ತೋಯ್ದ ತನುವಿಗಂಟಿದ ಸೆರಗ ಜಾರಿಸಿ
ಆಸೆ ಕಂಗಳಿಗೆ ಹುಚ್ಚೆಬ್ಬಿಸಿ
ಮುಂಗುರುಳು ವಸಿ ಬೆರಳಲೇ ಜಾರಿಸಿ
ಮೈ ಮನವನು ರೊಚ್ಚಿಗೇಳಿಸಿ
ಸನಿಹ ಬಾರದೆ ಸತಾಯಿಸುವ
ಈ ನಿನ್ನ ಚಾಳಿಗೆ
ಚಳಿಗಾಲದ ಸುಳಿ ಗಾಳಿಯ ಶಪಿಸುವುದೇ
ನನಗೆ ನೀ ನೀಡಿದ ಹಸಿ ಆಸೆಗಳ
ಹುಸಿ ಭರವಸೆಯ ಉಡುಗೊರೆ ಹುಡುಗಿ.....-
ನಾನೇನು ಬುದ್ದ ನಲ್ಲದಿದ್ದರೂ ನನ್ನೆದೆಯ ಧ್ವನಿಗೆ ನಾ ಬದ್ಧ...!😄
ತಾನೇ ಪರಿಚಯಿಸಿಕೊಂಡು
ವಿಳಾಸವನೂ ನೀಡಿ
ವಿಳಾಸದವರೆಗೆ ಹುಡುಕಿಕೊಂಡು ಬಂದಾಗ
ಮಾಯವಾಗಿದ್ದ ಮಹಾನುಭಾವ "Love"-
ಬಿಟ್ಟು ಹೋದದ್ದು ನಿನ್ನ ದುರಾದೃಷ್ಟ
ನನ್ನದು ಹುಟ್ಟುತ್ತಲೇ ಶುಕ್ರದೆಸೆ
ಕಳಪೆಯಾಗಿರುವುದು ನನ್ನ ಹ್ತತಿರವೂ
ಸುಳಿಯುವುದಿಲ್ಲ.....-
ಮದುವೆಯ ನಂತರ
ನಿಮ್ಮೊಳಗಿನ ಪ್ರಪಂಚವು
ಆನಂದವಾಗಿರಬೇಕಾದರೆ
ನಿಮಗೆ ಸಾತ್ ನೀಡಿ
ಸದ್ದು ಗದ್ದಲ ಮಾಡದ
ನಿಮ್ಮ ಖುಷಿ ಅವರ ಖುಷಿ
ಆಗಿದ್ದರೆ ಮಾತ್ರ ಮದುವೆಯಾಗಿ....!!-
ಜಾಸ್ತಿ ಆಯಿತು ಕಣೆ ಹುಡುಗಿ
ಹೃದಯದಲ್ಲಿ ನಿನ್ನ ಹಾವಳಿ
ಈ ಜನ್ಮ ಅಷ್ಟೆ ಅಲ್ಲ
ಬರೋ ಎಲ್ಲಾ ಜನ್ಮಕ್ಕೂ ನನ್ನ ಪ್ರೀತಿಯೇ ನಿನಗೆ ಬಳುವಳಿ.....❤️-
ಯೋಗ್ಯ ವ್ಯಕ್ತಿಯ ಜೊತೆ ಕುಡಿದ ಚಹಾ ಕೂಡ
ಶರಾಬಿಗಿಂತ ಹೆಚ್ಚು ನಶೆ ಎರಿಸುತ್ತದೆ....!-
ಭಾವಚಿತ್ರದ ಬದಲಿಗೆ ಚಾರಿತ್ರ್ಯವನ್ನು
ತೋರಿಸುತ್ತಿದ್ದರೆ ಜನರೆಂದೂ ಕನ್ನಡಿ
ನೋಡುತ್ತಿರಲಿಲ್ಲ....!-
ನಿಜಕ್ಕೂ ಈ ಹೃದಯ ನಿರಪರಾಧಿ
ಜೈಲಂತೆ ಖಾಯಂ ಶಿಕ್ಷೆ ಅನುಭವಿಸುತ್ತಿರುವ ಖಾಲಿ ಕೈದಿ-
ಅವಳೆಂದರೆ.....
ಹುಟ್ಟಿದಾಗಿನಿಂದಲೂ ಮೈಸೂರ್ ಸ್ಯಾಂಡಲ್
ಸೋಪನ್ನೇ ಬಳಸುತ್ತಿರುವಳು
ತಮನ್ನಾಳನ್ನ Brand Ambassador ಆಗಿ ಆಯ್ಕೆ ಮಾಡುವಾಗ ಅವಳನ್ನ ಒಂದು ಮಾತೂ ಕೇಳಲಿಲ್ಲ ಅಂತ ಮನ ನೊಂದುಕೊಂಡವಳು-
ಮೇರೆಂಬ ಹುಚ್ಚಿನಲಿ
ಸೂರೆಂಬ ನೆಚ್ಚನು ಬಿಟ್ಟು
ಹುಸಿಭಾವ ಹೊತ್ತ್ಹಲವರ ಕಿಚ್ಚ
ಪೆಚ್ಚಾಗಿ ನಿಲ್ಲುವ ಪರಿಗೆ
ಬದುಕೆನ್ನುವಿರೇನು...!!-