ಶಿವ ಶಿವ... ಶಿವರಾತ್ರಿ ಬಂದಿತು ಮಹಾಶಿವರಾತ್ರಿ,
ಈಶ್ವರನ ತಾಂಡವವು ಹಾಲಾಹಲವ ನುಂಗಿದ ವರದಿ.
ಉಪವಾಸ, ಧ್ಯಾನ, ಪೂಜಾ ವಿಧಿಗಳು ನೆಡೆದಿವೆ,
ಶಂಕರ ದೇವನ ನಾಮಸ್ಮರಣೆಯು ಸಂತಸವ ತಂದಿದೆ.
ಕತ್ತಲೆಯ ಕಳೆದು ಜಗದಿ ಆಧ್ಯಾತ್ಮದ ಬೆಳಕ ಚೆಲ್ಲಿ,
ಅವನ ಸ್ತುತಿಗಳು, ಎನಿತು ಸುಖ, ನೆಮ್ಮದಿಯ ನೀಡಿದೆ.
ವಿಶೇಷ ವಿಧಿಯ ಪ್ರಕಾರ ಈ ದಿನದ ದಿನಚರಿ ಇಹುದು,
ಈ ಅದ್ಭುತ ಘಳಿಗೆಯ ಚಿತ್ರಣ ಬಲು ಸೊಗಸಾಗಿದೆ.
ಬಾಲ್ಯದ ದಿನಗಳ ನೆನಪಿನ ನಂಟು ಕೂಡ ಕೂಡಿದೆ,
ಆ ದಿನಗಳ ಸುಂದರ ದೃಶ್ಯವ ಇಂದು ನಾ ನೆನೆದೆ.-
ಊರ ಕೊಳೆಯೆಲ್ಲಾ ಸಮುದ್ರದಲ್ಲಿ ಸೇರಿದೆ,
ಆ ಸಮುದ್ರದಿ ತಯಾರಾದ ಉಪ್ಪು ರುಚಿಯಾಗಿದೆ.
ಬೆಳಗ್ಗಿನ ಚಹಾ ಒಂದು ಮಾಂಸಹಾರಕ್ಕೆ ನಾಂದಿ,
ತರಕಾರಿ ಸೊಪ್ಪು ಸೊದೆ ಎಲ್ಲಾ ಗೊಬ್ಬರದಿ ಬರುವುದು.
ಅಡಿಯಿಂದ ಮೂಡಿವರೆಗು ಸ್ನಾನವ ಮಾಡಿ ನಾವು,
ಬಲು ಮಡಿಯಲ್ಲಿ ಇಹೆವೆಂದು ಹುಂಬಲ್ಲಿ ಇರೋದು.
ಸೃಷ್ಟಿಯ ಹೆಚ್ಚು ಉಪಯೋಗಿಸುವ ನಾವುಗಳು,
ಏನು ಕೊಟ್ಟಿರುವೆವು ತಿರುಗಿ ಈ ಪ್ರಕೃತಿಯ ಮಡಿಲಿಗೆ.
ಆಮ್ಲಜನಕದ ಒಂದು ಋಣ ಸಾಕು ನಾವು ಸೋಲಲು,
ನಾವೇನು ಕೊಡುವ ಮಟ್ಟಿಗೆ ಇಲ್ಲ ಬಿಡಿ ದೇವರಿಗೆ..!?-
ಕೀಲ್ ಮತ್ತು ಕಟ್ಟ ರಾಕ್ಷಸರ ಸೆದೆಬಡಿದಳು ತಾಯಿ,
ಕೊಂಕಣದಿ ಚಿಂಚಲಿಗೆ ಬಂದಳು ಕರುಣಾಮಯಿ.
ಹಿರಿದೇವಿಯ ಆಶ್ರಯದಿ ನಿಂತಳು ಚಿಂಚಲಿಯಲ್ಲಿ,
ಗುಡ್ಡತಾಯಿ,ಕರಗುಟ್ಟಿ,ಯಡಿಮಾಯವ್ವರ ಸಹಾಯದಿ.
ಮೂಲ ದೇವತೆಯ ಬಲದಿ ಗ್ರಾಮ ದೇವತೆಯಾಗಿ,
ಭರತ ಹುಣ್ಣಿಮೆಗೆ ನಡೆವುದು ಜಾತ್ರೆ ಬಹಳ ವಿಶೇಷದಿ.
ಲೋಕದ ಹಿತವ ಕಾದಿಹಳು ನಮಗೆ ಅಭಯ ನೀಡಿ,
ಭಕ್ತರು ಸಂತಸದಿ ಬರುವರು ಆಕೆಯ ಆಶ್ರಯ ಗೂಡಿಗೆ
ಹಾಲಿನ ಹೊಳೆಯಲ್ಲಿ ಸ್ನಾನ ಮಾಡಿಬರುವ ಭಕ್ತರು,
ದರ್ಶನ ಪಡೆದು ಭಂಡಾರ ಒಯ್ಯುವರು ತಮ್ಮ ಮನೆಗೆ.
