ರಾಮ ರಹಿಮರನ್ನೇ ನ್ಯಾಯದ ತಕ್ಕಡಿಯಲ್ಲಿಟ್ಟು, ಮಂದಿರ ಮಸೀದಿಗಾಗಿ ತೂಗುತಿಹೆವು ಮನುಷ್ಯ ಧರ್ಮವ ಬಿಟ್ಟು.
ಮಂದಿರವೋ! ಮಸೀದಿಯೋ! ಮನಸ್ಸಿಗಿಂತ ದೊಡ್ಡ ಆಲಯವು ಬೇಕೇ?
"ಕಾಣದ ರಾಮ ರಹೀಮರಿಗಿಂತ ಕಾಣುವ ಮನುಷ್ಯರನ್ನು ಗೌರವಿಸುವುದೇ ನಿಜವಾದ ಮನುಷ್ಯ ಧರ್ಮ"-
ಭಾವನೆಗಳಿಗೆ ಬರಹ ರೂಪ ನೀಡುವ ಭಾವ ಜೀವಿ.
ಭಾವನೆಗಳ ಜೊತೆ ಆಟವಾಡುವುದು... read more
ಬಾಳೆಂಬ ಜೀವನದ ದಾರೀಲಿ
ಬದುಕಿಗೆ ಜೊತೆಯಾಗುತ್ತಾ,
ಮನಸಿನ ಪುಟಗಳಿಗೆ
ಸಿಂಗಾರ ನೀಡುತ್ತಾ,
ನೆನಪಿನ ದೋಣಿಗೆ
ಮಂದಹಾಸ ತುಂಬುತ್ತಾ,
ಸಾಗಿರುವರು ದಾರಿಯ ಉದ್ದಕ್ಕೂ
ಅದೇ ಎನ್ನ ಸ್ನೇಹಿತರು.
ಸ್ನೇಹವೆಂಬ ಬಾಂಧವ್ಯದಿ ಜೊತೆಗೂಡಿ
ಸ್ನೇಹಿತವೆಂಬ ಪದಕ್ಕೆ ಹೊಸ ಅರ್ಥವ ಕೊಟ್ಟು
ಗೆಳೆಯಾ ಏನಲು ಓಡೋಡಿ ಬರುತಿರಲು
ಬೇಕಿಲ್ಲ ಸ್ನೇಹದ ಸಂಭ್ರಮ ಆಚರಣೆಗೆ ಒಂದು ದಿನ,
ಬದುಕಿರುವರೆಗೂ ಪ್ರತಿದಿನ ಅನುದಿನವೂ ಸ್ನೇಹದಿನ.-
ಬಾಳೆಂಬ ಹೂವಲಿ ನೋವೆಂದು ಇರದಿರಲಿ, ಬದುಕೆಂಬ ಪಥದಲಿ ಅಳುವೆಂದೂ ಬರದಿರಲಿ, ಬಾಳೆಂಬ ಹೂವ ಬಾಳೆ ಹಗ್ಗದಿ ಬಂಧಿಸುತಾ ಜಗಮಗಿಸಿ ಜಗ ಗೆಲ್ಲು ಈ ಜನುಮ ದಿನದಂದು. ಈ ಬಾಳೆಂಬ ಬನದಲಿ ಬಯಸಿದೆಲ್ಲವಾ ಗೆಲ್ಲುತಾ ನಿನಗಾಗಿ ನೀ ಬದುಕು ಓ ಕಾನನದ ಕುಸುಮವೇ...
ಕಾನನದ ಕಾವಂತನಿಗೆ ಮೊಗದೊಮ್ಮೆ ಶುಭ ಕಾಮನೆಗಳು-
ಪ್ರೀತಿಯ ಭಾರತೀಯರೇ
ಭಾರತದ ಪ್ರಜೆಗಳಾದ ನಾವು ನಾಳೆಯ ಚುನಾವಣೆಯಲ್ಲಿ ಭಾರತೀಯರಿಗೆ ಮತವನ್ನು ಹಾಕೋಣ.
ಮತ ಹಾಕುವ ಮುನ್ನ ಒಮ್ಮೆ ಯೋಚಿಸಿ,
ಯಾಕೆಂದರೆ ನಾಳೆ ನಾವು ಹಾಕುವ ಮತ ತಪ್ಪಿಯೂ ಇಟಲಿಯ ಇಲಿಗಳಿಗೆ ಬೀಳದಂತಿರಲಿ.
