ಅವಳೊಬ್ಬಳಿದ್ದಳು
ನನ್ನೆಲ್ಲ ಕನಸ ಅಡವಿಟ್ಟುಕೊಂಡು,
ಪ್ರೀತಿ ಸಾಲ ಕೊಟ್ಟವಳು
ಅವಳ ಸಾನಿಧ್ಯಕ್ಕೋ, ಸುರುಳಿ ಕೇಶಕ್ಕೊ, ಬೊಗಸೆ ಕಣ್ಣಿಗೋ ಸೆರೆಯಾಗಿತ್ತು ಮನ
ಅವಳ ಅಪರಿಮಿತ ಅಂದದ ಸಿರಿಗೆ
ತುಂಬಿ ಹರಿಯುತಿದೆ ನನ್ನೊಲವಿನ ಉಪ್ಪರಿಗೆ
ಅವಳ ಕಣ್ಣಾಲಿಯ ಪಕ್ಕದ ಕಪ್ಪಿಗೆ
ನನ್ನ ಮನದಲಿ ರುಜುವಾತಯ್ತು ಒಲವು ತೆಪ್ಪಗೆ
ಅವಳೊಂದಿಗಿನ ಕಳೆದ ಪ್ರತಿ ಸಮಯ,
ಈಗ ಸದಾ ಅನಿಸುವುದು ವಿಸ್ಮಯ
ಕಹಿಗಳಿಗೆಯ ಕುಂಟು ಮನಸ್ತಾಪ
ಕಾರಣವಾಯ್ತು ಕೊನೆಯವರಗೂ ಸಂತಾಪ
ಅಪರಿಚಿತರನು ಜೊತೆಗೂಡಿಸಿದ ವಿಧಿ
ಅವಳೊಳಗಿನ ನನ್ನನು ಮಾಡಿದೆ ಸಮಾಧಿ
ನನ್ನೊಳಗಿನ ಅವಳು ಚಿರಂಜೀವಿ
ಮನದರಸಿಯಾಗಿರುವಳು ಇರುವವರೆಗೂ ಅವಿ-
www.instagram.com/avins_captures
Dedicated to unconquered special spiritual soul...