-
ಧರ್ಮ ಮತಗಳ ಮೀರಿದ ಯೋಚನೆ ಇಲ್ಲಿಯದು,
ಭಾರತ ದೇಶದ ಕೀರ್ತಿಯು ಇಂದು ಎಲ್ಲೆಡೆ ಹಬ್ಬಿಹುದು.
ವಿಶ್ವದ ಎಲ್ಲೆಡೆ ಶಾಂತಿ ಮಂತ್ರವ ಭಾರತ ಸಾರಿಹುದು,
ಕೋಪವ ತೋರುವ ದೇಶಗಳಿಗೆ ಪಾಠವ ಕಲಿಸಿಹುದು.
ಜೀವನ ಸಾಗಿಸೋ ಸ್ನೇಹಮಾರ್ಗ ಇಲ್ಲಿ ಕಲಿಬಹುದು
ಕಲಿತ್ತದ್ದು ಕಲಿಸಿದರೆ ನಮಗೇ ಒಳಿತಾಗುವುದು.
ಕನ್ನಡ ಸವಿಯೋ ಶಕ್ತಿಯ ಇದ್ದರೆ ಬೇಜಾರು ಎಲ್ಲಿಯದು
ಪದಗಳ ಪುಂಜವ ಬಳಸಿದ ಕೈಗಳು ಬತ್ತಿಹೋಗವು.
ಕನ್ನಡ ಪತಾಕೆ ಅದರಲ್ಲೆ ಶ್ರೇಷ್ಠತೆ ಕಂಡಿಹುದು,
ಕೆಲಸವ ಮಾಡುವ ಹಂಬಲ ಇದ್ದೆಡೆ ಗೆಲುವು ತಪ್ಪದು.-
ಆಗ ಯಾವಾಗಲೋ ನೆಡೆದ ಕತೆಗಳು,
ಈಗ ಈಗಲೇ ನಡೆಯದ ಕನಸ್ಸುಗಳು.
ಯಾವಾಗಲೂ ಈ ಕೆಲಸವಿಲ್ಲದ ಆಲೋಚನೆ,
ದಂಡವಲ್ಲದೆ ಇನ್ನೇನು ನೀನೇ ಹೇಳು.
ಇರುವುದೊಂದೇ ನಡೆಯುವ ಸಮಯ,
ಅದರೊಂದಿಗೆ ನೀ ಮಾಡು ಪಯಣ.
ಮರುಕ್ಷಣ ಇಲ್ಲವೆಂದು ಜೀವನವ ಕಳೆ,
ಅಲ್ಲೆ ಕಾಣುವುದು ನಿನಗೆ ಹೊಂಗಿರಣ.
ನದಿಯ ತರಹ ಗಳ ಗಳವೆಂದು ಹರಿ,
ಎಂದಿಗೂ ಕೂಡ ನಿಂತ ನೀರಾಗದಿರು.
ಮನಸ್ಸಿಗೆ ಹಾಕಿಕೊಳ್ಳಬೇಡ ಬೇಲಿ,
ಇದ್ದರೂ ದಾಟಿ ಬಿಡು ಈಗಲಾದರು.-
ಕಂಡೆ.. ಕಂಡೆ ನಾ ಒಂದು ಕನಸ..!!?
ಹೀಗೂ ನೆಡೆದಿರಬಹುದೇ ಹಿಂದೆ ಎಂದುಕೊಂಡೆ..?!
ದೀರ್ಘ ಧ್ಯಾನದಿ ಮಿಂದ ಸಂತನೊಬ್ಬ,
ವರವ ಪಡೆವ ಭಗವಂತನ ದಯೆಯಿಂದ.
ಅಷ್ಟ ಐಶ್ವರ್ಯವ ದಕ್ಕಿಸಿಕೊಂಡ ಅವನು,
ಶುರು ಮಾಡಿದ ದಂಧೆ ಬಡ್ಡಿ ವ್ಯಾಪಾರದ.
ಸಾಲಗಾರರೆಲ್ಲ ಬರಗಾಲದಿ, ನೇಣಿಗೆ ಶರಣರಾದರು,
ಹಣವೆಲ್ಲ ಒಂದು ಕ್ಷಣದಲ್ಲಿ ಮಾಯವಾಯಿತು.
ನಶ್ವರ ಹಣದ ಹಿಂದೆ ಓಡಿ ಹೋಗುವುದ ಬಿಟ್ಟ,
ಸಮಾಜವ ಸುಧಾರಿಸಲು ಮತ್ತೆ ಸಂತಾನಗಿ ನಿಂತು.-
ಸೊಗಸಿರುವುದು ನಿಜ ಈ ದಶಕದ ಪಯಣದಲ್ಲಿ,
ಆನಂದವೇ ಇಂದಿಗೂ ಇರುವುದು ನನ್ನಲ್ಲಿ.
