ಭಯವಾಗಿದೆ,
ಜನರೆಂದರೆ ಭಯವಿಲ್ಲ ನನಗೆ
ಆದರೆ ನನ್ನವರೆಂದರೆ ಭಯವಾಗಿದೆ,
ಪ್ರೀತಿಯೆಂದರೆ ಭಯವಿಲ್ಲ ನನಗೆ
ಆದರೆ ನನ್ನ ಪ್ರೀತಿ ಪಾತ್ರರೆಂದರೆ ಭಯವಾಗಿದೆ,
ಮೋಸವೆಂದರೆ ಭಯವಿಲ್ಲ ನನಗೆ
ಆದರೆ ನನ್ನವರೇ ಮೋಸವೆಂದರೆ ಭಯವಾಗಿದೆ,
ಸುಳ್ಳೆಂದರೆ ಭಯವಿಲ್ಲ ನನಗೆ
ಆದರೆ ನಂಬಿದವರೇ ಸುಳ್ಳೆಂದರೆ ಭಯವಾಗಿದೆ,
-
ಆದರೆ ನೀ,
ಅದರ ಆಳವ ಅರಿಯದೆ,
ನನ್ನನ್ನು ತೊರೆದೆ
ಸಮೀಪವಿದ್ದು ದೂರ ನಿಂದೆ
ಪ್ರೀತಿ ಹೆಸರಲಿ ನನ್ನನ್ನು ಕೊಂದೆ.... 😣😶
-
ಚಂದ್ರಯಾನ ಮಾಡುವಾಸೆ ಜೀವಕೆ
ಬಾನೀಗೇರೋ ಮೆಟ್ಟೀಲಿಲ್ಲ ಏತಕೆ?
ಚಿಟ್ಟೆಯಂತೆ ಹಾರುವಾಸೆ ಮೈಯ್ಯಿಗೆ
ಆದರೊಂದುಕೂಡ ರೆಕ್ಕೆಯಿಲ್ಲ ಏತಕೆ?
ಬಳ್ಳಿಯಂತೆ ಹರಡುವಾಸೆ ಕನಸಿಗೆ
ಸೂಕ್ತಜಾಗ ಎಲ್ಲೂ ಇಲ್ಲ ಏತಕೆ?
ಸಾವಿರಾರು ಆಸೆ ಬಯಕೆ ಮನುಜಗೆ
ತನ್ನ ತೀವ್ರ ಆಸೆ ತನ್ನನ್ನೇ ನುಂಗುತಿಹವು ಏತಕೆ?-
ಯಾಕಿಷ್ಟು ಮೌನ ಮಯೂರ
ನಿನ ಮಾತೆ ನನ ಖಾಲಿ ಯಾನಕೆ ಚಿತ್ತಾರ
ಮೌನ ಸರಿಸು ಪಕ್ಕಕೆ
ಮಾತಿನ ಮಳೆ ಸುರಿಸು ಈ ಏಕಾಂತಕೆ
-
ಬಾಯಾರಿದ ನದಿಗೆ ಮಳೆಯೇ ಆದಾರ
ಮೌನ ತಾಳಿದ ಮನಕೆ ನಿನ ನೆನಪೆ ಅಪಾರ
ಕಡಲಾಳದ ಕಡುಗತ್ತಲು ಎನ್ನೇದೆಯಾಳದ ನೋವು
ಕಡುಗತ್ತಲ ಕಿಡಿ ಮಿಂಚು ನಿನ ಪ್ರೀತಿಯ ಕಾವು
ಸನಿಹವಿದ್ದೆ ದೂರವಾದೆ ನನ್ನಿಂದ ನಾನು
ದೂರವಿದ್ದು ಬೆರೆತುಹೋದೆ ನನ್ನಲ್ಲಿ ನೀನು
( Inspired to inspire) ❤-
ಆದಾರದ ಓಲವ ನೀ
ಕನಸಲು ಕಾವಲು ನೀ
ಓಲವ ಮಳೆಯ ವರುಣ ನೀ
ನೆನಪ ಗರಿಯ ತೇಜಸ್ಸು ನೀ
ಆಸೆಯ ಕಡಲ ತೀರ ನೀ
ಎಲ್ಲಾ ಕೊನೆಯ ಶುರು ನೀ
ಆದರೂ
ಎನಗೆ ಪ್ರೀತಿಯ ರಾಕ್ಷಸ ನೀ.......... ❤🧡❤-
ಇಳೆಯಲಿ ನೀನೊಬ್ಬನೇ ಆದಾರ
ಈ ಜೀವಕೆ
ಕನಸಲು ಬೇಡ ಎನ್ನ ತೊರೆಯುವ
ಬಯಕೆ
ಕತ್ತಲಲಿ ಎಡವಿ ತತ್ತರಿಸಿದೆ
ಪ್ರೀತಿಯ ಜೋಲಿ
ಹತುರದಿ ಬಾ ಹರಸಿ
ಹಾಡಲು ಸುವ್ವಾಲೀ........ ❤
( ನಿನಗಾಗಿ ಈ ಮೌನ ರಾಗ )-
Much satisfied
Than with fake faces
and fake words
Of unworthy people-