ಬೆರಳ ತೋರಿ ದೂರಿದಂತ
ಅವನು ಇವನು ಎಲ್ಲ ಆಪ್ತ
ಕೋರ್ಟು ಗೀರ್ಟು ಕೇಸೊಂದಂತೆ
ನಡೆದುದಂತು ಪೂರ್ಣಸಂಕ್ಷಿಪ್ತ
ತಿಂಗಳಿಂದ ಸುದ್ದಿಯೆಂದು ಜೋತುಬಿದ್ದ
ಮಾಧ್ಯಮವವಳ ಸೇರಿ ಶಪ್ತ
ಜನರ ಕಷ್ಟಕಾರೂ ಇಲ್ಲ
ಇಲ್ಲಿ ಜನತಂತ್ರವೇ ನಿರ್ಲಿಪ್ತ....!!!-
ನಮ್ಮೂರು ಮಲೆನಾಡ ಶಿವಮೊಗ್ಗದ ತೀರ್ಥಹಳ್ಳಿ... read more
ಎಲ್ಲಿಗೆ ನಿಮ್ಮೀ ಸಂಜೆಯ ನಡಿಗೆ
ಸ್ವಚ್ಛ ಸುಂದರ ಪ್ರಕೃತಿಯೆಡೆಗೆ
ನೆಮ್ಮದಿ ಕಡೆಗೆ-
ಅಂದ ಚಂದಕೆ ಮಾರು ಹೋದವ
ಮಾರು ದೂರ ಸಂಸಾರದಿ ಸಾಗಿದೊಡೆ ಬಿದ್ದವ
ಪ್ರೇಮ ಬಂಧಕೆ ಸೂರೆಗೊಂಡವ
ಸೂರು ಕಟ್ಟಿ ಸಾವಿರ ಸಾಗರ ದಾಟುವವ
ನೀರೆ ನೀ ಮಾಯೆ
ನೀ ಒಲವ ಛಾಯೆ-
ಬರಲಿಲ್ಲ ಎಲ್ಲೆಡೆ ಸುಮ್ಮನೆ ಕೊರೊನಾ
ಬರೆ ಎಳೆದ ಕಾರಣ ಅರಿಯದಿರೆ ಸರೀನಾ ?
ನಾನು ನನ್ನೆದೆಲ್ಲವೆಂದು ಮರಕಡಿದು ಕಟ್ಟಿದ ಫ್ಲಾಟು
ನಾ ಕೇಳದೆಯೇ ಕೊಟ್ಟಂತೆ ಕೊಬ್ಬಿಗೆ ಕೊಡಲಿ ಏಟು
ನಾನೆಲ್ಲ ಕೊಳ್ಳಬಲ್ಲೆ ಬೆರಳತುದಿಯಲೇ ತಂತ್ರಜ್ಞಾನ
ನೆನಪಾಯ್ತು ಈಗ ಉಳಿದ ಪ್ರಾಣಿಗಳಂತೆ ನಾನು ಸಮಾನ
ಅತಿಯಾಸೆಗೈದು ಹೊಡೆದೆ ಭುವಿಗರ್ಭವ ಕೊಳ್ಳೆ
ಕ್ಷಮೆಗೆ ಭೂತಾಯಿ ನುಡಿವಳು ಎಂದೆಂದಿಗೂ ಒಲ್ಲೆ
ಅರಿತು ನಡೆ ಮಾನವ ದೈವದೀಯೆಲ್ಲ ಸಂದೇಶ
ಅರಿಯದಿರೆ ದೂರಿಲ್ಲ ನೀ ಕಾಣೋ ನಿನ್ನವಶೇಷ
ಬರಲಿಲ್ಲ ಎಲ್ಲೆಡೆ ಸುಮ್ಮನೆ ಕೊರೊನಾ
ಬರೆ ಎಳೆದ ಕಾರಣ ಅರಿಯದಿರೆ ಸರೀನಾ ????
-
ಬಿಸಿಲಿಗೆ ಬವಳಿ ನೆಲದ ಬಿರುಕೊಂದು
ಮಳೆಹನಿಯ ಹುಡುಕಿದೆ,
ಬಿಡದೆ ಕಾಡಿದ ನೆನಪ ಕರೆತಂದು
ಈ ಮನವ ಕೆದಕಿದೆ,
ಬಿರುಕು ಹೇಗೋ ಅಳಿವ ಕಂಡೀತು,
ಮನವು ಹೇಗೋ ಮೊಳೆತಗೊಂಡೀತು,
ಮನದ ಬಿರುಕು ಹಾಗೆ ಉಳಿದುಕೊಂಡಿತು.....!!!-
ಮನದ ಒಡಲಾಳದ ನಂಬಿಕೆ
ಬಯಸೆ ನನಗೇಕೋ ಅಂಜಿಕೆ
ಭಾವನೆಗಳಲಿಹುದೆಲ್ಲ ನನದೇ ಸ್ವಂತಿಕೆ
ಆದರೂ ಬೇಕಲ್ಲ ಅದೊಂದು ಆಮಂತ್ರಿಕೆ
ಚಿತ್ತದುತ್ತರ ಸೇರಿ ಇಹುದೊಂದು ಗ್ರಂಥಿಕೆ
ಆದರೂ ಬೇಡ ಮನವೇ ನಿನದೊಂದು ಭ್ರಾಂತಿಕೆ....!!!
-
ಮಳೆಬಂದು ಧರಣಿ ತಂಪಾಗಿ
ಅಲ್ಲೆಲ್ಲೋ ಕೋಗಿಲೆ ದನಿಯು ಇಂಪಾಗಿ
ಮನದ ದುಗುಡವ ತುಳಿದು ಸೊಂಪಾಗಿ
ಸಹಜ ಸಂತಸ ಒದಗಿ ಜಂಪಾಗಿ
ನಗವು ಪಸರಿಸೆ ನೆಮ್ಮದಿಯ ಕಂಪಾಗಿ....!!!-
"ಸ್ವಗಾದೆ - No ತಗಾದೆ - 15"
"ತಾಯಿಯಂತೆ ಮಗಳು ನೂಲಿನಂತೆ ಸೀರೆ"
"ಧರ್ಮದಂತೆ ಅವರ ನಡೆ, ಸಂಸ್ಕಾರವೇ ಇಲ್ಲದೆಡೆ "-
"ಸ್ವಗಾದೆ- No ತಗಾದೆ -14"
"ಬೆ೦ಕಿಯಿಲ್ಲದೆ ಹೊಗೆಯಾಡುವುದಿಲ್ಲ"
"ಸುಮ್ನೆ ತಿರುಗದೆ ಕರೋನ ಹರಡುವುದೂ ಇಲ್ಲ"-
"ಸ್ವಗಾದೆ - No ತಗಾದೆ -13"
"ಕಜ್ಜಿ ಹೋದರೂ ಕಡಿತ ಹೋಗಲಿಲ್ಲ"👇
"ಕರ್ಫ್ಯೂ ಹಾಕಿದ್ರೂ ಜನ ಕೆರ್ಕೊಂಡು ತಿರ್ಗೋದು ಬಿಡ್ತಿಲ್ಲ"😑-