ಮದುವೆಯ ಹತ್ತನೇಯ ವಾರ್ಷಿಕೋತ್ಸವದ ದಿನ.. ನನಗೆ ಈ ಸುದಿನ..-
ವಿಶ್ವವೇ ಒಂದು ಮನೆ ಎಂದು ಭಾವಿಸಿದರೆ,
ಭಾರತ ದೇಶ ಆ ಮನೆಯ ಪೂಜಾ ಕೊಠಡಿ.
ಭಾಗವತದ ಮುನ್ನುಡಿ ಈ ನಮ್ಮಯ ನಾಡು,
ದೇಶವ ಮಾತೆ ಎಂದು ಹೆಮ್ಮೆಯಿಂದ ನಾವು ಕರೆವೆವು.
ಅತಿಥಿಯನ್ನು ದೇವರೆಂದು ಆತಿಥ್ಯ ನೀಡಿ,
ಅವಸರ ಬಿದ್ದರೆ ಅವರ ರಕ್ಷಣೆಗೆ ಪ್ರಾಣ ಕೊಡುವೆವು.
ಈ ನಾಡಿನಲ್ಲಿ ಜನಿಸುವುದೇ ಒಂದು ಪುಣ್ಯ,
ವಿಶೇಷ ವಿಸ್ಮಯವ ತರಿಸುವುದು ಇದರ ಇತಿಹಾಸ.
ಭಾರತ ದೇಶದ ಸೈನಿಕ ಯೋಧರಿಗೆ ನಮ್ಮ ನಮನ,
ಗಡಿಯಲ್ಲಿ ನಿತ್ಯವೂ ತೋರಿಹರು ಅವರ ಸಾಹಸ.
-
ದಿನವು ಇಂದಿನದು ಬಹಳ ವಿಶೇಷವಾಗಿದೆ,
ನನ್ನಯ ಮನದರಸಿಯ ಹುಟ್ಟಿನ ಖುಷಿಯಿದೆ.
ಮನದೊಳಗಡೆ ಮೃದುವಾದ ಮುನಿಸು ಕೆಲವು ಸಾರಿ,
ಆ ಮುನಿಸ್ಸಲ್ಲೇ ನನ್ನ ಮನಸ್ಸು ಜಾರುವುದು ಪ್ರತಿ ಸಾರಿ.
ಖುಷಿಯ ಗೊಂಚಲು ಅವಳ ನುಡಿಗಳ ಮೂಟೆ,
ತಲೆಯು ಹಗೂರವಾಗೋದು ಅವುಗಳ ಕೇಳುತ್ತಿದ್ದರೆ.
ಹುಟ್ಟಿನ ದಿನದ ಶುಭಾಶಯ ಅವಳಿಗೆ ನನ್ನ ಪರವಾಗಿ,
ಸಡಗರದ ಸ್ವರಗಳು ತುಂಬಿರಲಿ ಎಂದೂ ಅವಳಲ್ಲಿ.
ಸಾಕ್ಷಾಧಾರ ಇಲ್ಲದೆ ಸಾಧಿಸಬಲ್ಲೆ ನಾ ಈ ಮಾತನ್ನು,
ಏನೂ ಇಲ್ಲ ನಾನು ಅವಳು ಇಲ್ಲದಿರೆ ಇಲ್ಲಿ...!!!???-
ಸಾಹುಕಾರನವನು ಬಡವನು ಇವನು,
ಏನಿದು ಭೇದದ ಭಾವ ನಮ್ಮಲ್ಲಿ.
ಮಾನವ ಜನ್ಮದಲ್ಲಿ ಎಲ್ಲರೂ ಸೋದರರೆ,
ಇಂತಹ ಭಾವವೇಕಿಲ್ಲ ನಮ್ಮ ಜನರಲ್ಲಿ.
ನ್ಯೂನತೆ ಹುಡುಕುತ್ತಾ ಹೋದರೆ ಜಗದೊಳು,
ನಾವೇ ಉತ್ತರ ಅಲ್ಲವೇ ಕೊನೆಯಲ್ಲಿ.
ದೀಪದ ಬೆಳಕನ್ನು ದೀಪದಡಿಗೆ ಕೂಡ ನೀಡು,
ತೋರುವುದು ಸುಂದರ ದೃಷ್ಟಿಯ ಸಾರ.
ಅವೇ ಕಣ್ಣುಗಳಿಂದ ಕಾಣಲು ಪ್ರಯತ್ನಿಸು,
ನಮ್ಮಯ ಗುಣಗಳೇ ನಮ್ಮ ಗುರುತಿಸೋ ಆಗರ.-