Aruna G Bhat   (ಅರು)
1.3k Followers · 6 Following

read more
Joined 8 February 2018


read more
Joined 8 February 2018
5 SEP 2021 AT 8:58


ಅಕ್ಕರೆಯಲಿ ಅಕ್ಷರ ಕಲಿಸಿ
ತಿದ್ದಿ,ತೀಡಿ ,ಬುದ್ಧಿ ಹೇಳಿ
ಜೊತೆಗೆ ನೀತಿಯನ್ನು ತಿಳಿಸಿ
ವಿದ್ಯಾರ್ಥಿಗಳಿಗೆ ಗುರಿ ಸೇರಲು
ದಾರಿ ತೋರಿಸಿದ ಶಿಕ್ಷಕರಿಗೆ
ಪ್ರೀತಿ,ಗೌರವದ ನಮನಗಳು
ಇಂದಿಗೂ ಇದ್ದಾರೆ ಮನದೊಳು.

-


28 AUG 2021 AT 19:59

ಜಾಜಿ ಮಲ್ಲಿಗೆಯೇ
ನಿನ್ನ ಚೆಲುವಿಗೆ..ಪರಿಮಳಕೆ
ಜಗದಲಿ ಏನಿದೆ ಹೋಲಿಕೆ
ದಾರದಲಿ ಪೋಣಿಸಿ ಮಾಲೆಯನು ಮುಡಿಗೇರಿಸಿದರೆ
ನಿಜಕು ನೀ ನಾರೀಮಣಿಯರ ಮನದಲಿ
ನವೋಲ್ಲಾಸದ ರಾಗ ಮಾಲಿಕೆ.

-


14 JUN 2021 AT 21:05


ನಿಂತು ಹೋಗುವೆಯೇನೋ ಎನ್ನುವ ಭಯವಿತ್ತು
ಒಂದು ಸಲವಲ್ಲ! ದೇವರೊಲುಮೆಯಿತ್ತು.
ನನ್ನುಸಿರೇ...ನೀನು ಉಳಿದೆ..ನನ್ನ ಉಳಿಸಿದೆ
ಉಳಿದ ಕನಸುಗಳ ನನಸಾಗಿಸಲು...
ಮತ್ತೆ ಶ್ರಮಿಸಲು ಅವಕಾಶವಿತ್ತೆ.
ಹಸಿರಿದೆ ಸುತ್ತ,ಮುತ್ತ....ನೀ ನಿರಾಳವಾಗಿರು
ನಾನಿರುವೆ ನಿರಾತಂಕದಲಿ..

-


27 FEB 2021 AT 21:17

ಕಷ್ಟವೆಂಬ
ಕತ್ತಲು ಕವಿದಿರಲು
ಕಂಗಳು ಸುರಿಸಿದ ಕಂಬನಿಯು
ಕೆನ್ನೆಯ ಮೇಲೆ ಸಾಕ್ಷಿ ಇಟ್ಟಿತು

-


23 NOV 2018 AT 12:29

ತಾಯಿ ಇಲ್ಲದ ತವರು

ಕಣ್ಣೀರ ಕಡಲು

ತಂದೆಯಿರದ ತವರು

ಹಗ್ಗ ಕಡಿದ ತೊಟ್ಟಿಲು.

-


27 SEP 2018 AT 18:07

ಸಂಜೆ ಅರಳುವ ಹಲವು

ಹೂವುಗಳ ಬಣ್ಣ ಬಲು ಬಿಳಿ

ಕತ್ತಲಲ್ಲಿ ಬೇಗನೆ ಕಣ್ಣಿಗೆ ಕಾಣಿಸಲೆಂದು

ಆ ಸೃಷ್ಟಿಕರ್ತನಿತ್ತ ಬಳುವಳಿ.

-


18 SEP 2018 AT 19:44

ನಾಗರ ಹಾವಾಗಿ ಬಂದು

ಚಿತ್ರ ಪ್ರೇಮಿಗಳೆದೆಯಲ್ಲಿ

ಹೂವಾಗಿ ಅರಳಿದವರು.

ಮರೆಯಾಗಿ ಹೋದರೂ

ಮರೆಯದ ಮಾಣಿಕ್ಯವಾಗಿ

ಮನದಲ್ಲೇ ಉಳಿದವರು.

-


8 FEB 2018 AT 13:04

(ಪೂರ್ತಿ ಕವನ Caption ವಿಭಾಗದಲ್ಲಿದೆ...)

ಈ ಅಮ್ಮನೆಂದರೆ ಅದ್ಭುತ...
ಮಕ್ಕಳ ಹೆಸರು ಹೇಳಿ
ಪ್ರೀತಿಯ ಧಾರೆಯನೆರೆದರೆ
ಒಣಗಿದ ಗಿಡವೂ ಚಿಗುರ ಬಲ್ಲದು...
ಈಗ ನನ್ನ ಮನೆಯಂಗಳದಲ್ಲಿ
ಹಳದಿ ಗುಲಾಬಿಯು ಅರಳಿ ನಗುತಿದೆ
ಅದರಲಿ ನನ್ನಮ್ಮನ ನಗುವೂ ಬೆರೆತಿದೆ...

-


12 JAN 2022 AT 21:18


ಮಾಗಿಯ ಮoದಮಾರುತಕೆ
ಮಲ್ಲಿಗೆಯ ಬಳ್ಳಿಯೊಂದು
ಮಾಮರವನು ತಬ್ಬಲು
ಮನದಲಿ ನಲ್ಲನ ನೆನಪು ಕಾಡಿತು



-


11 JAN 2022 AT 10:29


ನಗ ಬೇಕೆಂದರೂ ನಗಲು ಆಗದು
ಅಳ ಬೇಕೆಂದರೆ ಅಳಲೂ ಆಗದು
ಪರಿಸ್ಥಿತಿಗೆ ಹೊಂದಿಕೊಂಡು
ಮನೋಸ್ಥಿತಿಯನ್ನು ನಿಯಂತ್ರಣದಲ್ಲಿಡ ಬೇಕು.
ಅರಿತು...ಅದರಂತೆ ನಡೆಯ ಬೇಕು

-


Fetching Aruna G Bhat Quotes