*ನಾಡ ಹಬ್ಬ* - *ದಸರಾ*
ಬನ್ನಿ ಬಂಗಾರವಾಗಲಿ
ಮಡಿ ಸಿಂಗಾರವಾಗಲಿ
ಮಾವಿನ ಎಲೆ ತೋರಣವಾಗಲಿ
ನುಡಿ ಮಾತು ಮುತ್ತಾಗಲಿ
ನೂರಕಾಲ ನಗುನಗುತ್ತಾ ಬಾಳಲಿ
ಈ ಜೀವನ ..
ನವ ದುರ್ಗೆಯ ಪೂಜಿಸಿ
ಸಡ ಸಡಗರದಿ ಹರಿಸಿ
ದಸರಾ ಬರುವುದು ನವರಾತ್ರಿ ಕೊನೆದಿನ
ಹಬ್ಬಕ್ಕ ಕಾಯುವುದು ದಿನ ದಿನ
ನೋಡಲು ಬಹು ಚಂದ
ನವ ದುರ್ಗೆಯ ಕತೆ ಅಂದ
ಶೃಂಗಾರದಲ್ಲಿ ಹೊಳೆಯುವ ಚಾಮುಂಡಿ
ಹೊತ್ತು ತರುತ್ತಿದೆ ಅಂಬಾರಿ
ಬಣ್ಣ ಬಣ್ಣದ ಸೀರೆ ಉಟ್ಟು ನೋಡತ್ತ
ನಿಂತಾಳ ನಮ್ಮೂರ ನಾರಿ
ಮೆರೆವಣಿಗೆ ನೋಡತ ಮೈ ಮರತ್ತಾಳ ಚೋರಿ
ಜನಸಾಗರ ನೋಡಿ ಬೆರಗಾಗ್ಯಾಳ ಬಾರಿ
ಇದು ನಾಡ ಹಬ್ಬ
ಮಲ್ಲಿಗೆ ನಾಡ ,ನಾಡಿಗಿ ಆಗೈತಿ ಹೆಸರ
ಅಂಬಾರಿ ಮೈಲಿ ನಡದೈತಿ ದಸರ
ಮಿಂಚು ಹೊಳಿತೈತಿ ಮೈಸೂರ ಅಂಬರ
ಬೆಳಗಿನ ಹೊಳೆಯಲ್ಲಿ ಸೇರೈತಿ ಜನಸಾಗರ
ನವ ದುರ್ಗೆಯರು
ನವ ಅವತಾರ ಹೊತ್ತು
ನವ ರಾಕ್ಷಸರ ಕೊಂದ
ನವದಿನಗಳ ಸಂಭ್ರಮದಿ ಸುತ್ತು
ನಮ್ಮ ಮೈಸೂರು ,ನಮ್ಮ ನಾಡು
ಊರ ಹಿರಿಯರೆಲ್ಲ ಸೇರಿ,ಬನ್ನಿಯ ಮರಕ್ಕೆ ಹೋಗಿ
ಬನ್ನಿಯ ಮುಡಿದಾರ,ಪೂಜೆಯ ಸಲ್ಲಿಸಿ
ಬನ್ನಿಯ ಕೊಟ್ಟು ನಾವು-ನೀವು ಬಂಗಾರದಂಗ
ಇರೋಣ ಎಂದು ಸ್ನೇಹ ಸಂದೇಶ ಸಾರ್ಯಾರ
-ಬಸವರಾಜ ಆರ್ ಪೂಜಾರ- ಬಿ.ಆರ್.ಪೂಜಾರ(ಭೂಮಾಪಕರು)
18 OCT 2018 AT 10:36