*ಗಜಲ್*
ನಿನ್ನೆಡೆಗೆ ನನಗೆ ಏಕೆ ಆಸಕ್ತಿ ಹುಟ್ಟಿತೋ ನಾನರಿಯೆ ಗೆಳತಿ.
ನಿನ್ನ ಸಿಹಿ ನಾಮಧೇಯ ಏಕೆ ಮೋಹದಿ ನನ್ನ *ಕಟ್ಟಿತೋ* ನಾನರಿಯೆ ಗೆಳತಿ
ಮದುವೆ ಸ್ವರ್ಗದಲಿ ನಿರ್ಧಾರವಾದುದು ಎಂಬ ಗಾದೆಯ ಮಾತಿದೆ
ಇಂದ್ರ ದೇವಗೆ ನಮ್ಮ ಹೆಸರು ಏಕೆ ಮರೆತು *ಬಿಟ್ಪಿತೋ* ನಾನರಿಯೆ ಗೆಳತಿ.
ಯಾರು ಯಾರನು ನಮ್ಮಲಿ ಮೊದಲು ಕಂಡೆವೋ ನನಗೆ ನೆನಪಿಲ್ಲ
ಯಾರಿಗೆ ಮೊದಲು ಪ್ರೇಮಾಂಕುರ *ಆಯಿತೋ* ನಾನರಿಯೆ ಗೆಳತಿ
ನಿನ್ನೊಡನೆ ಸಂಭಾಷಣೆಯ ಮಧುರ ಮಾತುಗಳ ಪ್ರಭಾವ ಇರಬಹುದು
ಅವು ಮನ್ಮಥನ ಹೂ ಬಾಣದಂತೆ *ತಟ್ಟಿತೋ* ನಾನರಿಯೆ ಗೆಳತಿ.
ಕೃಷ್ಣ ಹೇಳುವ ಅಂದವು ಅನಂದಮಯ ಪ್ರೀತಿಸುವುದು ತಪ್ಪಲ್ಲವೆನುವರು.
ಅಂದ ನನದಾಗ ಬೇಕೆಂಬ ಭಾವ ಹೇಗೆ *ಬಂದಿತೋ* ನಾನರಿಯೆ ಗೆಳತಿ.
*ಬಾಗೇಪಲ್ಲಿ*— % &-
*Gazal*
Children learn musical instrument the *Xylophone*
In Orchestra musicians play on *Vibraphone* .
No one is interested in history of Graham Bell now
The man who struggled a lot to invent the *Gramophone*
All have full knowledge about 'Hello Hello Micktesting
Have seen all their Icons on TV with *Microphone*
People who are deaf are happily smiling now
Advanced technology of using the *Earphone*
Kitty's once favourite communication device then
Now eating dust in the corner the poor *Cardlessphone*
Ondraid 5G equiped is going to rule the world.
Kitty's house maker has two modern *Cellphone*
*Bagepally* .-
*ಗಜಲ್*
ಕೆಸರಲಿ ಉದ್ಭವಿಸಿದ್ದಲ್ಲವೇ ಚಂದದ *ಅಬುಜ* ತಮ್ಮ
ಗುಲಾಬಿಗುಂಟು ಮುಳ್ಳು ಪಡಬಾರದು *ಅಕ್ಕಜ* ತಮ್ಮ
ಸಮಾಜದ ಶ್ರೇಣಿ ಕೃತ ವರ್ಣ ನೀತಿ ಏನೇ ಇರಲಿ
ಯಾರೇನೆಂದರು ನೀ ಮನುಜ ಜಾತಿಯ *ಅಂಶಜ* ತಮ್ಮ
ಮೇಲು ಕೀಳೆಂಬುದಿಲ್ಲ ಜಾತಿಯಲಿ ಬರೀ ಕುಹುಕ ಬುದ್ಧಿಯಷ್ಟೇ
ಛಲದಿಂದ ಮುನ್ನುಗ್ಗು ಆಗ ಬೇಡ ನೀ *ಅಂತ್ಯಜ* ತಮ್ಮಾ
ಸಹನೆ ಬೇಕು ಎಲ್ಲದಕೂ ತಕ್ಷಣ ಬದಲಾವಣೆ ನಿರೀಕ್ಷಿಸದಿರು
ಮೂಡ ನಂಬಿಕೆ ಹೋಗೆ ಕಾಲಬೇಕು *ಸಹಜ* ತಮ್ಮ
ಎಲ್ಲಿ ಹುಟ್ಟಿ ಬೆಳದರೇನು ಕರ್ಣನಾಗ ಬೇಕು ನೀ
ಕೃಷ್ಣ ಹೇಳುವ ಆಗು ನೀ ಏಕಲವ್ಯನಂತೆ *ದಿಗ್ಗಜ* ತಮ್ಮ.
