ಇರುಳ ಹಾದಿಯಲಿ ಸಂಚಾರಿಯಾಗಿರಲು
ಅವಳು,
ಭರವಸೆಯ ಬೆಳಕ ಚೆಲ್ಲುತ, ಜೊತೆಯಾದನು
ಅಂಬರದ ಚಂದಿರನು.-
ಇರುಳ ದೋಣಿಯಲಿ....
ಕಡಲ ಹಾದಿಯಲಿ....
ಬದುಕಿನ ಹುಟ್ಟನು ಹಿಡಿದು,
ಒಲವಿನ ಗುರಿಯೆಡೆಗೆ ಸಾಗುತಿರುವೆ...
ನಾವಿಕನಾಗಿ ಜೊತೆಯಾಗುವೆಯಾ....
ನಲ್ಮೆಯ ಚಂದಿರನೆ....-
ನೆನಪುಗಳ ಬುತ್ತಿ ಹೊತ್ತು
ನಿರೀಕ್ಷೆಗಳಿಲ್ಲದೆ ಅಲೆಯುತ್ತಿದ್ದ
ಮನಸಿಗೆ, ಮುದ ತಂದಿತು ಅವನ
ಅನಿರೀಕ್ಷಿತ ಆಗಮನ....-
In every Men there is a kindness of Women and in every Women there is a boldness of Men. Just there is need to respect Mankind.
-
ಆವರಿಸಿದೆ ಶೋಕವು, ಅಮಾವಾಸ್ಯೆಯ ಕತ್ತಲಿನಲಿ
ಮಂಕಾಯಿತು ಮನವು, ನಿನ್ನ ನೆನಪುಗಳಲಿ
ನಡೆದಿದೆ ಬದುಕು, ನೀ ತೋರಿಹೋದ ಹಾದಿಯಲಿ
ಪ್ರಾರ್ಥಿಸುವೆ ನಾ ನಿನಗಾಗಿ
ಮತ್ತೆ ಹುಟ್ಟಿ ಬರುವೆಯಾ ಈ ನಾಡಿನ ಧ್ರುವತಾರೆಯಾಗಿ
-
ಭಾವನೆಗಳು ಮೂಕವಾಗಿ,
ಭರವಸೆಯ ತೋಳನು ಅಪ್ಪಲು ಗೋಪಿಯು,
ಸಂತೈಸಿತು ಅವಳನು,
ಶ್ಯಾಮನ ಒಂದೊಂದು ಎದೆ ಬಡಿತವು.-
ಸ್ವರವಾಗಲು ಅವನು
ಅವಳ ಬದುಕಿನ ಆಲಾಪದಲಿ
ಅಲಂಕರಿಸಿದಳು ಅವಳು ಮುತ್ತಾಗಿ
ಅವನ ಕೊರಳಿನ ಮಾಲೆಯಲಿ.
-
ಸೇರಲಾರರು ಬಾನು-ಭುವಿಯು
ನಲುಗಿತು ಇಳೆಯು ಮಾಗಿಗೆ,
ತಲ್ಲಣಿಸಿತು ಧರೆಯು ವರ್ಷೆಯ ಆರ್ಭಟಕೆ
ದೂರದಿ ನಿಂತು ಸ್ಪಂದಿಸಲು ಬಾನು
ರವಿಯ ಕಿರಣ ಚೆಲ್ಲುತ,
ಹರ್ಷಿಸಿದಳು ಭುವಿಯು
ಹಸಿರು ನಗೆಯ ಬೀರುತ.
-
ನಿರೀಕ್ಷೆಯ ಹೊಸಿಲಲಿ ನಿಂತಿರಲು ಅವಳು,
ಭರವಸೆಯ ತಂಗಾಳಿಯಾಗಿ,
ಗೋಪಿಯ ಸೋಕಿಹೋದನು
ರಾಧಾರಮಣನು.-
ನಿನ್ನ ಕಾಣದೆ ಜಾರುತಿಹ ಕಣ್ಣ ಹನಿಯು
ಬಯಸುತಿದೆ ಮುತ್ತಾಗಲು ಸೇರಿ ನಿನ್ನ ಒಲುಮೆಯ ಲೋಕವ.
-