ಸೇತುವೆ
-
ಕಂಡ ಕನಸೆಲ್ಲಾ
ಕಾಡಿತ್ತು ಆ ಹಗಲಲ್ಲೂ..
ಜೊರ್ರೆ ಎಂದು ಸುರಿವ
ಮಳೆ ಬೇರೆ ಹೊರಗೆ
ಬಿಡದ ಅದೇ ಮಾಸದ
ಮುಖದ ನೆನಪು
ಮರೆಯೆಂದು ಮನಸಿಗದೆಷ್ಟು
ರಮಿಸಿದರೂ
ಮನಸುಮಾಡದ ಮನಸು
ಮುಗಿಲೆತ್ತರಕ್ಕೆ ಚಿಮ್ಮುವಂತಿತ್ತು
ಮುಗುಳುನಗೆಯು ಮೊಗದಲ್ಲಿ ಅಂದು
ಕುಣಿದು ಕುಪ್ಪಳಿಸಿದ್ದೇನು
ಜಗದ ನೆನಪಿರದ ಮರೆವು
ಎದ್ದೆದ್ದು ಅಲೆಯಂತೆ
ಮತ್ತೆ ಇಳಿಯುವುದು
ಅದೇ ಹಳೆಯ ನೆನಪು
ಹುಚ್ಚಾಗಿಸುವುದಲ್ಲದೇ ಮತ್ತೇನು
ಈ ಪ್ರೀತಿ ಮತ್ತು...-
ಅಲ್ಲ....
ಕೆಲವೊಮ್ಮೆ ಸಾಧ್ಯವಿರುವುದೆಲ್ಲವನ್ನೂ
ಮಾಡಿದರೆ ತಪ್ಪಾದೀತು...
ಸಾಧ್ಯವಿದೆಯಂದಾಕ್ಷಣ ಅದು
ಸರಿಯೆಂದೇನು ಅಲ್ಲ...
ಹಾಗಾಗಿ ಸಾಧ್ಯವಿಲ್ಲವೆಂದೇ
ಮನಸ್ಸನ್ನೊಪ್ಪಿಸುವುದೊಳಿತು...-
ಹೂವುಗಳೇ ಹರಡಿರ ಬೇಕೆಂದೇನಿಲ್ಲ
ನಾ ನಡೆವ ದಾರಿಯಲಿ...
ನನ್ನವನ ಜೊತೆಯಿದ್ದರೆ ಸಾಕು
ಕಲ್ಲು ಮುಳ್ಳಿದ್ದರೂ ಅದುವೇ (ದಾರಿ)ಹಾದಿ ..
-
ನಮಗೆ ಪ್ರಿಯರೆನಿಸಿದವರಿಂದ
ಆ ಮಾತುಗಳು ಬಂದರೆ
ಅದರ ತೂಕವೇ ಬೇರೆ...
ಎಂತಹ ಕಠೋರ ಕಹಿಯೂ
ಸಿಹಿಯಾದೀತು..-
ಬರಿ ನೆನಪಿಗಷ್ಟೇ
ಜೊತೆಯಾದ ಗೆಳೆಯ
ನೀನು ..
ಹೆಸರಿಗೆ ಅಂಟಿರುವ
ನಂಟಷ್ಟೇ ನಿನ್ನೊಂದಿಗೆ ..
ಜೊತೆಗೆ ಸಾಗುವ
ಯೋಗ ನೆನಪಿಗಷ್ಟೇ.. ನೆನಪಿಗಷ್ಟೇ...-
ಮತ್ತದೇ ನೆನಪು
ತೇವವಾಗುವ ಕೆನ್ನೆ..
ಅದೆಷ್ಟು ಬಾರಿ
ಹೇಳಿದ್ದೆ ನೀನು....
ಅದೆಷ್ಟು ನಿನ್ನೋಡಲೂ
ಹರಿಯಿತೋ...
ಬಿಟ್ಟೂ ಬಿಡದ ಈ
ಬಂಧಕ್ಕೇನು ಅರ್ಥ..
ಕಣ್ಣೀರೊಂದೇ ನನ್ನ
ಭಾಷೆಯಾಗಿತ್ತು..
ಆಗಲೂ..ಈಗಲೂ...
-