*ಬಾಗೇಪಲ್ಲಿ*-
*ಗಜಲ್*
ಗೆಳೆಯರೆಲ್ಲರಲಿ ನಾ ಸಹೃದಯಿ ಎಂದು *ಹೇಳಿರುವೆ* ನೀನು
ಕಠಿಣ ಹೃದಯಳಾಗಿ ಅದೇಕೋ ನನ್ನಗಲಿ *ತೆರಳಿರುವೆ* ನೀನು
ನಿನ್ನ ತೆಗಳಲು ಲೇಶ ಕಾರಣವೂ ಇಲ್ಲದಂತಾ ನಡೆ ನಡೆದೆ ಇಂದು
ಭ್ರಮಿತಳಾಗಿ ಯಾರೂ ನಂಬದ ಸ್ಥಿತಿ *ಸೃಷ್ಟಿಸಿರುವೆ* ನೀನು.
ನನಗಾಪ್ತಳಂತೆ ನಟಿಸಿ ಜಾಣ್ಮೆಯಲಿ ನನ್ನ ನ್ಯೂನ್ಯತೆಗಳ ಅರಿತೆ
ಗೆಳೆಯರಿಗೂ ಸುಳಿವು ಸಿಗದಾಟವ *ಆಡಿರುವೆ* ನೀನು
ನದಿಯ ದಡದಿ ನೀರಲಿ ಮುಳುಗಿ ಆಲಯದಿ ಆಡಿದ್ದು ಮರೆತೇಕೆ
ಹಣವಂತಗಿಂತ ಗುಣವಂತ ಲೇಸೆಂಬುದ *ಮರೆತಿರುವೆ* ನೀನು.
ಕೃಷ್ಣ ಹೇಳುವ ಪ್ರೇಮಿಗಳಲಿ ಅನೇಕ ಅಲಿಖಿತ ನಿಯಮವಿದೆ ಪಾಲಿಸಲು
ನೈತಿಕತೆ ಇಲ್ಲದ ಮೇನಕೆಯಂತೆ ದ್ರೋಹ *ಬಗೆದಿರುವೆ* ನೀನು.
*ಬಾಗೇಪಲ್ಲಿ*-
*ಗಜಲ್*
ವಕ್ರ ಹುಟ್ಟಿದರೆ ಅದು *ಕುರೂಪ* ಸರಿಯಲ್ಲವೇ
ವಕ್ರಗೊಳಿಸಿದರೆ ಅದು *ವಿರೂಪ* ಸರಿಯಲ್ಲವೇ
ಗರ್ಭಧರಿಸ ಅಪೇಕ್ಷಿಸುವುದು ಹೆಣ್ಣ ಸಹಜ ಹಕ್ಕು
ಅದಕಾಗಿ ಬಯಸಿದಳಾಕೆ *ಸ್ವರೂಪ* ಸರಿಯಲ್ಲವೇ
ಅನಾಗರೀಕಳಗಿ ವರ್ತಿಸೆ ಆಕೆ ಕಾಡ ಹೆಣ್ಣಾದ್ದು ಕಾರಣ
ಬಯಸಿದ್ದು ಶ್ರೀರಾಮರ *ತದ್ರೂಪ* ಸರಿಯಲ್ಲವೇ
ದ್ರಾವಿಡ ರಾಕ್ಷಸರಲಿ ಕಂಡಿಲ್ಲ ಹಾಲ್ಬಿಳುಪು ಮೈರೂಪ
ಬೇಡಿದಳು ರವಿಕುಲದ *ಅನುರೂಪ* ಸರಿಯಲ್ಲವೇ
ಕೃಷ್ಣಾ ತಂಗಿಯ ಪೊರೆವುದು ಅಣ್ಣನ ಕರ್ತವ್ಯ
ಶೂರ್ಪಣಕಿ ಮಾಡಿದಂತ *ಆರೋಪ* ಸರಿಯಲ್ಲವೇ.
