ಅಳು-ನಗವೇ ಇರಲಿ ಮನ ಸ್ಥಿರದಲ್ಲಿಡುವ
ಕಷ್ಟಗಳೇನೇ ಬರಲಿ ಬಿಡಲಾರ ಎದೆಗುಂದಲು,
ನಗುವಿನಲ್ಲಿ ನಲಿಸುವ ನಲ್ಮೆಯ ಜೊತೆಗಾರ,
ಅಳುವಿನಲ್ಲಿ ಬೆನ್ನ ತೀಡುವ ಸಾಂತ್ವಾನಗಾರ,
ಏನಾದರೂ ಜೊತೆಬಿಡದ ಜೊತೆಗಾರ
ಅಂತರಂಗವೆಂಬ ಈ ಆಪ್ತಮಿತ್ರ....-
ವರ್ಣನಾತೀತ ಈ ರಹಸ್ಯಮಯ ನಿಸರ್ಗ,
ಇದರನುಭೂತಿಯೇ ನೀಡುವುದೆಮಗೆ ಸ್ವರ್ಗ.-
🌈 *~ಕಾಮನ ಬಿಲ್ಲು~* 🌈
°°°°°°°°°°°°°°°°°°°°°°°°°°°°°°°
ಬಣ್ಣಗಳೇಳು ಜೊತೆಗೂಡಿ ಗೂಡಿ l
ಸುಂದರ ಮಳೆಬಿಲ್ಲ ಮಾಡಿ ಮಾಡಿ ll ಅ ಪ ll
ಮಾಡಿದವು ಮನಕೆ ಮೋಡಿ ಮೋಡಿ l
ತಣಿಯದಾದವು ಕಂಗಳು
ನೋಡಿ ನೋಡಿ ll ಪ ll
ಸೂರ್ಯನ ರಶ್ಮಿಗೆ ಸೋಕಿ ಹನಿಯದು l
ಕಾಮನ ಬಿಲ್ಲಾಗಿ ಮೂಡುವುದು ll
ಆಗಸದಿ ಬಾಗಿದ ಬಣ್ಣದ ಬಿಲ್ಲದು l
ನೋಡಲು ಮನಸೂರೆ ಗೊಳ್ಳುವುದು ll ೧ ll
ಬಣ್ಣ ಬಣ್ಣದ ಬಿಲ್ಲಿನ ಸುಂದರ ಮಾಲೆಯದು l
ನೀಲಾಕಾಶವ ಚೆಂದದಿ ಸಿಂಗರಿಸಿಹುದು ll
ಇಂದ್ರ ಧನುಷೆಂಬ ಮತ್ತೊಂದು ಹೆಸರ ಹೊತ್ತಿಹುದು l
ಕಾಮನ ಬಿಲ್ಲನು ನೋಡಲು ಕಣ್ಣಿಗೆ ಹಬ್ಬವಹುದು ll ೨ ll
ಗಗನದಿ ಕಣ್ಹಾಯಿಸಿ ನೋಡಲದು l
ಬಣ್ಣದ ಚಕ್ಕುಲಿಯಂತೆ ಕಾಣುವುದು ll
ಮುರಿಯಲು ಹೋದರೆ ಕೈಗೆ ಎಟುಕದು l
ನೋಡಲು ಕ್ಷಣದಿ ಮಾಯಾವಾಗುವುದು ll ೩ ll
ಜೀವನದಿ ಕೆಲವೊಮ್ಮೆ ಖುಷಿಯಾ ಕ್ಷಣಗಳು l
ಮುಗಿಲಲಿ ಮೂಡುವ ಮಳೆಬಿಲ್ಲ ತೆರನಂತೆ ll
ಅನುಭವಿಸುತಲೇ ಮನದಿ ಖುಷಿಯಾ l
ಕ್ಷಣದಲೇ ಮೂಡಿ ಮರೆಯಾಗುವಂತೆ ll ೪ ll-
ಅಂಬರದೆತ್ತರದವನು ನನ್ನಪ್ಪ
""""'''''''''"""""""""""""""""""""""
ಅಪ್ಪನೆಂಬ ಕೂಗು ಪದಗಳಿಗೆ ನಿಲುಕದ, ಕಾವ್ಯಕೆ ಮೀರಿದ ವ್ಯಕ್ತಿತ್ವವು l
ಬರೆದಷ್ಟು ಮುಗಿಯದ ಚಿಮ್ಮುವ ಸೆಲೆಯು
ಅವನಂತರಾಳವು ll ಪ ll
******** ವೈಷ್ಣವಿ ಹುಲಗಿ
ಮುಂದೆ ಕ್ಯಾಪ್ಶನ್ ನಲ್ಲಿ ಓದಿ......-
# ಟಂಕಾ #
ಮುಖವಾಡಕೆ
ಅಸತ್ಯದ ಲೇಪನ,
ಕಳಚಿದರೆ
ಅದನು, ತೋರುವುದ
ವರ ನೈಜ ಚಿತ್ರಣ !!-
~~~• ರಂಗಿನೋಕುಳಿ •~~~
ಹೋಳೀ ಬಂತು ಹೋಳೀ
ತಂದಿದೆ ರಂಗಿನೋಕುಳಿ,
ತರುವುದು ರಂಗನು ಓಕುಳಿ ಹಬ್ಬವು
ಮರಳಿ ಮರಳಿ,
ಕೊಡುವುದೆಮಗದು ಮನಕೆ
ಸಂತಸದ ಬಳುವಳಿ,
ಚಿಣ್ಣರೊಡಗೂಡಿ ರಂಗಿನ
ಆಟವ ಆಡೋಣಾ,
ರಂಗು ರಂಗಾದ ರಂಗಿನೋಕುಳಿಯಲಿ
ನಾವು ಮಿಂದೇಳೋಣಾ,
ಸಪ್ತರಂಗದು ಸೇರಿ ಬಿಳಿಯ
ಬಣ್ಣವಾಯಿತು ನೋಡಾ,
ಅದೇ ತೆರನಂತೆ ಕೂಡಿಬಾಳೋಣ
ಬಾರ ಎಲ್ಲರೊಡಗೂಡಾ,
ಸೇರಿ ನಾವೆಲ್ಲಾ ಸಂತಸದಿ ಕುಣಿಕುಣಿದು
ಹಾಡೋಣ... ಹಾಡಾ..
