ಹನ್ನೆರೆಡು ವರ್ಷದ ಪ್ರೀತಿ
ನಂಬಿಕೆ ಒಂದೇ ಈ ಪಯಣದ ನೀತಿ ...
ನೂರೆಂಟು ಕಿತ್ತಾಟ
ಹತ್ತಾರು ಮನಸ್ತಾಪ
ಅವನೇ ಸೋಲಲಿ ಅನ್ನುವ ಹಟ
ಎಲ್ಲವೂ ಅವನ ಪ್ರೀತಿಯ ಮುಂದೆ
ಒಂದು ಮರೀಚಿಕೆಯ ಹೋರಾಟ...
ಅಪ್ಪನ ಕೊರತೆ ನೀಗಿಸಿದೆ ನೀನು
ಅಮ್ಮನ ಪ್ರೀತಿಗೆ ಸರಿ ತೂಗುವೇ ಇನ್ನೂ...❣️
-
ಅಮ್ಮನ ಕಾಳಜಿ
ದೂರವಾದಾಗ ಬೇಕೆನಿಸುವುದು
ಅಮ್ಮನ ತ್ಯಾಗ
ತಾಯಿಯಾದಾಗ ಅರಿವಾಗುವುದು
ಅಮ್ಮನ ಪ್ರೀತಿ
ಕೋಟಿ ಕೊಟ್ಟರೂ ಸಮವಾಗದು
ಕಣ್ಣೀರು ಅಪ್ಪಿದಾಗ
ಮನಸು ಭಾರವಾದಾಗ
ದೇಹಕ್ಕೆ ನೋವಾದಾಗ
ಏನು ಅರಿಯದೆ ನಿಂತಾಗ
ಮೊದಲಿಗೆ ನೆನಪಾಗುವುದೇ
ಅಮ್ಮ...
-
ರೆಕ್ಕೆ ಬಿಚ್ಚಿ ಹಾರಲು ಹೇಳಿಕೊಟ್ಟಾತ
ಎಡವಿದಾಗ ಕೈ ಹಿಡಿದು ಮುನ್ನೆಡಿಸಿದಾತ
ಕಷ್ಟದಲ್ಲೂ ಸುಖದ ಪಾಠ ಕಲಸಿದಾತ
ತನ್ನೆಲ್ಲಾ ಆಸೆಗೆ ಬೀಗ ಹಾಕಿ
ಮಕ್ಕಳ ಬಯಕೆಗೆ ಹೆಗಲು ಕೊಟ್ಟಾತ
ನನ್ನ ಅಪ್ಪ...
ನಿನ್ನ ಮುಖ ಮರೆಯಾದರೂ
ಈ ಸಮಯ ಎಂದೆಂದಿಗೂ ನಿನ್ನ ಪ್ರೀತಿಯನ್ನು
ಮರೆಸಲಾಗದು ನನ್ನಪ್ಪ...
-
ಪ್ರಾಮಾಣಿಕತೆಯ ಕುಂಚದಿಂದ
ವ್ಯಕ್ತಿತ್ವದ ರೂಪ ಕೊಟ್ಟು
ಭಾವನೆಗಳ ಬಣ್ಣ ತುಂಬಿ
ಪರಿಶ್ರಮದ ಹೆಸರಿನಲ್ಲಿ
ಯಶಸ್ಸಿನ ಮುನ್ನುಡಿ ಬರಿಯುವಾಸೆ...-
ನಿನ್ನ ಕಂಡ ಆ ಕ್ಷಣ
ಮನ ಮಿಡಿಯುವುದು ಪ್ರತಿ ಕ್ಷಣ...
ನಿನ್ನ ಕಿರು ನಗೆ ನೋಡಲು
ಕಾಯುವೆ ಪ್ರತಿ ದಿನ...
ನನ್ನ ಪ್ರೀತಿಯ ಒಲವು ನಿನ್ನದು
ನಿನ್ನ ದುಃಖದ ಹೂಳೆಯು ನನ್ನದು...
