ಪಯಣವೆತ್ತಲೋ, ಸುತ್ತಲೂ ಕತ್ತಲು,
ಹೊರಟಿದೆ ಮನ ಸಾರ್ಥಕತೆಯ ಬೆಳಕ ಹುಡುಕುತ..-
Bharath GowDa
(BHARATH GOWDA)
88 Followers · 65 Following
ಮನ ಮೆಚ್ಚೋ ಹಾಗೆ ಬರೆಯೋ ಹುಚ್ಚು ಹವ್ಯಾಸ ನನ್ನದು...
Joined 12 February 2018
25 OCT 2020 AT 0:48
ಏತಕೀ ವೇದನೆ ನನ್ನಲೀ,
ಏತಕೀ ರೋದನೆ ಎದೆಯಲಿ..
ಉಸಿರಾಟಕೂ ಹುಮ್ಮಸ್ಸಿಲ್ಲ,
ಒಡನಾಟಕೂ ವರ್ಚಸ್ಸಿಲ್ಲ..
ಮನಸೆಲ್ಲ ಮರವಾಯಿತೂ,
ನಗುವೆಂಬ ಎಲೆ ಉದುರಿ ಹೋಯಿತು...
ನಂಬಿಕೆಯೆ0ಬ ಕಾರ್ಮೋಡ ಕವಿದರೂ,
ಖುಷಿಯೆಂಬ ಮಳೆ ಸುರಿಯದಾಯಿತು...
ಜಿಗುಪ್ಸೆಯೆಂಬ ಬಿರುಗಾಳಿ,
ನಂಬಿಕೆಯೆಂಬ ಕಾರ್ಮೋಡವ ದೂರ ಹೊಯ್ಯಿತು..
-
25 OCT 2020 AT 0:35
ಕೆಂಡಾಮಂಡಲನಾದ ಹುಡುಗ..
ಹಳೇ ಹುಡುಗಿಯಾ ಕಂಡು.
ಹಳೆದುನೆಲ್ಲ ನೆನೆಸಿಕೊಂಡು,
ಕಂಡು ಅವಳ ನ್ಯೂ ಟ್ರೆಂಡು,
ಕೊರಗಿದ, ಮನದಲೇ ಮರುಗಿದಾ...
-
25 OCT 2020 AT 0:20
ಏನೆಂದು ಬರೆಯಲಿ??
ಭರವಸೆಗಳೇ ಹೋದಮೇಲೆ..
ಇನ್ಯಾರೊಟ್ಟಿಗೆ ನಾ ಬೆರೆಯಲಿ??
ನೀನೆ, ಬೇಡವೆಂದ ಮೇಲೆ..
-
25 OCT 2020 AT 0:13
ಭಯವ ಬಿಟ್ಟು, ಆ ಭಗವಂತನ ಅಭಯವಾ ತೊಟ್ಟು ಮುಂದೆ ಸಾಗಿದಾಗಲೇ..
ಪೆಟ್ಟು ತಿಂದರೂ, ಜೀವನದ ಅಟ್ಟವನ್ನಲಂಕರಿಸುವೆ..-
23 AUG 2020 AT 1:42
ಜೇವನವೆಂಬ ಬಯಲಲ್ಲಿ,
ನಾವೆಲ್ಲರೂ,
ಪ್ರೀತಿ, ಸ್ನೇಹ, ಸಂಭಂದಗಳೆಂಬ
ಆಟಗಳನ್ನು ಅಡಬಂದ ಆಟಗಾರರು..
ಇಲ್ಲಿ, ನಾವು ಅನುಭವಿಸುವ ನೋವುಗಳೇ
ಕೋಚುಗಳು,
ಕಲಿಯುವ ಪಾಠಗಳೇ ಪ್ರಶಸ್ತಿಗಳು,
ಗೆಲಿಸುವದು -ಸೋಲಿಸುವುದು
ನಿರ್ಣಾಯಕನಾದ ಆ ದೇವನಿಗೆ ಬಿಟ್ಟದ್ದು..
-