Bhimashi Siddaguli Madaloor   (Bhimashi)
5 Followers · 6 Following

Joined 9 July 2018


Joined 9 July 2018
30 MAY 2021 AT 1:05

ನಡೆದು ಬಂದ ದಾರಿಯಲ್ಲಿ
ಮರೆತು ಹೋದ ನೆನಪಿನಲ್ಲಿ
ನನ್ನ ನಾನು ಹುಡುಕಾಡುವ ಆಟದೊಳು
ನೀನು ಸಿಕ್ಕಂತಾಗಿರುವಾಗ
ನಾನು ವಿರಾಗಿಯಾಗಬೇಕೆ?
ಉರಗ ಸರವ ಮಾಡಿಕೊಂಡವನ ಆರಾಧಕನ
ನೀ ನಂಬಬೇಕೆ?
ನಾನೇ ಇಲ್ಲಿ ನನಗೆ ದೊರೆತಿಲ್ಲ... ಇನ್ನು ನಿನಗೆ...?

-


25 MAY 2021 AT 11:14

ನೋವು ಸೋಲು ಅವಮಾನಗಳಿಗೆ ಮನವ ಮಸನವ ಮಾಡಿಕೋ, ಮಸಣ ಬರುವ ಹೆಣಗಳಿಗೆ ಲೆಕ್ಕವಿಟ್ಟಿಲ್ಲ

-


24 NOV 2019 AT 18:47

ಪ್ರೇಮಕಾವ್ಯದ ಅಧಿದೇವತೆ ಜ್ವಲನಗೊಂಡಳು ಜಗತ್ತಿನ ಎಲ್ಲ ಶೋಕವ ಉಡುಗೊರೆ ಕೊಟ್ಟು !
ಬಿಡುಗಡೆ ಗೊಂಡೆ ಸಭಾಂಗಣದಿ,
ಗದ್ಗದಿತನಾಗಿ ಅಲೆದೆ ಅಲೆಮಾರಿಯ ಪಯಣದಲಿ..!
ಮೌನವೊ.. ಧ್ಯಾನವೊ..., ಕುಳಿತೆ
ಪಳಿಯುಳಿಕೆಗಳ ಮೇಲೆ ಕೊರಳಲ್ಲಿ ಸುತ್ತಿ ಸುಟ್ಟ ಅಸ್ತಿಗಳ... !
ಸ್ವತಂತ್ರನಾಗಿರುವೆ ಭಾವ ಬಂಧನಗಳ ಬಿಟ್ಟು....! ಬಯಸಿಬರುತಿಹಳು ಬಳಲಿ... ಹೃದಯಸಂಗಮದರಸಿ ನನ್ನನ್ನು ಅರಸಿ.. !!
ಹರಿಸಿ ಅಳಿಸಿ ಮರಳಿ ಕಳಿಸಲೇ? ಅಳಿಸಿದ ಮೋಗ ತಣಿಸಿ ಪಯಣಿಸಲೇ ಇನ್ನಷ್ಟು ದಾರಿ ಎಂದಿನಂತೆ ಶ್ಮಶಾನದಲ್ಲಿ..!