ನಿನಗಾಗಿಯೇ ಮುಡಿಪು ಈ ಜೀವ
ನಿನ್ನ ಪ್ರೀತಿಯ ಅರಸಿ ಬಂದೆ ನಾನೀಗ...❤️
-
The way you love
The way you treat
Felt like queen of our own kingdom...❣️-
ಹುಡುಕಿದರೂ ಸಿಗಲಾರದ ಹೂವೊಂದು ನೀನು
ಜಪಿಸಿದರು ಒಲಿಯದ ಒಲವೊಂದು ನೀನು...
ಬಂದಿರುವೆ ನಿನ್ನ ಹೃದಯದ ಬಾಗಿಲಿಗೆ
ಕದ ತೆರೆದು ನೋಡು ಒಮ್ಮೆ ನನ್ನೆಡೆಗೆ
ಸಂತೋಷದಿಂದ ಸ್ವಾಗತಿಸು ನನಗಾಗಿ
ಪ್ರೀತಿಯ ಹೂ ಮಳೆ ಸುರಿಸುವೆನು ನಿನಗಾಗಿ...-
ನಿನಗಿನ್ನು ಬೇಡವಾದೆನಾ ನಾನು...?
ಮೋಸ ಮಾಡದೆ
ಮೋಸಗಾತಿ ಆದೆ
ಸುಳ್ಳು ಹೇಳದೆ
ನಂಬಿಕೆದ್ರೋಹಿ ಆದೆ
ತಾಳ್ಮೆ ಕಳೆದು ವರ್ತಿಸುವೆ ನೀನು
ಮರಳಿ ಬಾರದ ಊರಿಗೆ ಸೇರುವೆ ನಾನು...
-
ನನ್ನ ಅಪ್ಪನ ಪ್ರೀತಿ
ಸಮುದ್ರದಷ್ಟು ಆಳ
ನನ್ನ ಅಪ್ಪನ ಜವಾಬ್ದಾರಿ
ಭೂಮಿಯಷ್ಟೇ ಭಾರ
ನನ್ನ ಅಪ್ಪನ ಸಿಟ್ಟು
ಅಗ್ನಿಯಷ್ಟೇ ಪ್ರಖರ
ನನ್ನ ಅಪ್ಪನ ನಿಯತ್ತು
ಪುಣ್ಯಕೋಟಿ ಕಥೆಯ ಪುಣ್ಯಕೋಟಿ
ಒಟ್ಟಾರೆ ಹೇಳಬೇಕೆಂದರೆ
ನನ್ನ ಅಪ್ಪ
ನನ್ನ ಶಕ್ತಿ
ನನ್ನ ಸ್ಪೂರ್ತಿ...
-
ಸಮುದ್ರದಷ್ಟು ಆಳ
ಭೂಮಿಯಷ್ಟು ವಿಶಾಲ
ಆಕಾಶದಷ್ಟು ಎತ್ತರ
ಸ್ವರ್ಗಕ್ಕಿಂತಲೂ ಸುಖಮಯ
ನನ್ನ ಅಮ್ಮನ ಪ್ರೀತಿ
ಅವಳು ತೋರುವ ರೀತಿ...
ಗುಣದಲ್ಲಿ ಭೂ ಮಾತೆ
ನಡತೆಯಲ್ಲಿ ಸೀತೆ
ಪೂಜಿಸಿದರೆ ಗೋ ಮಾತೆ
ಜೀವನದ ಪಾಠ ಕಲಿಸುವ ಭಗವದ್ಗೀತೆ...
ಕುಟುಂಬಕ್ಕಿರುವ ಕಲ್ಪವೃಕ್ಷ ನೀನು
ಭರವಸೆಯ ಇನ್ನೂಂದು ರೂಪ ನೀನು
ನನಗಾಗಿ ಮರುಹುಟ್ಟು ಪಡೆದಿರುವ ನನ್ನ ಅಮ್ಮ
ನಿನಗಾಗಿ ಮೀಸಲೀಡುವೆ ನನ್ನ ಏಳೇಳು ಜನ್ಮ....
-