ಕಳೆದೊಗಿಹೆ ನಾ ಇಂದು ನಾಳೆಯಲಿ
ಕರಗುತಿಹೆ ನಾ ನಾಳೆಯ ಬಗೆಗಿನ ಯೋಚನೆಯಲಿ
ನಾಳೆಯ ನೋಡಲು ಇಂದು ಬದುಕದೆ
ಇಂದು ಮಾಡದೆ ನಿನ್ನೆಯ ಯೋಜನೆ
ಬದುಕ ಬಾಳಲು ಎಂದು ಕಲಿಯುವೆ,
ಕಳೆದೊಗಿಹೆ ನಾ ಇಂದು ನಾಳೆಯಲೇ.-
ಬೆಳೆಯಬೇಕು ಎತ್ತರೆತ್ತರ,
ಮುಗಿಲ ಮುಟ್ಟಿ ಮುಗುಳು ನಗು ಬೀರೋ ತನಕ,
ನಿನ್ನ ನೋಡಿ ಹೆಮ್ಮೆ ಪಡುವ ತನಕ,
ಎಲ್ಲಾ ಸಾಧ್ಯ ಎನ್ನೋ ತನಕ,
ಬೆಳೆಯಬೇಕು ನಾನು ಎತ್ತರೆತ್ತರ,
ಮುಗಿಲ ಮುಟ್ಟಿ ನೋಡೋ ತನಕ.-
ಶಾಶ್ವತವಲ್ಲ ಈ ಜೀವ, ಜೀವನ
ಹುಟ್ಟಿದಾಗ ಅರಿಯೆ ನೀ ಏನೇನು,
ಸತ್ತಾಗ ನೀ ಬರೀ ನೆನಪು
ನಾಲ್ಕು ದಿನದ ಬಾಳಲಿ ಹಿರಿಮೆ ಗರಿಮೆ.
ಬದುಕೊಂದು ಆಟ ಗೆಲುವು ಸೋಲಿನ,
ಗೆದ್ದಾಗ ಬೀಗದೆ, ಸೋತಾಗ ಕುಗ್ಗದೆ
ಮುನ್ನಡೆ ಎಂದೂ ನೀ ಎದೆಗುಂದದೆ
ಶಾಶ್ವತವಲ್ಲ ಈ ಜೀವ, ಜೀವನ-
ಬದುಕ ದೋಣಿಗೆ ಏರಿಳಿತಗಳು ನೂರಾರು, ಈಜಿ ದಡ ಸೇರುವುದೇ ಅದರ ಗುರಿ ಹೇಳು.
ಬಡವನಲ್ಲಿ ಶ್ರೀಮಂತ, ಶ್ರೀಮಂತನಲ್ಲಿ ಬಡವ ಅದು ನೀ ಬಾಳುವ ಪರಿಹೇಳು.
ಪರಿ ಪರಿ ಬಿದ್ದರು ಸೂಲಿನಲ್ಲೂ ಗೆಲ್ಲುವ ಆ ಛಲ ನಿನ್ನ ಮನಸಿನ ಹುರುಪೇಳು.
ಅರಿವೇ ದೀವಿಗೆ, ಅಹಂಕಾರ ನಿನ್ನ ಅವನತಿಗೆ ಮಿತಿಹೇಳು-
ವಿಶಾಲವೀ ವನ್ಯಸಂಕುಲ, ವೈವಿಧ್ಯತೆಯ ಆಗರ,
ಮಣ್ಣ ಹಿಡಿದು, ಬಂಡೆ ಸೀಳಿ, ಜಲವನೀರುವ ವಿಸ್ಮಯ,
ಬೀಜ ಹೊಡೆದು, ಮೊಳಕೆ ಬಂದು ಹಸಿರನೆರೆವ ಸೀಮೆಯ,
ಮುಗಿಲ ನೋಡಿ ತಾನು ಬೆಳೆದು, ಧರೆಗೆ ತುಂಬಿ ಉಸಿರ.
