯಾದರೆ
ಮತ್ತೊಮ್ಮೊಮ್ಮೆ ಖಾಲಿ.. ಖಾಲಿ..!!!
ಕೆಲವೊಮ್ಮೆ ಬೇಡೆಂದರೂ
ಬಯಸಿ ಬರುವ ಸಾಂಗತ್ಯಗಳೆಲ್ಲಾ
ಬೇಕೆಂದಾಗಲೇ ಕಣ್ಮರೆಯಾಗಿ ಹೋಗುತ್ತವೆ..
ಒಂದೆರಡು ಹಿತ ನುಡಿಗಳಿಗಾಗಿ
ಹಂಬಲಿಸುವ ಈ ಮನಕೆ
ಕೇವಲ ನಿರಾಸೆ, ಮೌನಗಳೇ
ಸಂಗಾತಿಗಳಾಗಿ ಉಳಿದು ಬಿಡುತ್ತವೆ..
ಈ ಏಕಾಂತದೊಡನಾಟವು
ಸಾಕು ಸಾಕಾಗಿಹುದೆನಗೀಗ..
ನನ್ನೆಲ್ಲಾ ಭಾವನೆಗಳಿಗು ಸ್ಪಂದಿಸುವ ಮನವಿದ್ದವರು
ಯಾರಾದರೂ ಇದ್ದರೆ ತ್ವರೆ ಮಾಡಿರಿ ಬೇಗ..!
ಇಂತಿ ನಿರೀಕ್ಷೆಯಲ್ಲಿ........-
Its my request..
Yes of course I am humble, kind
and open to everyone
But it doesn't mean
you can take me for granted..!
I too have feelings,
I too have emotions..
If you don't value or respect them means its ok,
But please don't try to play with them..
Its my humble request..🙏-
ನಮ್ಮ ಬಸವಣ್ಣ..💛❤
ಅನುಭವ ಮಂಟಪವನ್ನು ಸ್ಥಾಪಿಸಿ..
ಅಹಿಂಸಾ ವಾದವನು ಪ್ರತಿಪಾದಿಸಿ..
ಸಮಾಜದ ಪಿಡುಗುಗಳನ್ನು
ತೊಡಗಿಸಲು ಹೋರಾಡಿ..
ಲಿಂಗೈಕ್ಯರಾದರೂ ಕೂಡ
ಇಂದಿಗೂ ಬೆಳಗುತಿಹರು ನೋಡಿರಣ್ಣ..
ಇವರೇ ಸಮಾನತೆಯ ಹರಿಕಾರ..
ಕನ್ನಡಕೆ ಹಾಗು ಕರುನಾಡಿಗೆ ಸಿಂಗಾರ..
ದಯವೇ ಧರ್ಮದ ಮೂಲವೆಂದು ಸಾರಿದ
ವಚನ ಸಾಹಿತ್ಯ ರತ್ನ ನಮ್ಮ ಬಸವಣ್ಣ..🙏-