Basavaraj pujar   (ಬಿ.ಆರ್.ಪೂಜಾರ(ಭೂಮಾಪಕರು))
40 Followers · 101 Following

Joined 11 September 2018


Joined 11 September 2018
1 NOV 2022 AT 10:42

ಕನ್ನಡ ರಾಜ್ಯೋತ್ಸವದ ಶುಭಾಶಯಗಳು

ಜೀವಕ್ಕಾಗಿ ಕನ್ನಡ,ಜೀವನಕ್ಕಾಗಿ ಇಂಗ್ಲಿಷ್ ಎಂಬ ಪರಿಕಲ್ಪನೆಯಲ್ಲಿಯೇ ಪದವಿ ಪೂರ್ಣ ಗೊಳಿಸಿದ ನಾವು,ಕನ್ನಡವೆಂಬುದು ಉದ್ಯೋಗದ ಭಾಷೆಯಾದಾಗ ಅದರ ಪ್ರಜ್ವಲತೆಯೇ ಬೇರೆಯಾಗಿರುತ್ತದೆ. ಆ ನಿಟ್ಟಿನಲ್ಲಿ ಈ ಒಕ್ಕೂಟ ವ್ಯವಸ್ಥೆ ಪ್ರಬುದ್ಧವಾಗಬೇಕಿದೆ.

-


5 SEP 2022 AT 14:44

ಅಜ್ಞಾನದ ಕತ್ತಲೆಯನ್ನು ಕಿತ್ತಿ
ಸುಜ್ಞಾನದ ಜ್ಯೋತಿ ಬೆಳಗಿಸಿ
ಅರಿವಿನೆಡೆಗೆ ನೆಡೆಸುವ
ನಲ್ಮಯ ಶಿಕ್ಷಕರಿಗೆ
ಶಿಕ್ಷಕರ ದಿನದ ಶುಭಾಶಯಗಳು💐💐💐💐🙏🏻🙏🏻

-


1 SEP 2022 AT 18:46

ಒಬ್ಬರಿಗೆ ಅಣಬೆ ಆಹಾರ
ಬಡವರ ಹಸಿವಿಗೆ ಭಜನೆ ಪರಿಹಾರ
ಯುವಕರಿಗೆ ಪಕೋಡ ಆಧಾರ
ನೋಡ್ರೋ ನಮ್ಮ ದೇಶದ ಆಕಾರ

-


29 AUG 2022 AT 8:50


ಇಳಿ ಸಂಜೆಯ ಕೃಷ್ಣೆಯ
ಮಡಿಲಲ್ಲಿ ಮೂಡುವ
ಅವಳ ಕೆಂದುಟಿಯ ನೋಟಕ್ಕೆ
ನಾಚಿ ನೀರಾಗಿ ಸಂದಿಸುತ್ತಿಹನು
ರವಿಯು..!

-


29 AUG 2022 AT 8:39


ಸ್ಕೂಟಿ-ಬ್ಯೂಟಿ

ಮಂದಹಾಸದಲ್ಲಿಯೇ
ಹೃದಯ ಕದ್ದ ಚೆಲುವೆ
ಒಂದಾಲ್ಲ ಒಂದು ದಿನ
ಹೃದಯ ಗೆಲ್ಲುವೆ‌..!

ಅಂಕು ಡೊಂಕಿನ ರಸ್ತೆಯಲ್ಲಿ
ಹೊರಟಿತ್ತು ಸ್ಕೂಟಿ
ಕನ್ನಡಿಯಲ್ಲಿ ಪ್ರತಿಬಿಂಬಿಸುತ್ತಿತ್ತು ಬ್ಯೂಟಿ
ಅವಳ ಹಿಂದೆ ಹೊರಟಿತ್ತು ಬೈಕು
ಮುಗುಳುನಗೆಯಲ್ಲಿ ಮಾಡಿದಳು ಲೈಕು..!














-


25 AUG 2022 AT 23:50

ಆ ದೀಪಾವಳಿ ರಾತ್ರಿ ಅಂಗೈಯಲ್ಲಿ ಹಣತೆ ಹಿಡಿದು ಬೆಳಗಲು ಬರುವ ಆಕೆಯ ಹೆಜ್ಜೆ ಗೆಜ್ಜೆ ಸಪಳಕ್ಕೆ ಇಣುಕಿದೆ, ಹಣತೆ ಬೆಳಕಿನ‌ ಜ್ಯೋತಿಯಲ್ಲಿ ಮಿನುಗುತ್ತಿದ್ದ ನಕ್ಷತ್ರದಂತೆ ಆಕೆ ಮೊಗವು.
ಮಿಂಚುತ್ತಿದ್ದ ಭರವಸೆ ಬದುಕಿನ ಮೂಗುತಿ.

