ಹೇ ದಡ್ಡ...
ಯೋಗ ಅನ್ನೋದು ಕೆಲವೊಮ್ಮೆ ಅಯೋಗ್ಯರಿಗು ಸಹ ಒದ್ದುಕೊಂಡು ಬರುತ್ತದೆ..
ಆದರೆ ಅದೇ,,,
ಯೋಗ್ಯತೆ ಅನ್ನೋದು ಕೆಲವೊಬ್ಬರಿಗಷ್ಟೇ ಸೀಮಿತ..
-
ಇದು ಮೋಸದ ಜಗತ್ತು,
ಯಾರನ್ನಾದರೂ ನಂಬುವ ಮುಂಚೆ ನೂರು ಬಾರಿ ಯೋಚಿಸು..
ಏಕೆಂದರೆ ಇಲ್ಲಿ ಮುಖಕ್ಕಿಂತ ಮುಖವಾಡಗಳೇ ಜಾಸ್ತಿ.
-
ಬಯಸುತ್ತಿರುವೆ ಈ ಹೊಸ ವರ್ಷಕ್ಕೆ ಇಡಲು ಹೆಜ್ಜೆ ನಿನ್ನೊಡನೆ...
ಅರ್ಪಿಸುತ್ತಿರುವೆ ಈ ಹೂಗಳ ನಿನ್ನ ಚರಣ ಗಳಿಗೆ ನೀ ಬರಲು ನನ್ನೊಡನೆ...
ಸ್ವೀಕರಿಸುವೆಯ ನನ್ನೊಡನೆ ಕಾಲಿಡಲು ಹೊಸ ಜೀವನಕ್ಕೆ....
-
ಬಯಸುತ್ತಿರುವೆ ಈ ಹೊಸ ವರ್ಷಕ್ಕೆ ಇಡಲು ಹೆಜ್ಜೆ ನಿನ್ನೊಡನೆ...
ಅರ್ಪಿಸುತ್ತಿರುವೆ ಈ ಹೂಗಳ ನಿನ್ನ ಚರಣ ಗಳಿಗೆ ನೀ ಬರಲು ನನ್ನೊಡನೆ...
ಸ್ವೀಕರಿಸುವೆಯ ನನ್ನೊಡನೆ ಕಾಲಿಡಲು ಹೊಸ ಜೀವನಕ್ಕೆ....
-
ಅರ್ಥವೇ ಮಾಡಿಕೊಳ್ಳದ ಜಗತ್ತಿನಲ್ಲಿ ನಾನು 'ಏಕಾಂಗಿ'..
ಅರ್ಥ ಮಾಡಿಸೋಕೆ ಹೋದರೆ ನಾನು 'ಸ್ವಾರ್ಥಿ'...
ಮೌನವಾಗಿದ್ದರೆ ನಾನು 'ದುರಹಂಕಾರಿ'...
ದೂರ ಸರಿದರೆ 'ದರ್ಪ'...
ಮನಸಿನ ಭಾವನೆಗಳಿಗೆ ಇಲ್ಲಿಯ ಜನರು ಕೊಡುವ ವ್ಯಾಖ್ಯಾನ ಇದುವೇ....
ಇಲ್ಲಿ ನಿಮ್ಮ ಲೆಕ್ಕಾಚಾರ & ಮನಸ್ಸಿನ ಭಾವನೆಗಳಿಗೆ ಸಿಗುವ ಕಟ್ಟಕಡೆಯ ಉತ್ತರ...
"ಏಕಾಂಗಿತನವೇ ಲೇಸು"...
-
ಮತ್ತೊಬ್ಬರನ್ನು ಬದಲಯಿಸುವ ಬದಲು ನಾವೇ ಬದಲಾದರೆ ಜೀವನ ತುಂಬ ಚೆನ್ನಾಗಿರುತ್ತೆ...
-
ಯಾರು ನೆನೆಸಿಕೊಳ್ತಿಲ್ಲ ಅಂತ ಮರುಗದಿರು ಮಂಕೆ, ಅವಶ್ಯಕತೆ ಇದ್ದಾಗ ತಾವಾಗೇ ಬರ್ತಾರೆ,
ನೀನು ನೀನಾಗಿರು ಸುಮ್ಕೆ...
-
ಜೀವನವನ್ನು ಸಂಪೂರ್ಣವಾಗಿ ಬದುಕಲು ಮತ್ತು ತುಂಬುಜೀವನಕ್ಕಾಗಿ ನಮ್ಮ ದೇಹವನ್ನು ನಾವು ದೇವಸ್ಥಾನದ ಹಾಗೆ ನೋಡಿಕೊಳ್ಳಬೇಕು ಮತ್ತು ಅದನ್ನು ಪವಿತ್ರವೆಂದು ಭಾವಿಸಬೇಕು...
-
ವ್ಯಾಪಾರ ರಂಗದಲ್ಲಿ ಗುಣಮಟ್ಟದ ಆಟ!!
ಸಹಾಯಹಸ್ತ ಚಾಚಿ ಬೀರುವ ನೋಟ!!
ಗುರಿಮುಟ್ಟಲು ಛಲಬಿಡದೆ ಸಾಧಿಸುವ ಹಠ!!
ಭಾರತಾಂಬೆ ಅಲಂಕರಿಸಿದ ಅಮೂಲ್ಯ ಕಿರೀಟ!!
ನಿರ್ಮಿಸಿದಿರಿ ಶಾಂತಿ ಸಹಬಾಳ್ವೆಯತೋಟ!!
ನಿಲ್ಲಲಿಲ್ಲ ನಿಮ್ಮ ಸಾಧನೆಯ ಓಟ!!
ಹೊರಟು ಮರೆಯಾಗುತ್ತಾ ಹೇಳಿದಿರಿ ಟಾಟಾ!!
ನಿಮ್ಮ ಜೀವನವೇ ಬಹುದೊಡ್ಡ ಪಾಠ!!
ರತನ್ ಟಾಟಾ...
ರತನ್ ನೋವಲ್ ಟಾಟಾ...
-