ಅತ್ತು ಮರೆಯಲೇ,
ಬಿಟ್ಟು ಹೋಗಲೇ,
ಮನದ ದುಗುಡ...-
ಯಾರ ಭಾವ ಯಾರು ಅರಿಯಬಲ್ಲರು?
ಈ ಮನದ ನೋವ ಯಾರು ನೀಗಿಸಬಲ್ಲರು?
ನಗುತ ಸಾಗಲು ಬಯಸಿದೆ ಬದುಕು,
ಬೇಡವಾಗಿದೆ ಹಂಗಿಸುವ ಮಾತಿನ ಅಂಕು ಡೊಂಕು!
ಮಾತು ಸಾಕಾಗಿದೆ,ಮೌನ ಬೇಕೆನಿಸಿದೆ,
ನಿಲ್ಲಿಸಲೇ ಮನದೊಡನೆ ಸಮರ?
ಜಗವು ಛೀ ಎನಿಸಿದೆ,
ನಲಿವು ದೂರೆನಿಸಿದೆ,
ಇನ್ನೆಲ್ಲಿಯ ಈ ಭವದ ಹಾದಿ?
-
ಮತ್ತೆ ಕಣ್ಣೆತ್ತಿ ನೋಡಲೇ,
ತುಸು ಹತ್ತಿರ ನಿಂತು ಮಾತಾಡಲೇ??
ಅದೇನೋ ನೀ ಮಾಡಿದ ಮೋಡಿ,
ಜೊತೆಗೂಡಿ ಮಾತಾಡಲೇ ನಗುವ ನೋಡಿ!!
ನಕ್ಕು ಕರಗಿಸಿ ನನ್ನ ದುಗುಡ,
ಸದಾ ಬಯಸಲೆ ಸ್ನೇಹದ ಸಂಗಡ!!-
ಸಂಜೆಯ ಮುನ್ನ ಬಾಡದಿರು ಹೂವೆ,
ನೀನಾಗಾಗಿ ಕಾದಿಹಳು ಅಲ್ಲೆನ್ನ ಚೆಲುವೆ....
ಮುಡಿ ಜಾರುವವರೆಗೂ ನೀನಿನ್ನು ಜೀವಂತ,
ಪಸರಲಿ ನಿನ್ನ ಅಮಲು ಪ್ರೀತಿಯ ಪರ್ಯಂತ...-
ಸಮಯವಾಯಿತು ಅಣಿಗೊಳ್ಳಿರಿ ಅಂತರಾಳದ ಯುದ್ದಕೆ,
ಮನದಾಳದಿ ಹುದುಗಿ ಕುಳಿತ ಕಾಮನೆಗಳ ಸಂಹಾರಕೆ......
ವೈರಿ ಯಾರೆಂಬುದ ಅರಿಯಲೊಲ್ಲೆಯ
ಹಚ್ಚು ಬುದ್ದಿಯನ್ ಒರೆಗೆ,
ನಿನ್ನೊಡನೆ ನೀ ಸೆಣಸಿ ನಿಲ್ಲು ಯೋಧರ ಸಾಲಿಗೆ....
ಜಾತಿ ಕಲಹದಿ ನಲುಗದಿರು ನೀ ಅನಂತ ಸ್ವರೂಪ,
ಧರ್ಮದೆಸರಲಿ ಕುಗ್ಗದಿರು ನಿನ್ನದು ವಿಶ್ವರೂಪ...
ಭೇಧಭಾವವ ತೊರೆದು ನಿಲ್ಲು ನಡೆ ನೀ ಅನಂತದೆಡೆಗೆ,
ಸರ್ವರೆಲ್ಲರು ಒಂದೇ ಎನ್ನು ಮಾನವೀಯತೆಯೇ ನಿನ್ನ ಉಡುಗೆ....
-
ನಗುವೊಂದು ಮುಖವಾಡ ಅಳುವೊಂದು ಮುಖವಾಡ,
ಬದುಕಿತ್ತಿರುವೆವು ನೀಚ ಮನದ ಸಂಗಡ.......
ಇಲ್ಲಿ ಎಲ್ಲರೂ ಸರಿ ತಮ್ಮ ದೃಷ್ಟಿಯಲ್ಲಿ ,
ನಟಿಸಬಲ್ಲರು ಅಂತರಾತ್ಮವ ದೂರತಳ್ಳಿ.....
ಯಾರ ಮೇಲೂ ಇಲ್ಲ ನಂಬಿಕೆ,
ಹೆಯ್ಯ ಮಾಡಲು ಇಲ್ಲದ ನಾಚಿಕೆ....
ಬದುಕುವರು ಸತ್ತ ಹೆಣೆಗಳಂತೆ ,
ಜ್ಯೋತಿ ಆರಿದ ಹಣತೆಯಂತೆ....
ಕೇಳಿದರೆ ಹೇಳುವರು ನೂರೆಂಟು ಮಾತು,
ನೀತಿ ಹುದುಗಿ ಕೊಂಡಿದೆ ನೆಲದಲ್ಲಿ ಹೂತು.....
ಸಂಬಂಧ ಆಗಿವೆ ಒಳಿತು ಕೆಡುಕಿನ ಲೆಕ್ಕಚಾರ,,
ಇದೋ ನೋಡಿ ಮಾನವ ಕುಲದ ಸ್ವ ಅತ್ಯಾಚಾರ......
-
ಕರುನಾಡು ಕೇವಲ ಭೂಗೋಲಿಕ ಪ್ರದೇಶವಲ್ಲ,
ಅದು ಪ್ರತಿಯೋರ್ವ ಕನ್ನಡಿಗನ ಮನದ ವಿಸ್ತಾರ!!!
-
ಪದ್ದತಿ!
ಸಮಾಜದ 'ಕಿತಾಪತಿ'!
ಅನುಸರಿಸಿದರೆ ಸಮ್ಮತಿ.
ಮನಬಂದಂತೆ ಬದುಕಿದರೆ ,
ಪರರ ಬಾಯಲ್ಲಿ' ಸದ್ಗತಿ'!!!
-
ಜೀವನ ಎಷ್ಟರದು?
ಸಂಬಂಧ ಎಷ್ಟರದು?
ಕಾಮನೆಗಳು ಎಷ್ಟರವು?
ಭಾವನೆಗಳು ಎಲ್ಲಿಯವು?
ಈ ಎಲ್ಲಾ ಬಲ್ಲವ ಇಲ್ಲಿ ಇಲ್ಲ,
ಇದ್ದರೆ ಅವ ಈ ಭೂಮಿಗೆ ಸಲ್ಲ!!-
ಅರಿಂಜಯ ಎಂದರೆ ಶತ್ರುವಿನಿಂದ ಗೆದ್ದು ಬರುವವ.
ಮನಬಿಚ್ಚಿ ಮಾತಾಡಿ ಎಲ್ಲರಿಗೂ ಶತ್ರು ಆದವ..-