-


25 AUG 2022 AT 23:37

ಆಕೆ ಅಂಗೈಯಲ್ಲಿ ಪಣತೆ ಹಿಡಿದು ಬೆಳಗೋ ದೀಪಾವಳಿ ದೀಪ‌ದ ಬೆಳಂದಿಗಳಲ್ಲಿ ಕಾಣುವ ಆಕೆಯ ಕಮಲದಂತ ಮೊಗ,ಬದಕಲಿ ಭರವಸೆ ಮೂಡಿಸೊ ಮುಗುಳುನಗೆಯ ಮೊಗ.

-


20 AUG 2022 AT 6:16

ದೇಶ ಪ್ರೇಮದ ಕಿಚ್ಚು ಈ ದೇಶದ ಜನರಲ್ಲಿ ಯಾವತ್ತೂ ಕಡಿಮೆಯಾಗಿಲ್ಲ,ಅವತ್ತು ನೆಹರು ಆಗಲಿ , ಶಾಸ್ತ್ರೀ ಆಗಲಿ , ಇಂದಿರಾಗಾಂಧಿ ಆಗಲಿ, ವಾಜಪೇಯಿ ಆಗಲಿ ದೇಶಕ್ಕಾಗಿ ಕರೆಕೊಟ್ಟಾಗ ದೇಶದ ಜನ ತಮ್ಮ‌ದೇಶ ಪ್ರೇಮದ ಕಿಚ್ಚು ತೋರಿಸಿದ್ದಾರೆ,ಇವತ್ತು ಮೋದಿ ಕರೆ ಕೊಟ್ಟಾಗಲು ಅಷ್ಟೇ.ಈ ದೇಶದ ಜನರಲ್ಲಿ ದೇಶ ಪ್ರೇಮದ ಕಿಚ್ಚು ಅವತ್ತು ಕಡಿಮೆ ಆಗಿಲ್ಲ,ಇವತ್ತು ಆಗಿಲ್ಲ,ಮುಂದೆಯೂ ಆಗಲ್ಲ.ಆದರೆ ಈ ರಾಜಕಾರಣಿಗಳಿಗೆ ಕೊರತೆಯಿದೆ.ಅವರ ಕೊರತೆ ತುಂಬಿಸಿಕೊಳ್ಳಲು ಜನರ ನೆಡುವೆ ಕೊಳ್ಳಿ ಹಚ್ಚಿ ಅದರ ಕಾವಲ್ಲಿ ತಾವು ಬೆಚ್ಚಗಿದ್ದಾರೆ.

-


20 AUG 2022 AT 5:57

ಪ್ರೀಯ ರಾಜಕಾರಣಿಗಳೇ,
ನಮಗೆ ಧರ್ಮ ಭೋದನೆ ಮಾಡಲು ಮಠ ಮಂದಿರ ಮದರಾಸಗಳಿವೆ,
ದೇಶದ ಇತಿಹಾಸದ ಬಗ್ಗೆ ತಿಳಿಸಲು ವಿಶ್ವ ವಿದ್ಯಾಲಯಗಳಿವೆ,
ಇವುಗಳ ಬಗ್ಗೆ ಅನಾವಶ್ಯಕ ಚರ್ಚೆ ಮಾಡಿ ಕಾಲಹರಣ ಮಾಡುವುದು ಬಿಟ್ಟು,ನಿಮಗೆ ವಹಿಸಿದ ಆಡಳಿತ ಮಾಡಿ ಸಾಕು ಜನ ನೆಮ್ಮದಿಯಿಂದ ಇರುತ್ತೆ.

-


9 AUG 2022 AT 15:27

ಸುಮ್ಮನೆ ಬರಲಿಲ್ಲ ಸ್ವಾತಂತ್ರ್ಯ

ಸ್ವಾತಂತ್ರ್ಯ ಚಳುವಳಿಯಲ್ಲಿ ಉಪ್ಪು ಮತ್ತು ಖಾದಿ ಬಹು ಮಹತ್ವದ ಪಾತ್ರವಹಿಸುತ್ತವೆ.
ದಂಡಿಯ ಉಪ್ಪು & ಖಾದಿಯ ಬಾವುಟ ಸ್ವದೇಶಿ ಸಂಕೇತಗಳಾಗಿದ್ದವು.ಈಗ polyester (ಪಾಲಿಯೆಸ್ಟರ್) ಬಾವುಟ ಬಳಸಿ ಅದಕ್ಕೆ ಚ್ಯುತಿ ಬಾರದಂತೆ ಕಾಪಾಡಿಕೊಳ್ಳಬೇಕಿದೆ.

-


Fetching Basavaraj pujar Quotes