ಅನ್ವೇಷಕ   (7)
1.8k Followers · 243 Following

Joined 20 January 2019


Joined 20 January 2019
YESTERDAY AT 13:22

ಮೈಸಲುಗೆಯು ಬಡಿಸುವ ಹೋಳಿಗೆಯ ಸಿಹಿ ಸುಖಕೆ ಬೇಕು,
ನಶೆಯೇರಿಸೋ ರತಿಮನ್ಮಥರ ರಸಪೂಜೆಯ ಸವಿಕಂಪು.

-


22 JAN AT 16:10

ಅವಳ ತುಟಿಗಳಿಗೆ ಭಾವ ಪ್ರಕಟಿಸುವ ಯೋಚನೆ,
ಕಣ್ಣುಗಳ ಮಾತಿಗಿಂತ ಬೇರೆ ಅನುವಾದ ಬೇಕೆ?
ಮನಸ್ಸು ಬಗೆ ಬಗೆಯಾಗಿ ಬೀರುವಾಗ ಛಾಯೆ,
ಹೃದಯ ತೋರೋ ಒಲವ ಸಾಮರ್ಥ್ಯ ಸಾಲದೆ?

-


20 JAN AT 15:17

ಮಾತಿಲ್ಲದೆ
ಬೇರೇನೂ ಹೇಳದೆ
ತುಟಿಗಳಂಚಿನಿಂದ
ನಗುವ ಆ ಭಾವಕೆ
ಪ್ರೀತಿ ಆಗೋದು ಅಸಾಧ್ಯವೇ?
ಅಂತೂ ಎಚ್ಚರವಾಗಿಯೇ
ಕಳೆದು ಹೋಗಿದೆ
ಹೃದಯ ಅವಳಲ್ಲಿಗೆ.

-


18 JAN AT 15:41

ಹೃದಯ!
"ಎಳೆಗರುವಿನಂತೆ"
ಪ್ರತಿಕ್ಷಣವೂ ಆಂತರಿಕವಾಗಿ
ಆಕ್ರಂದಿಸುವುದು ಅನುರಾಗವನ್ನೆ.

-ದೈವದ ಆಜ್ಞೆಯಂತೆ ಜೀವದ ಯಾತ್ರೆ,
ನಿನ್ನಯ ಕರ್ಮಗಳಂತೆ ಜೀವನದ ಕತೆ.

-


16 DEC 2020 AT 19:23

ಅದೇ ನಗು,
ಅದೇ ಭಾವ,
ವ್ಯತ್ಯಾಸವಿಷ್ಟೆ,
ಈ ವೇಳೆ ಅವಳಿಲ್ಲ.

-


15 DEC 2020 AT 13:29

ರಂಗ!
ಭಕ್ತಿ ಭಾವಧಾರೆಯ,
ಅಂತರಂಗದಭಿಷೇಕ,
ನಿನಗೆ.

-


13 DEC 2020 AT 19:02

ಒಲವಿನೇಕಾಂತವ ಅರಿತವರಾರು?
ಒಲವಿನಾಳವ ಕಂಡವರಾರು?
ಒಲವಿಂದ ಒಲವಿಗೆ ನಂಟೊಂದಿದೆ,
ಒಲವಿನ ಗುಣವೇ ಬೆಳಕಾಗಿದೆ.

-


11 DEC 2020 AT 12:37

ಅವಳೋ!
ತಲೆ ತಿನ್ನುವ ತರಲೆ,
ಯಾಕಂದ್ರೆ? ಅಲ್ಲಿದೆ
ಅವಳಿಷ್ಟದ ಮಂಜುಕೆನೆ!

-


8 DEC 2020 AT 20:03

ನಿನ್ನೊಬ್ಬನನ್ನು ಬಿಟ್ಟು
ಬೇರೆಲ್ಲೆವೂ ಸುಳ್ಳುಗಳೇ!

-


Fetching ಅನ್ವೇಷಕ Quotes