*ಬಾಗೇಪಲ್ಲಿ*-
*ಗಜಲ್*
ಇತನು ಎಲ್ಲವನು *ಬಲ್ಲವ*
ಆತನು ಎಲ್ಲವನು *ತಿಳದವ*
ವೆತ್ಯಾಸವಿಲ್ಲ ಇಬ್ಬರಿಗೂ
ಹೇಳಿದನೊಬ್ಬ *ಅರಿತವ*
ಆಗುವರಂತೆ ಜ್ಞಾನಿಗಳು
ತನ್ನ,ತಾ ಅರಿಯೆ *ಯತ್ನಿಸುವ*
ಸಹೃದಯತೆ ಹೊಂದುವ
ತನ್ನಂತೆ ಇತರರ *ಬಗೆದವ*
ಸಹನೆ ವಜ್ರದ ಕವಚ ಕೃಷ್ಣಾ
ಸಹಿಷ್ಣತೆಯ ರೂಡಿಸಿ *ಕೊಂಡವ*
*ಬಾಗೇಪಲ್ಲಿ*-
*Gazal*
Male pigeon can not be *reared* Do you know
Female pigeon can *nurtured* Do you know
Male pigeon likes female and elopes with it
Female brings male to her to get *breeded* Do you know
We enjoy cuckoo call melody from the trees.
It is actually cry for female *beloved* Do you know
Pea'cock dances vigorously we see and enjoy it.
It is a paining effot to impress pea'hen it *loved* Do you know
"Don't wag your tile here" we scold children
It refers to the smart/activeness of 'wag tile' *Bird* Do you know.
Each creature can be understood somehow! by some means
Kitty's Human brain creature's mind can not be *read* Do you know.
(Do you know is Radheef, high lighted words are khafia's, kitty is the 'thakallu's nama. Comments invite.)
*BAGEPALLY*-
*Gazal*
Reserve Bank of is a institution of *sovereignity* you know
It represents our National Financial *Integrity* you know
Various Banks are under control of RBI
No bank in India lends for *charity* you know
Lending has direct bearing on Nation's progress
Banks are directed to lend on basis of *priority* you know
The money lent must get recycled regulaly
If not repaid properly effects Banks *Credibility* you know
Though not the aim of Bank is profit making
Kitty says break even point is motto for *imortality* you know
*BAGEPALLY*-
*GAZAL*
Be patient and get moving in your place of *Queue*
It is certain that you will get your share of *Wine* .
Do not be haste and hurry in life on to *Judge*
Have belief that 'all paths and roads lead to *Rome* .
Some days few days things may turn out *Hostile*
Do not take it to heart and move on with a *smile* .
All ways let your attitude be pure and *genuine*
Each one is destined already leave it to its *Care*
Let life be a opened book to all and nothing to *hide*
Kitty wishes you to get a high profile image in *life* .
*BAGEPALLY*-
*ಗಜಲ್*
ಆಸೆ ಇರಬೇಕು ಖರೆ ದುರಾಸೆ *ಇರಬಾರದೋ* ಮನುಜ
ವ್ಯಾಪಾರ ಮಾಡು ನಿಜ ಆದರೆ ಶೈಲಾಖ್ *ಆಗಬಾರದೋ* ಮನುಜ
ಜ್ನಾನೋದಯ ಆಗುವವರೆಗೆ ಕಾಯಬೇಕೇನು
ಚೂರು ಮುನ್ನವೇ ಪುರಂದರ *ಆಗಬಹುದೋ* ಮನುಜ
ರಾಜ ಮೈದಾಸನ ಗತಿ ಏನಾಯಿತು ತಿಳಿದಿಹೆಯಾ
ಮೈಮರೆತರೆ ಆ ಸ್ಥಿತಿ ನಮಗೆ *ಬರುವುದೋ* ಮನುಜ
ನಿನ್ನಲಿದ್ದಾಗ ಮಕ್ಕಳ ಬಂಧುಗಳ ಪ್ರೀತಿ ಕಣೋ
ಬೇಕೆನೆ ಕಿಂಗ್ ಲಿಯರ್ ಕತೆಯ *ಕೇಳಬಹುದೋ* ಮನುಜ
ಕನಕದಾಸರಂತೆ ಆದರೆ ಇದ್ದದ್ದೂ ಒಳಿತೆಂದು ತಿಳಿ
ಕನ್ನಡದಿ ಕೂಗೆ ಕೃಷ್ಣನೇ ತಿರುಗಿ *ನೋಡಬಹುದೋ* ಮನುಜ
*ಕೃಷ್ಣ* ನಂಬಿಹನು ಕೊಟ್ಟು ಕೆಟ್ಟವರಿಲ್ಲ ಎಂಬ ನುಡಿಯ
ಕೊಡಲು ಇಲ್ಲದಿರೆ ನೆಮ್ಮದಿಯಾಗಿ *ಇರಬಹುದೋ* ಮನುಜ.
*ಬಾಗೇಪಲ್ಲಿ*-