ಶುರುವಾಗಿದೆ ಹೊಸದೊಂದು ಪ್ರಯಾಣ
ಈ ಪ್ರಯಾಣಕ್ಕೆ ಅವನೊಬ್ಬನೇ ಕಾರಣ
ಕಾಣದೆ ಹೋಗಿದೆ ಈ ಬದುಕಿನ ಮುಂದಿನ ದಾರಿ
ಆದರೂ ನಾ ಸೇರಲೇ ಬೇಕಿದೆ ಒಂದೆಡೆ ಹಿಡಿದು ಕವಲುದಾರಿ
ಕಾಣದ ಈ ದಾರಿಯಲ್ಲಿ ನಾನು ಏಕಾಂಗಿ ಸಂಚಾರಿ...
-
ಎದೆಯೊಳಗೆ ನಿನ್ನದೇ ನಾದ
ನೀ ಕಲ್ಪನೆಯಲ್ಲಿ ಇದ್ದರು ನನಗಿಷ್ಟ ನಿನ್ನ ಜೊತೆ ಮಾಡಲು ಸಂವಾದ
ಸದಾ ಬಯಸುವೆ ನಿನ್ನ ಮುಖದ ಮೇಲೆ ಒಂದು ನಗುವಿನ ನಾದ
ಸರಿ ಈವಾಗ ಹೇಳು ಯಾವಾಗ ಶುರು ನಮ್ಮ ಪ್ರೇಮನಾದ
-
ಅವನು
ನನ್ನೆದೆಯ ಹೃದಯ ಮಂದಿರದಲ್ಲಿ ಪತಿಯಾಗಿದ್ದು
ಹೊರ ಪ್ರಪಂಚದಲ್ಲಿ ನಾ ಪ್ರೀತಿಸಿದ ಪ್ರಿಯಕರನಾಗೆ ಉಳಿದು
ಇಂದು ಇನ್ನೊಬ್ಬಳ ಬಾಳ ಸಂಗಾತಿ ಆಗಿರುವನು..
-
ಎಲ್ಲೇ ಇದ್ದರು ಓ ನನ್ನ ನಲ್ಲ ನೀ ಸುಖವಾಗಿರು
ಪ್ರತಿ ದಿನವೂ ನೀ ನಗುತಲಿರು
ಅನುಕ್ಷಣವೂ ನೀ ನನ್ನ ನೆನಪಲಿರು
ನಾ ಹೇಗಿದ್ದರು ನೀ ಕೇಳದಿರು..-
ಪ್ರೇಮವು ನೀನೇ, ಕಾಮವು ನೀನೇ,
ನನ್ನೆಲ್ಲ ಹೃದಯದ ಭಾವನೆಯು ನೀನೇ,
ನೀನಿಲ್ಲದೆ ನಾನಿಲ್ಲ ನಾನಿಲ್ಲದೆ ನೀನಿಲ್ಲ ಎಂದವನು ನೀನೇ,
ಇಂದು ನೀನ್ಯಾರೋ ನಾನ್ಯಾರೋ ಎಂದು ಬಿಟ್ಟು ಹೋದವನು ನೀನೇ,
ತಿಳಿಯುತ್ತಿಲ್ಲ ನನಗೆ ನೀನು ನಾನು ಪ್ರೀತಿಸಿದ ಪ್ರಿಯಕರನೋ ಅಥವಾ ನನ್ನ ಹೃದಯ ಕೊಂದ ರಾಕ್ಷಸನೋ.....
-
ಬದುಕೆಂಬ ಪಯಣದಲ್ಲಿ
ಸಿಕ್ಕ ಸುಂದರ ಮೈಲಿಗಲ್ಲು ನೀನು...
ಮಾತನ್ನೇ ಮರೆತ್ತಿದ್ದ ನನಗೆ
ಮಾತು ಕಲಿಸಿದ್ದು ನೀನು..
ಯಾರಲ್ಲೂ ಸಿಗದ ಆತ್ಮೀಯ
ಬಾಂಧವ್ಯ ಕೊಟ್ಟಿದ್ದು ನೀನು...
ಹಾಗಾಗಿ ಬದುಕಲ್ಲಿ ಸದಾಕಾಲ
ನನಗೆ ಬೇಕೇ ಬೇಕು ನೀನು...
-
ಬಡತನಕ್ಕೆ ವಿದ್ಯೆಯೇ ಮದ್ದು ಎಂದು...
ಜ್ಞಾನಕ್ಕಿಂತ ಬೇರೆ ಸಂಪತ್ತಿಲ್ಲ ಎಂದು...
ಇಡೀ ವಿಶ್ವಕ್ಕೆ ತೋರಿದ ಭಾರತರತ್ನ
"ಜೀವನವು ಸುದೀರ್ಘವಾಗಿರುವುದಕ್ಕಿಂತ ಉತ್ತಮವಾಗಿರಬೇಕು "ಎಂದು ಹೇಳಿದ
ಸ್ವತಂತ್ರ ಭಾರತದ ಮೊದಲ ಕಾನೂನು ಮತ್ತು ನ್ಯಾಯಮಾತ್ರಿಗಳಾದ
ಭಾರತದ ಸಂವಿಧಾನದ ಶಿಲ್ಪಿ
"ಡಾ.ಬಿ.ಆರ್.ಅಂಬೇಡ್ಕರ್" ಅವರ ಜನ್ಮದಿನದ
ಶುಭಾಶಯಗಳು...💐💐💐
-
ಹೆಣ್ಣೆಂದೆರೆ.....
ಸುರಿಯುವ ಮಳೆಯಲ್ಲಿ
ಬೀಸುವ ತಂಗಾಳಿಯು ಅಲ್ಲ
ಒಮ್ಮೆ ಬಂದು ಹೋಗುವ
ಬಿರುಗಾಳಿಯು ಅಲ್ಲ
ಅವಳು ಪ್ರತಿಯೊಬ್ಬರ
ಎದೆಯ ಏರಿಳಿತದಲ್ಲಿ
ನಲಿದು..
ಮಿಂದೆದ್ದು...
ಬರುವ ನಿಟ್ಟುಸಿರು....
ಆ ದೇವರ ಮುಂದಿರುವ
ದೀಪವ ನರ್ತಿಸಲು
ಮುಟ್ಟಿ ನಗುವ..
ಆ ಭಗವಂತನ ಉಸಿರು...-
ನೋವಿದ್ದರೂ ನಗುತ್ತಲಿರು
ಕಣ್ಣಲಿ ನೀರಿದ್ದರು ತೋರಿಸದಿರು
ಮನದಲ್ಲಿ ನೋವಿದ್ದರೂ ಹಸನ್ಮುಖಿಯಾಗಿರು
ಯಾಕಂದರೆ
ಇಲ್ಲಿ ಯಾರು ನಿನ್ನವರಲ್ಲ
ಯಾರು ನಿನ್ನ ನೋವಿಗೆ ಮಿಡಿಯುವವರಲ್ಲ
ಅದರ ಬದಲು ನೋಡಿ ನಗುವ
ಸ್ವಾರ್ಥ ಪ್ರಪಂಚದ ಕುಡಿಗಳಿವರು...-