ದೇಶ ಸೇವೆಯೇ ಈಶ ಸೇವೆ.-
ನಾನೋಬ್ಬ ನಿದ್ದೆಯ ಮಾಡಿದರೆ ಅದು ನನ್ನೊಬ್ಬನ ಸುಖಕ್ಕೆ, ನಾನೊಬ್ಬ ನೇಚ್ಚೆತ್ತು ದುಡಿಯುವುದಾದರೆ ಅದು ದೇಶದ ಸುಖಕ್ಕೆಂದು ಹಗಲಿರುಳು ಶ್ರಮಿಸುತ್ತಿರುವ ಶ್ರೀ ನರೇಂದ್ರ ಮೋದಿಗೆ ನನ್ನ ಮತ.
"ಮೋದಿಗೆ ಹಾಕದ ಓಟು, ಅಭಿವೃದ್ಧಿಯ ಗಾಲಿಗೆ ಹಾಕಿದಂತೆ ಏಟು"-
ದೇಶ ಎಂಬುದು ನಮ್ಮ ಮನೆ ಇದ್ದಂತೆ
ನಮ್ಮ ಮನೆಯ ಅಧಿಕಾರ ಅನುಭವ ಇರುವ ತಂದೆಗೆ ಕೊಡಬೇಕು..... ಹೊರತು ಮೂರು ವರುಷದ ಮಗುವಿನ ಕೈಗೆ ಅಲ್ಲಾ...
ಚುನಾವಣೆ ಎಂಬ ಪಾಯಸಕ್ಕೆ, ಓಟು ಎಂಬ ತುಪ್ಪ ಬೆರೆಸಿ ಯೋಗ್ಯರನ್ನೇ ಆರಿಸಿ..
ಮನಸನ್ನಾಗಲಿ,ಮತವನ್ನಾಗಲಿ ಎಂದೆಂದಿಗೂ ಅಯೋಗ್ಯರಿಗೆ ನೀಡಬೇಡಿ, ನೀಡಿ ಕೊರಗಬೇಡಿ. ಯೋಚಿಸಿ ಮತ ಚಲಾಯಿಸಿ.-
ನಮ್ಮನ್ನೆಲ್ಲಾ ಸಲಹೋ ಈ ನಮ್ಮ ನೆಲದ ಅಭಿಮಾನಕ್ಕಾಗಿ ಒಂದು ಪುಟ್ಟ ಹೆಜ್ಜೆ ಇಡೋಣ.
ಆ ಹೆಜ್ಜೆನಾ ತೀರಾ ದೊಡ್ಡದಾಗಿ ಬೇಡ ಸಣ್ಣದಾಗಿ ಇಡೋಣ. ಬದಲಾವಣೆ ಅಂದ್ರೆ ಭಾರಿನೇ ಆಗ್ಬೇಕು,ಬೇರೆಯವರಿಂದಾನೇ ಆಗ್ಬೇಕು ಅಂತಾ ಬಯಸ್ಬೇಡಿ.. ಸಣ್ಣದಾಗೋ! ಅಥವಾ ದೊಡ್ಡದಾಗೋ! ಹೇಗಾದ್ರೂ ಆಗ್ಲಿ, ಅದು ನಮ್ಮಿಂದಾನೇ ಶುರುವಾಗ್ಲಿ.
ನಮ್ಮತನನಾ, ನಮ್ಮ ನೆಲನಾ,ನಮ್ಮ ತಾಯಿನಾ, ನಮ್ಮ ಭಾಷೆನಾ ಯಾರಿಗೂ ಬಿಟ್ಕೋಡ್ಲು ಬಾರದು, ಮಾರಿಕೊಳ್ಳಲೂ ಬಾರದು.
"ನೀವು ಬಳಸೋ ಸಾಮಾಜಿಕ ಮಾಧ್ಯಮಗಳಲ್ಲಿ (Facebook, Instagram, Twitter etc,,) ನಿಮ್ಮ ಹೆಸರುಗಳು ಕನ್ನಡದಲ್ಲಿರಲಿ ಸಾಕಷ್ಟೇ".
ಸೀತೆಯಂತೆ ಸಿಂಗಾರ ಮಾಡ್ಕೊಂಡು ಮುದ್ದಾಗಿ ಕಾಣೋ ಅಕ್ಷರಗಳನ್ನ ನೋಡೋದೇ ಚಂದ.
ಎಲ್ರೂ ಕೈ ಜೋಡಿಸೋಣ..
ಇದು ಒಂದು ಟ್ರೆಂಡ್ ಆಗ್ಲಿ,..
"ಕನ್ನಡಕ್ಕಾಗಿ ಕನ್ನಡಾನೇ ಒತ್ತಿ ಅಭಿಯಾನ"-
"ಮತದಾನವೇ ನಮಗಿರುವ ವರದಾನ"
ನನ್ನ ಮತವನ್ನು ಕೊಂಡುಕೊಳ್ಳುವಷ್ಟು ಶ್ರೀಮಂತರು ಯಾರು ಇಲ್ಲ.
ನನ್ನ ಮತವನ್ನು ಮಾರಿಕೊಳ್ಳುವಷ್ಟು ಬಡತನವು ನನಗೆ ಬಂದಿಲ್ಲ.