ಒಂದನೊಂದು ಹೊಂದಿಕೊಂಡು ಬೆಳೆವ ಪರಿಯೇ ರೋಚಕ,
ಶಾಖ ಹೀರಿ ತಂಪು ನೀಡೊ ಅದರ ಬದುಕೇ ಮೋಹಕ,
ತಾನು ಬೆಳೆದು ಪರರ ಬೆಳೆಸೊ ಅದರ ಬದುಕೆ ಸಾರ್ಥಕ,
ಮರವ ನೋಡಿ ಕಲಿಯಬೇಕು ನಮ್ಮ ಬದುಕ ಬಾಳ್ವೆಯ.
ಮನುಜ ನೀನು ಕೊಲ್ಲುವೇಕೆ ಆ ವನ್ಯ ಜೀವವ,
ಹಸಿರೆ ತಾನೇ ಉಸಿರು ಎಂದು ಹೇಗೆ ನೀನು ಮರೆತೆಯ,
ಬದುಕಲಾರೆ ನೀನು ಎಂದೂ ಕಡಿದು ಜೀವ ರಾಶಿಯ,
ಉಸಿರು ಕಷ್ಟವಾಗುತ್ತಿರಲು ನೆನೆವೆ ಆಗ ವೃಕ್ಷವ.
ಬೆಳೆಸು ಮನುಜ ವನವನಿಂದು ಅದುವೆ ತಾನೇ ಉಚಿತ,
ಹಸಿರಿಲ್ಲದೆ ಈ ಭುವಿಯು ಸೋಲುವುದಂತು ಖಚಿತ,
ಮಳೆಯು ಬರಲು ವನವು ಬೇಕು ಜಲವೆ ತಾನೇ ಜೀವಿತ,
ನಡೆಯಬೇಕು ಎಂದೂ ನಾವು ಪರಿಸರವ ಕಾಪಾಡುತ.
ಅರ್ಸನ್ ಡಿ'ಸೋಜ-
ಬದಲಾಗಬೇಕಿದೆ ನಮ್ಮಯ ವಿಷಮ ಮನಸ್ಥಿತಿಯ ಭೂತ,
ಇತರರ ವಸ್ತ್ರ, ಅಲಂಕಾರಗಳ ಮೇಲಿನ ಅಸಭ್ಯ ನೋಟ,
ಮೇಲು ಕೀಳು, ಜಾತಿ ಬೇದವನಾಡುವ ಅಸಹಿಷ್ಣುತಯ ಆಟ,
ಒಳಿತು ಕೆಡುಕುಗಳ ಅರಿವಿನ ಮಿತಿಯ ಮೀರಿದ ಅಜ್ಞಾನದಾಟ.
-
ನನ್ನದೊಂದಿಹುದು ಪುಟ್ಟ ಲೋಕ,
ಯೋಚನಾ ಲಹರಿಯ ಮಾಯೆಯೊಳಗೆ,
ಏರಿಳಿತಗಳ ಭಾವದೊಳಗೆ, ನೋವು ನಲಿವಿನ ಧ್ಯಾನದೊಳಗೆ,
ಅರಿವಿಗೆ ಬಾರದ ಛಾಯೆಯೊಳಗೆ-
ಬೆಂಕಿ ನರ್ತನ ನಡೆವುದು ನೀರು ತಾಕುವವರೆಗೆ,
ಪ್ರವಾಹದರಿವು ಇರುವುದು ಹಣೆಕಟ್ಟು ಬಡೆವವರೆಗೆ
ಸಿಟ್ಟಿನಾಟ ನಡೆವುದು ಮುಗುಳ್ನಗೆ ಬೀರುವವರೆಗೆ,
ಯುದ್ಧಭೀತಿ ಹರಡುವುದು ಶಾಂತಿ ಮೂಡುವವರೆಗೆ.-
A fire can take anything in its way unless its water,
The water flows until it finds a dam, Anger can be crumbled with a smile,
The war will end until it finds peace.-
ಹಳೆತು ಹೊಸತನಗಳ ಸಂಘರ್ಷಕ್ಕೆ ಬಿದ್ದು,
ತಾಯಿ ಬೇರ ತಂತು ಬೇರು ತೊರೆದು,
ಗಿಡವಾಗಿ ಬಗ್ಗದ್ದು ಮರವಾಗಿ ಧರೆಗುರುಳಿದಂತೆ,
ಸಾಮರಸ್ಯವಿಲ್ಲದ ಬಾಳು ಯುದ್ದೋನ್ಮಾದದ ಬರಡು ಭೂಮಿ.-