-


20 NOV 2019 AT 22:54

ಕೊಟ್ಟು ಹೋದ ಕೊನೆಯ ಆಸೆಗಳಿಗೆ ಭಸ್ಮ ಧರಿಸಿ ಭೂಷಣಗೊಳ್ಳಲಾರೆ.. ಡಮರು ಬಡೆದು ಕೈಲಾಸ ತಿರುಗಲಾರೆ ನಟಿಸಿ ನೃತ್ಯಗೈದು ಸ್ಮಶಾನ ವಿಲಾಸಿಯಾಗಿ ಖಂಡಿತ ಹಾಸ್ಯಗೊಳ್ಳಲಾರೆ.. ಪಾತ್ರೆ ಹಿಡಿದು ಪರಮಾನ್ನಕ್ಕಾಗಿ ಪರರ ಪರವಾನಿಗೆ ಪಡೆಯಲಾರೆ..! ಕಂಡಿಲ್ಲ ನೀನು ರುದ್ರ.. ವೀರಭದ್ರನ... ಗೂಳಿ, ನಟರಾಜ, ತ್ರಿಶೂಲನ..! ಗೊತ್ತಿಲ್ಲ ನಿನಗೆ ಜಲದಿ ಝುಳು ಝುಳುಗೊಳ್ಳುವ ನನ್ನಂತರಂಗಿ ಗಂಗೆಯ ವೈಭವ .. ! ಜಡೆಗೆ ನಾಗರಾಜನ ಸುತ್ತಿ ಅರ್ಧ ಶಶಿಯ ಅಲಂಕೃತನಾಗಿ ಕೆಂಪು ನಯನ ನೀಲವರ್ಣ ನಿರಾಭರಣ ಸುಂದರನ ನೆನಪು ನಿನ್ನ ಸ್ವಪ್ನದಲ್ಲಿ ತೇವ ಸೃಷ್ಟಿಗೊಳ್ಳಲಿಲ್ಲವೆಂದರೆ ನೆನಪಿಸು ಎನಗೆ ದೃಷ್ಟಿ ತಾಗದಂತೆ ತೋರಿಸುವೆ ಅವನ ಸೌಮ್ಯ ಶೃಂಗಾರವನ್ನು ಬೆಚ್ಚುವೆಯೋ ಎಚ್ಛೆತ್ತುಗೊಳ್ಳುವೆಯೋ ನಾ ಕಾಣೆ !!

-


16 NOV 2019 AT 0:00

ना जीने की खुशी ना मौत का गम ।।
जब तक है दम महादेव के भक्त रहेंगे हम ।।

-


7 NOV 2019 AT 12:54

क्या लेना चाहोगे इस वैरागी से !???
खुद का स्वाभीमान बि जिसने त्याग दीया
वो तुम्हे क्या दे पायेगा....!!!

-


28 OCT 2019 AT 4:17

ना किसी के अभाव मे जीता हूँ। ना किसी के प्रभाव मे जीता हूँ।
मै तो महाकाल के भक्त हूं सिर्फ उन्हीं के स्वभाव मे जीता हूँ

-


6 OCT 2019 AT 10:39

ಬದುಕಿನ ಹೊಡೆತಗಳೊoದಿಗೆ
ಜಿದ್ದಿಗೆ ಬಿದ್ದು ಬದುಕಿದವನು ನಾನು.
ಎಷ್ಟರ ಮಟ್ಟಿಗೆಯೆಂದರೆ ಆದ ಕಾರ್ಯಗಳಿಗೆ
ಇನ್ನೊಬ್ಬರನ್ನು ದೂಷಿಸುವಷ್ಟು ಅಲ್ಲ.
ನನ್ನನ್ನು ಕೊಂದುಕೊಂಡಾದರೂ ಸರಿ
ಮತ್ತೆ ಎದ್ದು ನಗುತ್ತಾ ಹೋರಾಡುವಷ್ಟು...!

-


7 SEP 2019 AT 15:33

ಬದುಕೊಂದು ಕುರುಕ್ಷೇತ್ರ,
ಇಲ್ಲಿ ಹಿಂಜರಿಯುವ ಅರ್ಜುನನೂ ನಾನೇ. ಹುರಿದುಂಬಿಸುವ ಕೃಷ್ಣನೂ ನಾನೇ.

-


23 AUG 2019 AT 22:11

ರಾಧೇಯ ಹೃದಯ ಸೂರೆಗೊಳಿಸಿ ವಿಧುರನ ಮನೆಯಲಿ ವಿರಹಿಸಿ ಪಾರ್ಥನ ಮನ ಮೃದುಗೊಳಿಸಿ ಸುಧಾಮನ ಪಾದದಡಿ ವಿಹರಿಸಿ ಪುಟ್ಟವನಿದ್ದಾಗ ಪೂತನಿಯ ಎದೆಹಾಲು ಸ್ವೀಕರಿಸಿದ ನೀಲಶಾಮ ಬಲರಾಮ ಸಹೋದರನೇ happy bday💐💐💐

-


Fetching Bhimashi Siddaguli Madaloor Quotes