ನನ್ನ ಮತ ನನ್ನ ಹೆಮ್ಮೆ.-
"ನನ್ನ ಜನನಿ_ಜನಕರು ನನ್ನೆದೆಯ ಆರಾಧಕರು"
ನನ್ನ ಪ್ರೀತಿಯ ಅಮ್ಮನೇ ನನಗೆ ಬ್ರಹ್ಮಾಂಡ ಜನನಿಯಿಲ್ಲದೆ ಜನಿಸಿತೇನು ಬ್ರಹ್ಮಾಂಡ!
ಅತ್ತಾಗ ಅಪ್ಪುಗೆಯ ನೀಡುವ ಅಪ್ಪನೇ ನನಗೆ ಚಾಲಕ.
ನನ್ನ ಈ ಜನಕನೇ ನನ್ನುಸಿರಿನ ಮಾಲೀಕ..
ನಾನು ಅಳುವಾಗ ಕಣ್ಣೊರೆಸಿದ ಕರುಣೆಯು ನೀವು.
ನನ್ನಗುವಿಗೆ ಹರುಷ ತುಂಬಿ ಹಾರೈಸುವ ದೇವರೂ ನೀವು.
ಬೇಡಿದ್ದನ್ನು ಮಾತ್ರ ಕೊಡುವ ದೇವರು ನೀವಲ್ಲ.
ಬೇಡದೆ ಕೊಡುವ ಕಣ್ಮುಂದೆ ಕಾಣುವ ನಿಜದೈವ ನೀವು.
ಆಕಾಶದಷ್ಟು ಆಸರೆ ನೀಡುವ ಅಪ್ಪ,ಅಂಬರದಷ್ಟು ಅಕ್ಕರೆ ನೀಡುವ ಅಮ್ಮ. ಆಸರೆಯ ಉರುಗೋಲು ಅಕ್ಕರೆಯ ಮಮಕಾರ ನೀಡುವ ನೀವೇ ನನ್ನ ಮನವೆಂಬ ಮಹಡಿಯ ಮಾಲೀಕರು..-
"ಮಣ್ಣಾಗುವ ಮುನ್ನ ಹೆಣ್ಣಾಗು ನೀ ಜಗಕೆ ಕಣ್ಣಾಗು"
ಮಮತೆ-ಪ್ರೀತಿಗೆ ಅಮ್ಮನಾಗಿ, ಕರುಣೆ-ಕನಿಕರಕೆ ಅಕ್ಕನಾಗಿ, ತ್ಯಾಗ-ವಿಶ್ವಾಸಕೆ ತಂಗಿಯಾಗಿ, ಸಲಹೆ-ಜಾಣ್ಮೆಗೆ ಗೆಳತಿಯಾಗಿ,
ಜಗಕೆ ಪ್ರೀತಿಯ ಪರಿಚಯಿಸಿದಳು ಇವಳೇ! ನಿಸ್ವಾರ್ಥಕೆ ಇನ್ನೊಂದು ಹೆಸರೂ ಅವಳೇ.
ಪದಗಳ ಜೋಡಣೆಗೆ ಸಿಗದವಳು ಇವಳು, ಕಲ್ಪನೆಯ ಸೃಷ್ಟಿಗೂ ಮೀರಿದವಳು ಇವಳು. ಸೃಷ್ಟಿಯ ಅದ್ಭುತ ರೂಪವೇ ಇವಳು, ಸಾಧನೆಯ ಸ್ಪೂರ್ತಿಯೇ ಇವಳು.
ಇವಳಿಲ್ಲದೆ ಏನೂ ಇಲ್ಲ, ಇವಳೆಂದಲೇ ಎಲ್ಲ..
ಗರ್ಭದಲ್ಲಿರುವ ದೇವತೆಯ ಕೊಂದು ಗರ್ಭಗುಡಿಯ ದೇವತೆಯ ಮೊರೆಹೋಗುವ ಮೊಂಡ ಸಮಾಜವೇ ಕೇಳು!.. ದಿನ ಬೆಳಗುವ ಜಗಕೆ ಸೂರ್ಯ-ಚಂದ್ರರು ಎರಡು ಕಣ್ಣಾದರೆ, ಪ್ರೀತಿ-ತ್ಯಾಗಕೆ ಹೆಣ್ಣೇ ಈ ಜಗಕೆ ಕಣ್ಣು..
ಸದಾ ಮಾನವ ಕುಲಕೋಟಿಗೆ ಲೆಸನ್ನೇ ಬಯಸುವ ಸಮಸ್ತ ಸ್ತ್ರೀಶಕ್ತಿಗೆ ಮಹಿಳಾ ದಿನದ ಶುಭಾಶಯಗಳು-