ಹಾಡೋಣ......ಹಾಡಾ...
-
ಅವನೆಂದರೆ ನನಗೆ
ಕೆಂಪೇರಿದಂಬರದಲಿ,
ಚುಮು ಚುಮು ಬೆಳಕಿನಲಿ,
ತನ್ನೆಳೆ ರಶ್ಮಿಯ ಸೋಕಿಸುವ,
ಹೊನ್ನ ಸುಮದಂತೆ ಹೊಳೆಯುತ,
ಬೆಳಕ ನೀಡುವ ರವಿಯಂತೆ..,-
ಕರುನಾಡ ಪತಾಕೆ
÷÷÷÷÷÷÷÷÷÷÷
ಏರುತಿರಲಿ ಹಾರುತಿರಲಿ ಕನ್ನಡದ ಪತಾಕೆl
ವರುಷಕೊಂದು ದಿನ ಕನ್ನಡದ ಈ ಅಭಿಮಾನವೇಕೆll
ಕನ್ನಡದ ನೆಲ_ಜಲದಲಿ ಬದುಕಿ
ಅಭಿಮಾನ ಶೂನ್ಯರಾಗುವುದೇಕೆ? l
ಕರುನಾಡ ಬೀಡಲ್ಲಿ ಜನಿಸಿ ಕನ್ನಡ
ಉಲಿಯದ ಉಸಿರಾಟವೇಕೆ? ll
..........,.......... ಕ್ಯಾಪ್ಷನ್ ನಲ್ಲಿ ನೋಡಿ.....
-
ನೀಡೋ ದರುಷನವ ರಾಮ ಶ್ರೀ ರಾಮ l
ಪಾದವ ತೋರೋ ನಿನ್ನ ರಾಮ ಜಯರಾಮ ll ಪ ll
ಜಪಿಸಿ ಶ್ರೀ ರಾಮ ನಾಮವ l
ಸ್ಮರಿಸಿ ಶ್ರೀ ರಾಮ ನಾಮವ l
ಪಾಮರರ ಸಲಹಿದ ನುಡಿಯಲು
ಶ್ರೀ ರಾಮ ನಾಮವ ll ಅ.ಪ ll
ಯುಕ್ತಿಯಲೆ(ಜ್ಞಾನ) ಸ್ಮರಿಸಿದವಗೆ ದುರ್ಮತಿಗಳ ಕಳೆವಾ l
ಭಕ್ತಿಯಲೆ ಭಜಿಸಿದವಗೆ ನೀಡುವನು ಸುಖವಾ ll
ವೈರಾಗ್ಯದಿ ಬೇಡಿದವಗೆ ಕಳೆವನು ಬಂಧನವಾ l
ತ್ರಿಗುಣಗಳಿಂ ಪೂಜಿಪಗೆ ಈವನು ಕೈವಲ್ಯವಾ ll ೧ ll
ನಿನ್ನ ನಾಮ ಶ್ರವಣವೇ ಮನಕೆ ಆನಂದವು l
ನಿನ್ನ ಸ್ಮರಣೆಯೇ ಸಕಲ ದೋಷಗಳನು ದೂರ ಮಾಡುವುವು ll
ನಿನ್ನ ಮಹಿಮೆಯ ಕೊಂಡಾಡಲದೇ ದೊಡ್ಡ ತಪವು l
ನಿನ್ನ ಸಂಕೀರ್ತನೆಯ ಮಾಡಲು ನಿತ್ಯದಲಿ ಏತರ ಭಯವಿಲ್ಲವು ll ೨ ll
ಅನುದಿನ ಸ್ಮರಿಸಲು, ನಾಶಮಾಡುವನು ಮನದ ತಮವನು l
ಮಾನದಿಂ ಪಾಲಿಪನು ರಾಮನು ಧ್ಯಾನಿಸಲು ಸಜ್ಜನರನುll
ತನುವಲ್ಲಿ ಬಲವಿಲ್ಲದಿರೆ , ಸ್ಮರಣೆ ಮಾತ್ರದಲೆ ಸಲಹುವನು l
ನೆನೆದೊಡೆ *"ಶ್ರೀಯಃಪತಿಯ"* ನಾಮವ , ಅನುನಯದಿ ಪೊರೆವನು ll ೩ ll-