Bharath M Iyengar   (ಭರತ್ ಎಂ ಐಯ್ಯಂಗಾರ್)
39 Followers · 80 Following

ಶೂನ್ಯ
Joined 24 March 2020


ಶೂನ್ಯ
Joined 24 March 2020
18 MAY 2021 AT 17:46

ಕಾಡಿನ ಹೂವುಗಳೇ ಹಾಗೆ,
ಗುಡಿಯ ಸೇರುವ ಆಸೆಯಿಲ್ಲ
ಮಸಣಕ್ಕೆ ಹೋಗುವ ಭಯವಿಲ್ಲ
ಮಾರುವವನ ಕಾಸಿನ ಹಂಗಿಲ್ಲ
ಕೊಳ್ಳುವವನ ಬಗ್ಗೆ ಚಿಂತೆಯಿಲ್ಲ
ಆದರೆ,
ಕಾಡಿನ ಹೂವಿಗೂ ಇಂದು ರಕ್ತ ಮೆತ್ತಿದೆ...!

-


18 MAY 2021 AT 14:59

ನನ್ನನ್ನು ದೂಷಿಸಿದ್ದು
ನೀನಲ್ಲ ಗೆಳತಿ..,
ನಾ ನಿನ್ನಮೇಲೆ
ಇಟ್ಟುಕೊಂಡ
ಸಣ್ಣ ಸಣ್ಣ ಆಸೆಗಳೇ
ನನ್ನ ವಿರಹಕ್ಕೆ ಕಾರಣ...

-


16 JUL 2020 AT 23:08

ಭೋರ್ಗರೆವ ಮಳೆಗಿಂತಲೂ ಭೀಕರವಾಗಿ

ನುಂಗಿಬಿಡು ಎಲ್ಲವನ್ನೂ ಸುಮ್ಮನೆ ಮೀಯುವ ಧರೆಗಿಂತಲೂ ಮೌನವಾಗಿ

-


16 JUL 2020 AT 23:04

ಸತ್ತು ಘಾಸಿಮಾಡುವುದಕ್ಕಿಂತ
ಕೃತಕ ಯಂತ್ರದಿಂದ
ಬದುಕಿರುವ ನಾಟಕವಾಡಿ
ನೋವು ನೀಡದೇ ಸುಳ್ಳು ಹೇಳೋದು ಲೇಸು

-


21 MAY 2020 AT 18:33

ಕೆಲಸಗಳ ಸಂತೆಯಲ್ಲಿ
ಸೂರ್ಯ ಚಂದ್ರರ ಪರಿವೆ ಇಲ್ಲದೆ
ರಾಕ್ಷಸನಾದ ಕರ್ತವ್ಯ
ಮಿತಿ ಮೀರಿ ಕಾಡಿದೆ
ಭಾವಗಳ ರುಜುವಾತಿಗೂ
ಅವಕಾಶ ಕೊಡದೆ...!!

-


19 MAY 2020 AT 8:13

ಹೈಕು
➖➖➖➖➖➖
ಜಾತಿ ಧರ್ಮದ
ಪರಿವೆ ಇಲ್ಲ, ಭಾರ
ಹೊತ್ತ ಭೂಮಿಗೆ
➖➖➖➖➖➖
ಅಮ್ಮ ತೋರುವ
ಉಚ್ಚ ಪ್ರೀತಿಗೆ ಲೆಕ್ಕ
ಎಂಬುದು ಶೂನ್ಯ
➖➖➖➖➖➖
ಒಂಟಿ ಮನಸು,
ಪ್ರೀತಿ ಕುಲುಮೆ; ಆತ
ಅಕ್ಕಸಾಲಿಗ

-


17 MAY 2020 AT 7:37

ಯಾವನೋ ಅವ್ನು?

ಸ್ವದೇಶಿ ವಸ್ತುಗಳಿಗೆ ಬೆಂಬಲ ಕೊಡಿ ಅಂದ್ರೆ
ಸೋನಮ್ಮ ಮತ್ತೆ ಪಪ್ಪುನಾ ದೇಶದಿಂದ ಹೊರಗೆ ಹಾಕ್ತೀರಾ? ಅಂತ ಕೇಳ್ತಿರೋದು?

-


15 MAY 2020 AT 7:49

ಕಣ್ ಅಡಕಗಳಿಗೇನೂ ಭರವಿಲ್ಲ
ಹೆಕ್ಕಿ ಹೇಳುತ್ತವೆ ತಪ್ಪುಗಳನ್ನು
ಅತಿಯಾಗಿ ತೋರುತ್ತವೆ ಎತ್ತಿ ಹಿಡಿದು
ತೃಣ ಮಾತ್ರವನ್ನೂ ಹೀಯಾಳಿಸುತ್ತವೇ
ಗೋಚರವಾಗದ್ದನ್ನೂ ಹುಡುಕುತ್ತವೆ ಬಿಡದೆ..!

ಆದರೆ, ಆದರೆ
ಈಗ ಬೇಕಿರುವುದು ತಪ್ಪು ಹೆಕ್ಕುವ ಕಣ್ ಅಡಕವಲ್ಲ
ಆತ್ಮ ನಿರ್ಭರತೆಯಲ್ಲಿ ಭಾರ ಹೊರುವ ಪಾದರಕ್ಷೆಗಳು

-


13 MAY 2020 AT 18:48

ಯಾವನೋ ಅವ್ನು?

ಪ್ರಧಾನಿ ದೇಸಿ ಉತ್ಪನ್ನ ಬಳಸಿ ಅಂದ್ರೆ
ನೂಡಲ್ಸ್ ಸಿಗತ್ತಾ ಅಂತ ಕೇಳ್ತಿರೋದು

-


12 MAY 2020 AT 22:43

ಹೈಕು
➖➖➖➖➖➖
ಅಮಲೇರಿದ
ರಕ್ಕಸಿ, ಸುಖಗಳ
ಹಸಿವಾದಾಗ
➖➖➖➖➖➖
ಸುಕ್ಕಾಯಿತಲ್ಲಾ
ಸುಖದ ಗಾದಿ; ಮೈಗೆ
ಮೈ ತೀಡಿದಾಗ

-


Fetching Bharath M Iyengar Quotes