ashmitha shetty   (.)
464 Followers · 82 Following

Joined 8 December 2017


Joined 8 December 2017
18 NOV 2022 AT 19:42

ನೀ ದೂರಾದ ಗಳಿಗೆ.
ನಡೆದುದೆಲ್ಲ ಕನಸಂತೆ ಕರಗಿ
ಮರಳಬಾರದೆ ನೀ ನನ್ನ ಬಳಿಗೆ.

-


10 JAN 2022 AT 0:07

ಕಳೆದು ಹೋಗಿರುವೆ
ನಿನ್ನಲೇ ನಾನು
ಒಲವ ಗುಂಗಲ್ಲಿ,
ಎದೆಯೊಳಗೆ ಬಚ್ಚಿಟ್ಟು
ಕಾಪಾಡಿದೆ ನೀನು,
ಜೊತೆಯಾದೆ ಉಸಿರಲ್ಲಿ.

-


26 OCT 2021 AT 23:20

ಅವನು,
ನೆನಪ ಪುಟಗಳ ನಡುವೆ
ಏನನ್ನೋ ಹುಡುಕುವಾಗ,
ಪದೇ ಪದೇ ಬೆರಳ
ಸೋಕುವ ಸಾಲು...

-


17 AUG 2021 AT 19:22

ಜಡಿಮಳೆಯಂತ ಮಾತಿನ
ಒಡತಿಯೀಗ
ಕಾರ್ಮುಗಿಲ ಮೀರಿಸುವ
ಮೌನಿ.

-


5 MAY 2021 AT 5:20

ಬರೆಯಲೇಬೇಕೆಂದು
ಕುಳಿತಾಗೆಲ್ಲಾ ನೆನಪಾಗುವುದು
ನಮ್ಮಿಬ್ಬರ ನಡುವಿರದ ವಿರಹ...

-


5 MAY 2021 AT 4:37

ನನ್ನದೇನಿದ್ದರೂ
ಪದಗಳಾಸರೆಯಿಂದ ನಿನ್ನ
ಮನವೊಲಿಸುವ ಸಾಹಸ,
ಇನ್ನು ಕಣ್ಣಹನಿಗೋ
ಅದು ಕ್ಷಣಾರ್ಧದ ಕೆಲಸ.

-


4 MAY 2021 AT 5:46

ನನಗಾಗಿ ಒಂದೆರಡು ಸಾಲನೂ
ಬರೆಯಲಾಗದವನ ಕಣ್ಣಲ್ಲಿ
ಕಣ್ಣಿಟ್ಟಾಗಲೇ ಅರಿವಾಗಿದ್ದು,
ಪದಗಳಿಗೂ ಮೀರಿದ
ಭಾಷೆಯೇ ಪ್ರೀತಿಯೆಂದು.

-


28 MAR 2021 AT 23:12

ಲೇಖನಿ ಮುನಿಸಿಕೊಂಡಿರಬಹುದೇ
ಇಲ್ಲಾ ಹಾಳೆಗೇ ಸಮ್ಮತಿಯಿಲ್ಲವೇ,
ಬಯಸಿದರೂ ಕಟ್ಟಲಾಗುತ್ತಿಲ್ಲ ಕವಿತೆ
ಕೂಡಿಟ್ಟ ಅಷ್ಟೂ ಸಾಲುಗಳು
ಖಾಲಿಯಾದವೇ ಹಾಗೇ ಸುಮ್ಮನೇ..

-


3 FEB 2021 AT 17:28

ನೀ ಬಂದಾಗೆಲ್ಲ ಕುಣಿದಾಡುತಿದ್ದ
ಕಾಲ್ಗೆಜ್ಜೆಯ ಸದ್ದಡಗಿ ಹೋಗಿದೆ,
ನಿನಗಾಗಿ ಹೊಸ್ತಿಲಿನಾಚೆ
ಇಣುಕುತ್ತಿದ್ದ ಕಂಗಳೂ
ಈಗ ಸುಮ್ಮನಾಗಿವೆ,
ಕೊನೆಯಿರದ ಮಾತುಗಳು
ಪದಗಳೇ ಸಿಗದೆ ಮೂಕವಾಗಿವೆ,
ಈಗೇನಿದ್ದರೂ
ಅರೆತೆರೆದ ನೆನಪಿನ ಬಾಗಿಲು,
ಸಂದಿಯಲಿ ಇಣುಕುವ
ಒಂಟಿತನವೇ ಖಾಯಮ್ಮಾಗಿದೆ.

-


12 JAN 2021 AT 0:24

ತುಸು ದೂರ ನಿಂತುಬಿಡಲೇ
ನಾ ನನ್ನಿಂದ,
ನೋಡಬೇಕೆನಿಸಿದೆ ಒಮ್ಮೆ ನನ್ನ
ನಿನ್ನ ಕಣ್ಣಿಂದ,

-


Fetching ashmitha shetty Quotes